161ಕಿ.ಮಿ ಮೈಲೇಜ್, ಹೊಸ ಎಥರ್ 450 ಎಲೆಕ್ಟ್ರಿಕ್ ಸ್ಕೂಟರ್ ಲಾಂಚ್, ಬೆಲೆ ಎಷ್ಟು?

2025ರ ಆರಂಭದಲ್ಲಿ ಬೆಂಗಳೂರಿನ ಏಥರ್ ಇದೀಗ ಹೊಚ್ಚ ಹೊಸ ಏಥರ್  450 ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಮಾಡಿದೆ. ಮ್ಯಾಜಿಕ್ ಟ್ವಿಸ್ಟ್ ಫೀಚರ್, ಗರಿಷ್ಠ ಮೈಲೇಜ್ ಸೇರಿದಂತೆ ಹಲವು ವಿಶೇಷತೆಗಳು ಇದರಲ್ಲಿದೆ. ಇದರ ಬೆಲೆ ಹಾಗೂ ಇತರ ಮಾಹಿತಿ ಇಲ್ಲಿದೆ.

Ather Energy launch 2025 ather 450 electric scooter with advance tech

ಬೆಂಗಳೂರು(ಜ.10): ಏಥರ್ ಎನರ್ಜಿ ಲಿಮಿಟೆಡ್ ಇದೀಗ 2025ರ ಹೊಚ್ಚ ಹೊಸ ಏಥರ್ 450X ಹಾಗೂ ಎಥರ್ 450 ಅಪೆಕ್ಸ್ ಸ್ಕೂಟರ್ ಬಿಡುಗಡೆ ಮಾಡಿದೆ. ಹೆಚ್ಚಿನ ಸುರಕ್ಷತೆ, ಗರಿಷ್ಠ ಮೈಲೇಜ್ ರೇಂಜ್, ಮಲ್ಟಿ ಮೋಡ್ ಟ್ರಾಕ್ಷನ್ ಕಂಟ್ರೋಲ್ ಸೇರಿದಂತೆ ಹಲವು ವಿಶೇಷೆತಗಳ ಸ್ಕೂಟರ್ ಇದಾಗಿದೆ. ವಿಶೇಷವಾಗಿ ನಗರದ ಟ್ರಾಫಿಕ್‌ನಲ್ಲಿ ಯಾವುದೇ ಸಮಸ್ಸೆಯಾಗದಂತೆ ರೈಡ್ ಮಾಡುವಂತೆ ಮ್ಯಾಜಿಕ್ ಟ್ವಿಸ್ಟ್ ಫೀಚರ್ ಕೂಡ ಈ ಸ್ಕೂಟರ್‌ನಲ್ಲಿ ನೀಡಲಾಗಿದೆ.  

ಹೊಚ್ಚ ಹೊಸ ಏಥರ್ 450ಎಕ್ಸ್ 3.7kWh (ಐಡಿಸಿ ರೇಂಜ್ 161 ಕಿಮೀಗಳು) ಮತ್ತು 450 ಅಪೆಕ್ಸ್ (ಐಡಿಸಿ ರೇಂಜ್ 157 ಕಿಮೀಗಳು) ಸ್ಕೂಟರ್ ಗಳು 130 ಕಿಮೀವರೆಗಿನ ಟ್ರೂ ರೇಂಜ್ ಅನ್ನು ಒದಗಿಸುತ್ತವೆ. 450ಎಕ್ಸ್ 2.9 kWh (ಐಡಿಸಿ ರೇಂಜ್ 126 ಕಿಮೀ ಗಳು) ಮತ್ತು ಏಥರ್ 450ಎಸ್ (ಐಡಿಸಿ ರೇಂಜ್ 122 ಕಿಮೀ ಗಳು) ಸಹ ಈಗ 105 ಕಿಮೀಗಳವರೆಗಿನ ಟ್ರೂ ರೇಂಜ್ ಒದಗಿಸುತ್ತವೆ.

ಹೊಚ್ಚ ಹೊಸ ಏಥರ್ Rizta ಎಲೆಕ್ಟ್ರಿಕ್ ಸ್ಕೂಟರ್‌ಗೆ ಇಯರ್ ಎಂಡ್ ಡಿಸ್ಕೌಂಟ್ ಆಫರ್!

