Bajaj Sales ಬಜಾಜ್ ಆಟೋ ದೇಶಿ ಮಾರಾಟ ಶೇ.22 ರಷ್ಟು ಕುಸಿತ, ರಫ್ತು ಏರಿಕೆ!
- ಬಜಾಜ್ ದ್ವಿಚಕ್ರ ವಾಹನ ಮಾರಾಟದಲ್ಲಿ ಕುಸಿತ
- ಪಲ್ಸರ್, ಪ್ಲಾಟಿನಾ, ಸಿಟಿ , ಡೊಮಿನಾರ್ ಮಾರಾಟ ಕುಸಿತ
- ಮಾರ್ಚ್ ತಿಂಗಳ ಆಟೋ ವರದಿ ಬಹಿರಂಗ
ಬಜಾಜ್ ಆಟೋ (Bajaj Auto) 2022ರ ಮಾರ್ಚ್ ತಿಂಗಳ ದೇಶೀಯ ಮಾರಾಟದಲ್ಲಿ ಭಾರಿ ಕುಸಿತವನ್ನು ವರದಿ ಮಾಡಿದೆ. ಬಜಾಜ್ ಆಟೋ ಮೋಟಾರ್ಸೈಕಲ್ ಪಲ್ಸರ್ (Pulsar), ಪ್ಲಾಟಿನಾ (Platina), ಸಿಟಿ (CT), ಡೊಮಿನಾರ್ (Dominor), ಅವೆಂಜರ್ (Avenger)ಇತ್ಯಾದಿಗಳನ್ನು ಒಳಗೊಂಡಿದೆ. ಇದು ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ (Chethak electric scooter) ಅನ್ನು ಕೂಡ ಮಾರುಕಟ್ಟೆಗೆ ಪರಿಚಯಿಸಿದೆ.
ಬಜಾಜ್ ಆಟೋ ಲಿಮಿಟೆಡ್ ಕಳೆದ ತಿಂಗಳಿನಲ್ಲಿ ತನ್ನ ದ್ವಿಚಕ್ರ ವಾಹನ ಮಾರಾಟದಲ್ಲಿ ಕುಸಿತ ಕಂಡಿದೆ. 2021ರ ಮಾರ್ಚ್ನಲ್ಲಿ 3,30,133 ದ್ವಿಚಕ್ರ ವಾಹನಗಳು ಮಾರಾಟವಾಗಿದ್ದರೆ, ಈ ವರ್ಷ ಅದು 2,56,324ಕ್ಕೆ ಕುಸಿದಿದೆ. ಅಂದರೆ, ಶೇ.22ರಷ್ಟು ಮಾರಾಟ ಇಳಿಕೆಯಾಗಿದೆ. ದೇಶೀಯ ಮಾರಾಟ ಕೂಡ ಕಳೆದ ವರ್ಷ ಇದೇ ತಿಂಗಳಿನ 1,81,393 ವಾಹನಗಳಿಗೆ ಹೋಲಿಸಿದರೆ, ಈ ಬಾರಿ 1,07,081 ಕ್ಕೆ ಇಳಿದಿದೆ. ಅಂದರೆ, ಶೇ.41ರಷ್ಟು ಇಳಿಕೆಯಾಗಿದೆ.
ಬಜಾಜ್ ಟೂ ವೀಲರ್ ಮಾರಾಟ 2022ರ ಮಾರ್ಚ್ ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದು, ಕಳೆದ ತಿಂಗಳಲ್ಲಿ 40,864 ವಾಹನಗಳು ಮಾರಾಟವಾಗಿವೆ. ಹಿಂದಿನ ವರ್ಷದ ಈ ಅವಧಿಯ ಮಾರಾಟ 39,315 ರಷ್ಟಿತ್ತು. ಅಂದರೆ, ಕಂಪನಿ ಶೇ.15ರಷ್ಟು ಬೆಳವಣಿಗೆ ದಾಖಲಿಸಿದೆ. ಮತ್ತೊಂದೆಡೆ ರಫ್ತುಗಳು ಶೇ. 4 ರಷ್ಟು ಕುಸಿದು 22,152 (2021) ವಾಹನಗಳಿಂದ 21,193 ವಾಹನಗಳಿಗೆ ಇಳಿದಿದೆ.
