ಓಲಾ, ಸಿಂಪಲ್ ಒನ್‌ಗೆ ತೀವ್ರ ಸ್ಪರ್ಧೆ ಒಡ್ಡಲಿರುವ ಏಥರ್: 3ನೇ ಘಟಕ ಸ್ಥಾಪನೆಗೆ ಸಿದ್ಧತೆ
ಓಲಾ (Ola), ಸಿಂಪಲ್ ಎನರ್ಜಿ (Simple Energy) ಮತ್ತು ಟಿವಿಎಸ್(TVS)ನಂತಹ ಮುಖ್ಯವಾಹಿನಿಯ ತಯಾರಕರಂತಹ ಪ್ರಮುಖ ಕಂಪನಿಗಳಿಗೆ ಏಥರ್ ಸ್ಪರ್ಧೆ ನೀಡಲು ಸಜ್ಜಾಗಿದೆ
ಭಾರತದ ಯಶಸ್ವಿ ಎಲೆಕ್ಟ್ರಿಕ್ ವಾಹನ (EV) ಸ್ಟಾರ್ಟ್‌ಅಪ್‌ಗಳಲ್ಲಿ (Start Up_ ಒಂದಾದ ಏಥರ್ (Ather)ಕಂಪನಿಯು ಭಾರತೀಯ ಸ್ಕೂಟರ್ ಮಾರುಕಟ್ಟೆಯನ್ನು ಪರಿಸರ ಸ್ನೇಹಿಯನ್ನಾಗಿ ಮಾಡಲು ಮತ್ತು ಹಸಿರು ಕ್ರಾಂತಿಯ ಭಾಗವಾಗುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ. ಈ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಕೇವಲ ಎಲೆಕ್ಟ್ರಿಕ್ ವಾಹನಗಳನ್ನು(EV) ತಯಾರಿಸಲಿದೆ ಎಂದು ಕಂಪನಿ ತಿಳಿಸಿದೆ. ಆದರೆ ಹೆಚ್ಚು EV ಸ್ಟಾರ್ಟ್‌ಅಪ್‌ಗಳು ಎಲೆಕ್ಟ್ರಿಕ್ ಸ್ಕೂಟರ್ ಮಾರುಕಟ್ಟೆಗೆ ಪ್ರವೇಶಿಸುತ್ತಿರುವುದರಿಂದ, ಮಾರುಕಟ್ಟೆಯಲ್ಲಿ ಅಗ್ಗದ ಮತ್ತು ಕಡಿಮೆ ಗುಣಮಟ್ಟದ ಭಾಗಗಳೊಂದಿಗಿನ ಇವಿಗಳು ಲಭ್ಯವಾಗುತ್ತಿದೆ. ಆದರೆ, ಇದು ಅಪಾಯಕಾರಿ ಎಲೆಕ್ಟ್ರಿಕ್ ಸ್ಕೂಟರ್ ಬೆಂಕಿಯ ನಿದರ್ಶನಗಳಿಗೆ ಕಾರಣವಾಗಿದೆ.