ಈ ಹಿಂದೆ 450 ಅಪೆಕ್ಸ್ ಮತ್ತು ನಂತರ ರಿಝ್ತಾ ಝಡ್ ನಲ್ಲಿ ಪರಿಚಯಿಸಲಾಗಿದ್ದ ಮ್ಯಾಜಿಕ್ ಟ್ವಿಸ್ಟ್ ಫೀಚರ್ ಅನ್ನು 2025 450ಎಕ್ಸ್ ನಲ್ಲಿಯೂ ಒದಗಿಸಲಾಗಿದೆ. ಮ್ಯಾಜಿಕ್ ಟ್ವಿಸ್ಟ್ ಫೀಚರ್ ಅನ್ನು ರೈಡರ್ ಅನುಕೂಲಕ್ಕಾಗಿ ಮತ್ತು ಹೆಚ್ಚಿನ ನಿಯಂತ್ರಣವನ್ನು ಒದಗಿಸಲು ವಿನ್ಯಾಸಗೊಳಿಸಲಾಗಿದೆ. ಮ್ಯಾಜಿಕ್ ಟ್ವಿಸ್ಟ್ ಫೀಚರ್ ಥ್ರೋಟಲ್ ಮೂಲಕವೇ ವೇಗವನ್ನು ಕಡಿಮೆ ಮಾಡಲು ಅನುವು ಮಾಡಿಕೊಡುತ್ತದೆ. ಮ್ಯಾಜಿಕ್ ಟ್ವಿಸ್ಟ್ ಫೀಚರ್ ಸ್ಕೂಟರ್ ನಲ್ಲಿ ಚಾರ್ಜ್ ಎಷ್ಟೇ ಇದ್ದರೂ ಯಾವುದೇ ಚಾರ್ಜ್ ಹಂತಗಳಲ್ಲಿಯೂ ಥ್ರೋಟಲ್ ಮಾಡಿದಾಗ ವೇಗ ಹೆಚ್ಚಿಸುತ್ತದೆ ಮತ್ತು ಹಿಮ್ಮುಖವಾಗಿ ತಿರುಗಿಸಿದಾಗ ವೇಗ ಕಡಿಮೆಯಾಗುತ್ತದೆ. ಈ ಮೂಲಕ ಸಾಂಪ್ರದಾಯಿಕ ರೀಜನರೇಟಿವ್ ಬ್ರೇಕಿಂಗ್‌ ವಿಚಾರದಲ್ಲಿ ಅಭಿವೃದ್ಧಿ ಸಾಧಿಸಲಾಗಿದ್ದು, ಇದನ್ನು ಬಳಸಿಕೊಂಡು ಸ್ಕೂಟರ್ ಅನ್ನು ಸಂಪೂರ್ಣ ನಿಲುಗಡೆಗೆ ತರಲು ಕೂಡ ಸಾಧ್ಯವಾಗುತ್ತದೆ ಮತ್ತು ಶೇ.100 ಬ್ಯಾಟರಿ ಚಾರ್ಜ್‌ ಇದ್ದಾಗಲೂ ಕಾರ್ಯನಿರ್ವಹಿಸುತ್ತದೆ.

2025 ಏಥರ್ 450 ಸ್ಕೂಟರ್ ಏಥರ್ ಸ್ಟಾಕ್ 6ನಿಂದ ಚಾಲಿತವಾಗಿದ್ದು, ಇದು ಏಥರ್ ನ ಸಾಫ್ಟ್‌ ವೇರ್ ಎಂಜಿನ್‌ ನ ಹೊಸ ಆವೃತ್ತಿಯಾಗಿದೆ. ಈ ವ್ಯವಸ್ಥೆಯು ಗೂಗಲ್ ಮ್ಯಾಪ್ಸ್, ಅಲೆಕ್ಸಾ, ಡ್ಯಾಶ್‌ ಬೋರ್ಡ್‌ನಲ್ಲಿ ವಾಟ್ಸಪ್ ನೋಟಿಫಿಕೇಷನ್ ನಂತಹ ಫೀಚರ್ ಗಳನ್ನು ನೀಡುತ್ತದೆ. ಈ ಮೂಲಕ ರೈಡರ್ ತನ್ನ ಸ್ಮಾರ್ಟ್ ಫೋನ್ ಅನ್ನು ಜೇಬಿನಿಂದ ತೆಗೆಯದೆಯೇ ಸಂದೇಶಗಳನ್ನು ತಿಳಿಯಲು ಅನುವು ಮಾಡಿಕೊಡುತ್ತದೆ. ಒಂದು ವೇಳೆ ಸ್ಥಳದಲ್ಲಿ ಸಿಕ್ಕಾಪಟ್ಟೆ ಸ್ಕೂಟರ್ ಗಳು ನಿಂತಿದ್ದು, ಪತ್ತೆ ಹಚ್ಚುವುದು ಕಷ್ಟವಾದಾಗ “ಪಿಂಗ್ ಮೈ ಸ್ಕೂಟರ್” ಫೀಚರ್ ಬಳಸುವ ಮೂಲಕ ಸವಾರರು ತಮ್ಮ ಸ್ಕೂಟರ್‌ ಗಳನ್ನು ಧ್ವನಿ ಮತ್ತು ದೃಶ್ಯ ಸೂಚನೆಗಳು ಮತ್ತು ಲೈವ್ ಲೊಕೇಷನ್ ಹಂಚಿಕೆಯ ನೆರವಿನಿಂದ ಸುಲಭವಾಗಿ ಪತ್ತೆ ಮಾಡಬಹುದು.

