ಎಥರ್ ಎಲೆಕ್ಟ್ರಿಕ್ ಸ್ಕೂಟರ್ ಖರೀದಿ, ಟೆಸ್ಟ್ ರೈಡ್ ಮತ್ತಷ್ಟು ಸುಲಭ; ಬೆಂಗಳೂರಿನಲ್ಲಿ 2ನೇ ಸೆಂಟರ್ ಆರಂಭ!

  • ಬೆಂಗಳೂರಿನಲ್ಲಿ ಎಥರ್ ಎನರ್ಜಿ 2ನೇ ಎಕ್ಸ್‌ಪೀರಿಯನ್ಸ್ ಸೆಂಟರ್ ಆರಂಭ
  • ಎಥರ್  ಮಾಲೀಕರು ಮತ್ತು ಗ್ರಾಹಕರಿಗೆ ಸೇವೆ ಒದಗಿಸುವ 2ನೇ ಸೆಂಟರ್
Ather Energy opens its 2nd Experience Center in Bengaluru ckm

ಬೆಂಗಳೂರು(ಜು.03):  ಭಾರತದ ಮೊದಲ ಇಂಟೆಲಿಜೆಂಟ್ ಎಲೆಕ್ಟ್ರಿಕ್ ಸ್ಕೂಟರ್ ಉತ್ಪಾದಕ ಎಥರ್  ಎನರ್ಜಿ ಬೆಂಗಳೂರಿನ ಗ್ರಾಹಕರ ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸಲು ತನ್ನ ಎರಡನೆಯ ಎಕ್ಸ್‌ಪೀರಿಯನ್ಸ್ ಸೆಂಟರ್-ಎಥರ್  ಸ್ಪೇಸ್  ಉದ್ಘಾಟಿಸಿದೆ.  ಜೆಪಿ ನಗರದಲ್ಲಿರುವ ಈ ಸೆಂಟರ್ ಎಥರ್  450x, ಎಥರ್ 450 ಪ್ಲಸ್‌ನೊಂದಿಗೆ ಎಥರ್ ಸ್ಪೇಸ್‌ನಲ್ಲಿ ಟೆಸ್ಟ್ ರೈಡ್ ಮತ್ತು ಕೊಳ್ಳಲು ಲಭ್ಯವಿದೆ.

ಬೆಂಗಳೂರಿನ ಏದರ್ 450 X ಸ್ಕೂಟರ್ ದೆಹಲಿಯಲ್ಲಿ ವಿತರಣೆ ಆರಂಭ

ಎಥರ್  ಎನರ್ಜಿ ಜನವರಿ 2021ರಿಂದ  ಸುಮಾರು 30 ಪಟ್ಟು ಬೇಡಿಕೆಯಲ್ಲಿ ಹೆಚ್ಚಳ ಕಂಡಿದೆ.  ಎಥರ್  ಎನರ್ಜಿ ಮಾರುಕಟ್ಟೆಗೆ ಬಿಡುಗಡೆಯ ಮುನ್ನವೇ ಚಾರ್ಜಿಂಗ್ ಮೂಲಸೌಕರ್ಯ ನಿರ್ಮಿಸಲು  ಹೂಡಿಕೆ ಮಾಡುತ್ತಿರುವ ಕೆಲವೇ IOMಗಳಲ್ಲಿ ಒಂದಾಗಿದೆ. ಕಂಪನಿಯು ಈಗಾಗಲೇ 33 ಫಾಸ್ಟ್ ಚಾರ್ಜಿಂಗ್ ತಾಣಗಳಾದ ಎಥರ್  ಗ್ರಿಡ್ ಅನ್ನು ವೈಟ್‌ಫೀಲ್ಡ್, ಇಂದಿರಾನಗರ, ಜಯನಗರ, ಜೆಪಿ ನಗರ ಇತ್ಯಾದಿ ಕಡೆಗಳಲ್ಲಿ ಹೊಂದಿದೆ. ಎಥರ್  ಎನರ್ಜಿಯಿಂದ 22 ನಗರಗಳಲ್ಲಿ 142 ಚಾರ್ಜಿಂಗ್ ಪಾಯಿಂಟ್‌ಗಳನ್ನು ಪ್ರಾರಂಭಿಸಲಾಗಿದ್ದು ಭಾರತದಲ್ಲಿ ಇವಿ ವಾಹನ ಮಾಲೀಕರಿಗೆ ಸುಲಭ ಮತ್ತು ವೇಗದ ಚಾರ್ಜಿಂಗ್ ಸಾಧ್ಯವಾಗಿಸುತ್ತದೆ. ಎಥರ್  ಎನರ್ಜಿ ಗ್ರಾಹಕರಿಗೆ ಅವರ ಹೋಮ್ ಚಾರ್ಜರ್‌ಗಳನ್ನು ಪ್ರಾರಂಭಿಸಲು ಕೂಡಾ ನೆರವಾಗುತ್ತದೆ ಮತ್ತು ನಗರದ993 ಅಪಾರ್ಟ್ಮೆಂಟ್ ಸಂಕೀರ್ಣಗಳಲ್ಲಿ ಕಳೆದ3 ವರ್ಷಗಳಲ್ಲಿ ಹೋಮ್ ಚಾರ್ಜರ್‌ಗಳನ್ನು ಅಳವಡಿಸಿದೆ.