ಆದರೆ, ಏಥರ್ (Ather) ಮೊದಲಿನಿಂದಲೂ ಉತ್ತಮ ಇವಿಗಳನ್ನು ತಯಾರಿಸುವುದರಲ್ಲಿ ಸ್ಥರಿವಾಗಿದೆ. ಅಥರ್ ಎಲೆಕ್ಟ್ರಿಕ್ ಸ್ಕೂಟರ್‌ನ (Electric Scooter) ಹೊಸ ಮೂರನೇ ಘಟಕ ಪ್ರಸ್ತುತ ಭಾರತದಲ್ಲಿ 450X ಮತ್ತು 450 ಪ್ಲಸ್ ಎಂಬ ಎರಡು ಮಾದರಿಗಳನ್ನು ಮಾರಾಟ ಮಾಡುತ್ತಿದೆ. ಇವೆರಡನ್ನೂ ತಮಿಳುನಾಡಿನ (TamilNadu) ಹೊಸೂರಿನಲ್ಲಿರುವ ಏಥರ್‌ನ ಉತ್ಪಾದನಾ ಘಟಕದಲ್ಲಿ ತಯಾರಿಸಲಾಗುತ್ತದೆ. ಇದು ವಾರ್ಷಿಕ 1.2 ಲಕ್ಷ ವಾಹನಗಳ ಉತ್ಪಾದನಾ ಸಾಮರ್ಥ್ಯವನ್ನು ಹೊಂದಿದೆ. ಏಥರ್ ತನ್ನ ಎರಡನೇ ಉತ್ಪಾದನಾ ಘಟಕ ಕೂಡ ಹೊಸೂರಿನಲ್ಲಿಯೇ ಕೆಲಸ ಮಾಡುತ್ತಿದೆ. 2ನೇ ಘಟಕದಲ್ಲಿ ಇನ್ನೂ ಉತ್ಪಾದನೆ ಆರಂಭವಾಗಿಲ್ಲ. ಈ ಎರಡನೇ ಕಾರ್ಖಾನೆಯು ವರ್ಷಕ್ಕೆ 4 ಲಕ್ಷ ವಾಹನಗಳವರೆಗೆ ತೆಗೆದುಕೊಳ್ಳುವ ಸಾಮರ್ಥ್ಯವನ್ನು ಹೊಂದಿದೆ.
ಬೆಂಗಳೂರು ಮೂಲದ ಎಲೆಕ್ಟ್ರಿಕ್ ವೆಹಿಕಲ್ ಕೆಂದ್ರದಲ್ಲಿ ಬೆಂಕಿ
ಓಲಾ (Ola), ಸಿಂಪಲ್ ಎನರ್ಜಿ (Simple Energy) ಮತ್ತು ಟಿವಿಎಸ್(TVS)ನಂತಹ ಮುಖ್ಯವಾಹಿನಿಯ ತಯಾರಕರಂತಹ ಪ್ರಮುಖ ಹೊಸ ಪ್ರವೇಶಗಳೊಂದಿಗೆ ಭಾರತೀಯ ಎಲೆಕ್ಟ್ರಿಕ್ ಸ್ಕೂಟರ್ ಜಾಗದಲ್ಲಿ ಹೆಚ್ಚುತ್ತಿರುವ ಸ್ಪರ್ಧೆಯೊಂದಿಗೆ, ಹೆಚ್ಚಿನ ಉತ್ಪಾದನೆ ಯಾವಾಗಲೂ ಉತ್ತಮವಾಗಿರುತ್ತದೆ ಎಂಬ ಭರವಸೆಯಾಗಿರುತ್ತದೆ.
ಇದಕ್ಕೆ ಜೊತೆಯಾಗಿ, ಬಜಾಜ್‌ನ(Bajaj) ಅಂಗಸಂಸ್ಥೆ ಚೇತಕ್ (ChethaK) ಕೂಡ ಇತ್ತೀಚೆಗೆ ಅಕುರ್ಡಿಯಲ್ಲಿ ತನ್ನ EV ಉತ್ಪಾದನಾ ಸೌಲಭ್ಯವನ್ನು ಉದ್ಘಾಟಿಸಿದೆ. ಆದ್ದರಿಂದ, ಏಥರ್ ತನ್ನ ಉತ್ಪಾದನೆಯನ್ನು ಹೆಚ್ಚಿಸಲು ಕರ್ನಾಟಕ, ತೆಲಂಗಾಣ, ಗುಜರಾತ್, ಮಹಾರಾಷ್ಟ್ರ ಮತ್ತು ಆಂಧ್ರಪ್ರದೇಶದಂತಹ ವಿವಿಧ ರಾಜ್ಯ ಸರ್ಕಾರಗಳೊಂದಿಗೆ ಅಂತಿಮ ಸುತ್ತಿನ ಮಾತುಕತೆಯಲ್ಲಿದೆ ಎಂದು ವರದಿಯಾಗಿದೆ.