ಏಥರ್ ಪ್ರಸ್ತುತ ಏಥರ್ 450 ಮತ್ತು ಏಥರ್ ರಿಝ್ತಾ ಎಂಬ ಎರಡು ಉತ್ಪನ್ನ ಶ್ರೇಣಿಗಳನ್ನು ಹೊಂದಿದೆ. 450 ಶ್ರೇಣಿಯಲ್ಲಿ 450ಎಕ್ಸ್, 450ಎಸ್ ಮತ್ತು 450 ಅಪೆಕ್ಸ್ ಅನ್ನು ಒಳಗೊಂಡಿದ್ದು, ಏಥರ್ ರಿಝ್ತಾ ಶ್ರೇಣಿಯಲ್ಲಿ 2024 ರಲ್ಲಿ ಬಿಡುಗಡೆಯಾದ ರಿಝ್ತಾ ಝಡ್ ಮತ್ತು ರಿಝ್ತಾ ಎಸ್ ಅನ್ನು ಒಳಗೊಂಡಿದೆ. ಏಥರ್ ರಿಝ್ತಾ ಏಥರ್‌ ನ ಅನುಕೂಲಕರ ಸ್ಕೂಟರ್ ಆಗಿದೆ. 2025 450 ಶ್ರೇಣಿಯು ಹೊಸ ಏಯ್ಟ್70 ವಾರರಂಟಿ ಹೊಂದಿದ್ದು, ಇದರಲ್ಲಿ 8 ವರ್ಷಗಳವರೆಗೆ ಅಥವಾ 80,000 ಕಿಮೀ ವರೆಗೆ ಇದರಲ್ಲಿ ಯಾವುದು ಮೊದಲು ಬರುತ್ತದೆಯೋ ಅಲ್ಲಿಯವರೆಗೆ ವಾರಂಟಿ ಒದಗಿಸಲಾಗುತ್ತದೆ ಮತ್ತು 8 ವರ್ಷಗಳವರೆಗೆ ಶೇ.70 ಬ್ಯಾಟರಿ ಹೆಲ್ತ್ ಅಶೂರೆನ್ಸ್ ನೀಡಲಾಗುತ್ತದೆ.

EV ಬೈಕ್‌ಗಳ ಮಾರಾಟದಲ್ಲಿ ದಾಖಲೆ ಬರೆದ ಭಾರತ; ಮಹಾರಾಷ್ಟ್ರ ಫಸ್ಟ್, ಕರ್ನಾಟಕಕ್ಕೆ ಎಷ್ಟನೇ ಸ್ಥಾನ?

ಏಥರ್ ಈಗ 2025 ಏಥರ್ 450 ಸ್ಕೂಟರ್ ನಲ್ಲಿ ಹೆಚ್ಚು ಪ್ರಯೋಜನಗಳನ್ನು ನೀಡುತ್ತಿದೆ. 450ಎಕ್ಸ್ 2.9 kWh ಅನ್ನು ಈಗ ಏಥರ್ ಡ್ಯುಯೊ ಜೊತೆಗೆ ಸಂಯೋಜಿಸಲಾಗಿದ್ದು, ಈ ಮೂಲಕ 0-ಶೇ.80 ವರೆಗಿನ ಚಾರ್ಜಿಂಗ್ ಸಮಯವನ್ನು 3 ಗಂಟೆಗಳಿಗೆ ಇಳಿಸಲಾಗಿದೆ. ಏಥರ್‌ ನ ಸ್ಮಾರ್ಟ್ ಹೆಲ್ಮೆಟ್ - ಹ್ಯಾಲೋ ಈಗ 450 ಅಪೆಕ್ಸ್‌ ನೊಂದಿಗೆ ಲಭ್ಯವಾಗುತ್ತದೆ. 2025 ಏಥರ್ 450ಎಸ್ ಬೆಲೆ ₹1,29,999 (ಎಕ್ಸ್ ಶೋ ರೂಂ ಬೆಂಗಳೂರು). 2.9 kWh ಬ್ಯಾಟರಿಯ 2025 ಏಥರ್ 450ಎಕ್ಸ್ ಬೆಲೆ ₹1,46,999 (ಎಕ್ಸ್ ಶೋ ರೂಂ ಬೆಂಗಳೂರು) ಮತ್ತು 3.7 kWh ಬ್ಯಾಟರಿಯ 2025 ಏಥರ್ 450ಎಕ್ಸ್ ನ ಆರಂಭಿಕ ಬೆಲೆ ₹1,56,999 (ಎಕ್ಸ್ ಶೋ ರೂಂ ಬೆಂಗಳೂರು). 450 ಅಪೆಕ್ಸ್ ಈಗ ₹1,99,999 (ಎಕ್ಸ್ ಶೋ ರೂಂ ಬೆಂಗಳೂರು, ಪ್ರೊ ಪ್ಯಾಕ್ ಒಳಗೊಂಡು) ಬೆಲೆಯಲ್ಲಿ ದೊರೆಯುತ್ತದೆ.
 

Latest Videos
Follow Us:
Download App:
  • android
  • ios