ಕಳೆದ ಕೆಲ ವಾರಗಳಲ್ಲಿ ಫೇಮ್ 2 ರಿವಿಷನ್‌ಗಳಿಂದ ಶೇ.50ರಷ್ಟು ಸಬ್ಸಿಡಿ ಹೆಚ್ಚಳದಿಂದ ಎಲ್ಲ ವಿದ್ಯುತ್‌ಚಾಲಿತ ದ್ವಿಚಕ್ರ ವಾಹನಗಳ ಬೆಲೆಗಳನ್ನು ಮತ್ತಷ್ಟು ಕಡಿಮೆ ಮಾಡಿದೆ. ಕರ್ನಾಟಕ ಸರ್ಕಾರವು ವಿದ್ಯುಚ್ಛಾಲಿತ ದ್ವಿಚಕ್ರ ವಾಹನಗಳಿಗೆ ನೋಂದಣಿ ಶುಲ್ಕ ಮತ್ತು ರಸ್ತೆ ತೆರಿಗೆಯನ್ನು ಮನ್ನಾ ಮಾಡಿದೆ. ಬೆಂಗಳೂರಿನಲ್ಲಿ ಎಥರ್ 450x ಹೊಸ ಎಕ್ಸ್-ಶೋರೂಂ ದರ ರೂ 1,44,500 ಮತ್ತು ಎಥರ್  450ಗೆ ರೂ1, 25,490 ಆಗಿದೆ. 

ಎಥರ್  450X 
ಎಥರ್  450X ತನ್ನ ವಿಭಾಗದಲ್ಲಿ ಅತ್ಯಂತ ತ್ವರಿತ ಮತ್ತು ಸ್ಮಾರ್ಟ್ ಸ್ಕೂಟರ್‌ಗಳಲ್ಲಿ ಒಂದಾಗಿದ್ದು ನಾಲ್ಕು ಬಣ್ಣಗಳು- ಕಂದು, ಹಸಿರು ಮತ್ತು ಬಿಳಿಯೊಂದಿಗೆ ಸೀಮಿತ ಆವೃತ್ತಿಯ ಸೀರೀಸ್ 1 ಇವೆ. ಈ ಸ್ಕೂಟರ್ 9KV PMSA ಮೋಟಾರ್‌ನಿಂದ ಸನ್ನದ್ಧವಾಗಿದ್ದು 2.9 KW UH ಲಿಥಿಯಂ-ಅಯಾನ್ ಬ್ಯಾಟರಿ ಹೊಂದಿದೆ. 4 ರೈಡಿಂಗ್ ಮೋಡ್‌ಗಳಾದ ಇಕೊ, ರೈಡ್ ಮತ್ತು ಸ್ಪೋರ್ಟ್‌ನೊಂದಿಗೆ ಎಥರ್ ಎನರ್ಜಿ ಹೊಸ ಹೈ ಪರ್ಫಾರ್ಮೆನ್ಸ್ ಮೋಡ್ ಪರಿಚಯಿಸಿದೆ,  `ವಾರ್ಪ್’ ಎಥರ್  450X ವಾರ್ಪ್ ಮೋಡ್‌ನಲ್ಲಿ ಕೇವಲ3.3 ಸೆಕೆಂಡಿನಲ್ಲಿ0-40 ಕಿ.ಮೀ ವೇಗ ಪಡೆದುಕೊಳ್ಳಲಿದೆ. ಎಥರ್  450X ಪ್ರತಿ ನಿಮಿಷಕ್ಕೆ 1.5ಕಿ.ಮೀ. ಚಾರ್ಜ್ ಮಾಡಬಲ್ಲದು,  ಈ ಮೂಲಕ ಅತ್ಯಂತ ತ್ವರಿತ ಚಾರ್ಜಿಂಗ್ ರೇಟ್ ಹೊಂದಿದೆ.

Latest Videos
Follow Us:
Download App:
  • android
  • ios