ಅಥರ್ ತನ್ನ ಮೂರನೇ ಉತ್ಪಾದನಾ ಸೌಲಭ್ಯಕ್ಕಾಗಿ 100 ಎಕರೆಗಳಷ್ಟು ವಿಸ್ತೀರ್ಣದ ಭೂಮಿ ಹುಡುಕುತ್ತಿದೆ ಎಂಬ ಸುದ್ದಿ ಇದೆ. ಈ ಹೊಸ ಸ್ಥಾವರ ವಾರ್ಷಿಕವಾಗಿ 15 ಲಕ್ಷ ವಾಹನಗಳ ಉತ್ಪಾದನಾ ಸಾಮರ್ಥ್ಯ ಹೊಂದಿದ್ದು, ಅತಿ ದೊಡ್ಡ ಏಥರ್ ಎನರ್ಜಿ ಸ್ಥಾವರವಾಗಿದೆ. EV ಸ್ಟಾರ್ಟ್‌ಅಪ್ ಮುಂದಿನ ತಿಂಗಳ ಅಂತ್ಯದ ವೇಳೆಗೆ ಮೇಲೆ ತಿಳಿಸಿದ ರಾಜ್ಯಗಳಲ್ಲಿ ಸ್ಥಳವನ್ನು ಅಂತಿಮಗೊಳಿಸುವ ನಿರೀಕ್ಷೆಯಿದೆ.
ಏಥರ್ ಎನರ್ಜಿ ಫಂಡ್ ರೈಸಿಂಗ್ ಕ್ಯಾಂಪೇನ್ (Ather energy fund raising campaign) ಏಥರ್ ಆರಂಭಿಕ ಹಂತಗಳಿಂದಲೂ ಹೀರೋ ಮೋಟೋಕಾರ್ಪ್‌ನಿಂದ ಬೆಂಬಲಿತವಾಗಿದೆ. ಹೀರೋ ಮೋಟೋಕಾರ್ಪ್ 2016 ರಿಂದ ಸತತವಾಗಿ ಅಥರ್ ಅನ್ನು ಬೆಂಬಲಿಸುತ್ತಿದೆ ಮತ್ತು ಪ್ರಸ್ತುತ ಏಥರ್ ಎನರ್ಜಿಯಲ್ಲಿ ಶೇ.35ರಷ್ಟು ಪಾಲನ್ನು ಹೊಂದಿದೆ. ಏಥರ್ 2022ರ ಮೇನಲ್ಲಿ ತನ್ನ ಅತ್ಯಧಿಕ ಮಾಸಿಕ ಮಾರಾಟವನ್ನು ದಾಖಲಿಸಿದೆ.
ಏಥರ್ ಎನರ್ಜಿಯಲ್ಲಿ ಹೀರೋ ಮೋಟೋಕಾರ್ಪ್ ಹೂಡಿಕೆ
ಇದರ ಬೆನ್ನಲ್ಲೇ ಏಥರ್ ಎನರ್ಜಿ ತನ್ನ ಸ್ಥಿರ ಬೆಳವಣಿಗೆಯೊಂದಿಗೆ ಬಹಳಷ್ಟು ಹೂಡಿಕೆಯನ್ನು ಆಕರ್ಷಿಸಿದೆ. ಕಳೆದ ತಿಂಗಳು ನ್ಯಾಷನಲ್ ಇನ್ವೆಸ್ಟ್‌ಮೆಂಟ್ ಮತ್ತು ಇನ್‌ಫ್ರಾಸ್ಟ್ರಕ್ಚರ್ ಫಂಡ್ ಲಿಮಿಟೆಡ್‌ನ ಸ್ಟ್ರಾಟೆಜಿಕ್ ಆಪರ್ಚುನಿಟೀಸ್ ಫಂಡ್, ಹೀರೋ ಮೋಟೋಕಾರ್ಪ್ ಮತ್ತು ಇತರ ಕೆಲವು ಹೂಡಿಕೆದಾರರಿಂದ ಸುಮಾರು 990 ಕೋಟಿ ರೂ.ಗಳ ಹೂಡಿಕೆ ಪಡೆದುಕೊಂಡಿದೆ. 32 ನಗರಗಳಲ್ಲಿ 38 ಅನುಭವ ಕೇಂದ್ರಗಳೊಂದಿಗೆ, ಏಥರ್ ಭಾರತದ ಪ್ರಮುಖ ಎಲೆಕ್ಟ್ರಿಕ್ ಸ್ಕೂಟರ್ ತಯಾರಕರಲ್ಲಿ ಒಂದಾಗಿದೆ.