ದ್ವಿಚಕ್ರ ವಾಹನ(1,26,752) ಮತ್ತು ವಾಣಿಜ್ಯ ವಾಹನಗಳು(1,70,436 ) ಮಾರಾಟ 2022 ರ ಮಾರ್ಚ್ನಲ್ಲಿ ಶೇ.20ರಷ್ಟು ಕುಸಿದಿದ್ದರೆ ಮತ್ತೊಮ್ಮೆ ದೇಶೀಯ ಮಾರಾಟ ಶೇ. 36ರಷ್ಟು ಕುಸಿದಿದೆ. ಆದರೆ ರಫ್ತುಗಳು ಸಮತೋಲನ ಕಾಯ್ದುಕೊಂಡಿವೆ.
ಒಂದೊಂದು ರೂಪಾಯಿ ನಾಣ್ಯ ಕೂಡಿಟ್ಟು 2.6 ಲಕ್ಷ ರೂ ಕನಸಿನ ಬೈಕ್ ಖರೀದಿಸಿದ ಯುವಕ!
ಬಜಾಜ್ ಆಟೋ ಮಾರಾಟ ವರ್ಷದಿಂದ ವರ್ಷಕ್ಕೆ ಶೇ.8ರಷ್ಟು ಏರಿಕೆಯಾಗಿದೆ. ದ್ವಿಚಕ್ರ ವಾಹನಗಳ ದೇಶೀಯ ಮಾರಾಟವು 2021ರ ಏಪ್ರಿಲ್ ನಿಂದ ಮಾರ್ಚ್ ಅವಧಿಯಲ್ಲಿ ಶೇ.9ರಷ್ಟು ಕುಸಿದಿದೆ. ಆದರೆ, ರಫ್ತು ಮಾತ್ರ ಇದೇ ಅವಧಿಯಲ್ಲಿ ಶೇ.22ರಷ್ಟು ಏರಿಕೆಯಾಗಿವೆ. ವಾಣಿಜ್ಯ ವಾಹನಗಳ ಮಾರಾಟ ದೇಶೀಯ ಮತ್ತು ರಫ್ತು ಎರಡರಲ್ಲೂ ಉತ್ತಮ ಪ್ರದರ್ಶನ ನೀಡಿದೆ. ದೇಶೀಯ ಮಾರಾಟವು ಶೇ.47ರಷ್ಟು ಏರಿಕೆಯಾಘಿದ್ದರೆ, ರಫ್ತು ಶೇ.21ರಷ್ಟು ಹೆಚ್ಚಳ ದಾಖಲಿಸಿದೆ. ಅಂದರೆ, ಕಳೆದ ವರ್ಷದ ಮಾರ್ಚ್ಗೆ ಹೋಲಿಸಿದರೆ ರಫ್ತು ಪ್ರಮಾಣ 3,10,854 ಗೆ ತಲುಪಿದೆ. 2021ರ ಮಾರ್ಚ್ನಲ್ಲಿ ಇದು 2,57,729 ರಷ್ಟಿತ್ತು. ಸಿವಿಗಳ ಒಟ್ಟು ಮಾರಾಟವು 4,71,577 ವಾಹನಗಳಷ್ಟಿದ್ದು, 2021ರಲ್ಲಿ ಇದು 3,67,021ರಷ್ಟಿತ್ತು. ಇದರಿಂದ ಒಟ್ಟು ಶೇ.28ರಷ್ಟು ಮಾರಾಟದ ಹೆಚ್ಚಳ ದಾಖಲಾಗಿದೆ. ವರ್ಷದಿಂದ ವರ್ಷಕ್ಕೆ ಬಜಾಜ್ ಆಟೋ ಸೇಲ್ಸ್ ದ್ವಿಚಕ್ರ ವಾಹನ ಮತ್ತು CV ದೇಶೀಯ ಮಾರಾಟ ಶೇ.6ರಷ್ಟು ಕುಸಿತ ಕಂಡಿದೆ. ಎಂದು ಕಂಪನಿಯ ಪ್ರಕಟಣೆ ತಿಳಿಸಿದೆ.
ಹೊಸ 6 ನಗರ ಸೇರಿದಂತೆ 20 ನಗರಗಳಲ್ಲಿ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ ಲಭ್ಯ, 2,000 ರೂಗೆ ಬುಕಿಂಗ್!
ಬಜಾಜ್ ಆಟೋ ಲಿಮಿಟೆಡ್ ಮುಂಬರುವ ವರ್ಷಗಳಲ್ಲಿ ಮಹತ್ವಾಕಾಂಕ್ಷೆಯ ಯೋಜನೆಗಳನ್ನು ಹೊಂದಿದೆ. ವಿಶೇಷವಾಗಿ ಎಲೆಕ್ಟ್ರಿಕ್ ವಾಹನ ವಲಯದಲ್ಲಿ ಹೊಸ ಆವಿಷ್ಕಾರಗಳನ್ನು ನಿರೀಕ್ಷಿಸಲಾಗುತ್ತಿದೆ. ಕಂಪನಿಯು ತನ್ನ ಎಲೆಕ್ಟ್ರಿಕ್ ಸ್ಕೂಟರ್ ಶ್ರೇಣಿಯನ್ನು ಚೇತಕ್ ಉಪ-ಬ್ರಾಂಡ್ನ ಅಡಿಯಲ್ಲಿ ವಿಸ್ತರಿಸಲು ಪ್ರಯತ್ನಿಸುತ್ತಿದೆ ಮತ್ತು ಮುಂದಿನ 3-5 ವರ್ಷಗಳಲ್ಲಿ ಪ್ರತಿ ವರ್ಷ ಹೊಸ EV ಅನ್ನು ಪರಿಚಯಿಸಲಾಗುತ್ತದೆ ಎಂದು ಕಂಪನಿ ತಿಳಿಸಿದೆ.
ಬಜಾಜ್ ವರ್ಷಕ್ಕೆ 5 ಲಕ್ಷ ಎಲೆಕ್ಟ್ರಿಕ್ ವಾಹನಗಳನ್ನು ಹೊರತರಲು 300 ಕೋಟಿ ರೂಪಾಯಿಗಳ ಹೂಡಿಕೆ ಮಾಡಲು ಮುಂದಾಗಿದೆ. 2022-23ರ ಆರ್ಥಿಕ ವರ್ಷದಲ್ಲಿ 50,000 ಎಲೆಕ್ಟ್ರಿಕ್ ವಾಹನಗಳನ್ನು ಹೊರತರಲು ಕಂಪನಿಯು ಸಿದ್ಧತೆ ನಡೆಸಿದೆ. ಪ್ರಸ್ತುತ ಹಣಕಾಸು ವರ್ಷದಲ್ಲಿ ಕೇವಲ 8,000 ವಾಹನಗಳು ಮಾರುಕಟ್ಟೆಗೆ ಬರಲಿವೆ. ಬಜಾಜ್ ಆಟೋ ಲಿಮಿಟೆಡ್ ಬೆಂಗಳೂರು ಮೂಲದ ಅರ್ಬನ್ ಮೊಬಿಲಿಟಿ ಸ್ಟಾರ್ಟ್ಅಪ್ ಯುಲು ಜೊತೆಗೂಡಿ ಉತ್ಪನ್ನಗಳನ್ನು ಅಭಿವೃದ್ಧಿಪಡಿಸುತ್ತಿದೆ.