Asianet Suvarna News Asianet Suvarna News

ಹಬ್ಬದ ಸಂಬ್ರಮದಲ್ಲಿ ಕೈಗೆಟುಕವ ಬೆಲೆಯ ಹೀರೋ ಪ್ಲೆಷರ್+ XTec ಸ್ಕೂಟರ್ ಬಿಡುಗಡೆ!

  • ಆಕರ್ಷಕ ವಿನ್ಯಾಸದಲ್ಲಿ ಹೀರೋ ಪ್ಲೆಷರ್+ XTec ಸ್ಕೂಟರ್
  • ಬ್ಲೂಟೂತ್ , ನ್ಯಾವಿಗೇಶನ್ ಸೇರಿದಂತೆ ಹತ್ತು ಹಲವು ಕೆನೆಕ್ಟಿವಿಟಿ
  • i3S ಪೇಟೆಂಟ್ ತಂತ್ರಜ್ಞಾನ ಹೊಂದಿರುವ ನೂತನ ಸ್ಕೂಟರ್
  • ಕೈಗೆಟುವಕ ಬೆಲೆಯಲ್ಲಿ ನೂತನ ಸ್ಕೂಟರ್ ಬಿಡುಗಡೆ
Hero Motorcorp launches new conected pleasure pluse XTEC scooter in India ckm
Author
Bengaluru, First Published Oct 12, 2021, 8:20 PM IST
  • Facebook
  • Twitter
  • Whatsapp

ಬೆಂಗಳೂರು(ಅ.12): ಹಬ್ಬದ ಸಂಭ್ರಮ ಡಬಲ್ ಮಾಡಲು ಹೀರೋ ಹೆಚ್ಚುವರಿ ಫೀಚರ್ಸ್, ಅತ್ಯಾಧುನಿಕ ತಂತ್ರಜ್ಞಾನ ಹಾಗೂ ಹೆಚ್ಚು ಶಕ್ತಿಯುತ ಎಂಜಿನ್ ಹೊಂದಿರುವ ಹೀರೋ ಪ್ಲೆಶರ್+ ' XTec ಸ್ಕೂಟರ್ ಬಿಡುಗಡೆ ಮಾಡಿದೆ.   ಪ್ಲೆಷರ್+ XTec ಐಕಾನಿಕ್ ಪ್ಲೆಶರ್ ಬ್ರಾಂಡ್‍ನ ಆಕರ್ಷಣೆಯನ್ನು ಹೆಚ್ಚಿಸಿದೆ . ಹೊಸ ಎಲ್‍ಇಡಿ ಪ್ರೊಜೆಕ್ಟರ್ ಹೆಡ್ ಲ್ಯಾಂಪ್- 110 ಸಿಸಿ ವಿಭಾಗದಲ್ಲಿ ಮೊದಲ ವೈಶಿಷ್ಟ್ಯತೆ- ವರ್ಧಿತ ಸೌಂದರ್ಯ ಮತ್ತು ಜುಬಿಲಿಯಂಟ್ ಹಳದಿಯ ಹೊಸ ರೋಮಾಂಚಕ ಬಣ್ಣವು ಸ್ಕೂಟರ್ ಗೆ ಹೊಸ ಆಕರ್ಷಣೆಯನ್ನು ನೀಡುತ್ತದೆ.

ಕಡಿಮೆ ಬೆಲೆ, ಅತ್ಯಾಧುನಿಕ ತಂತ್ರಜ್ಞಾನದ ಗ್ಲಾಮರ್ XTEC ಬೈಕ್ ಪರಿಚಯಿಸಿದ ಹೀರೋ!

ಹೀರೋನ ಕ್ರಾಂತಿಕಾರಿ i3S ತಂತ್ರಜ್ಞಾನದಂತಹ ವರ್ಧಿತ ತಂತ್ರಜ್ಞಾನದ ವೈಶಿಷ್ಟ್ಯಗಳೊಂದಿಗೆ, (ಐಡಲ್-ಸ್ಟಾಪ್-ಸ್ಟಾರ್ಟ್ ಸಿಸ್ಟಮ್), ಕಾಲ್ ಮತ್ತು ಎಸ್‍ಎಂಎಸ್ ಅಲರ್ಟ್‍ಗಳೊಂದಿಗಿನ ಬ್ಲೂಟೂತ್ ಸಂಪರ್ಕದೊಂದಿಗೆ ಡಿಜಿಟಲ್ ಅನಲಾಗ್ ಸ್ಪೀಡೋಮೀಟರ್, ಸೈಡ್-ಸ್ಟ್ಯಾಂಡ್ ಎಂಜಿನ್ ಕಟ್ ಆಫ್, ಮೆಟಲ್ ಫ್ರಂಟ್ ಫೆಂಡರ್ ಗಳೊಂದಿಗೆ ಸವಾರರು ಯಾವುದೇ ಚಾಲನಾ ಪರಿಸ್ಥಿತಿಯನ್ನು ವಿಶ್ವಾಸದಿಂದ ಕರಗತ ಮಾಡಿಕೊಳ್ಳಬಹುದು. 

ಹೀರೋ ಪ್ಲೆಶರ್+ 110 ದೇಶಾದ್ಯಂತದ ಹೀರೋ ಮೋಟೋಕಾರ್ಪ್ ಡೀಲರ್‍ಶಿಪ್‍ಗಳಲ್ಲಿ LX ವೆರಿಯಂಟ್ ಗೆ  61,900 ರೂಪಾಯಿ ಮತ್ತು ಪ್ಲೆಶರ್+ 110 XTec 69,500 ರೂಪಾಯಿ ಆರಂಭಿಕ ಬೆಲೆಯಿಂದ ಆರಂಭವಾಗುತ್ತದೆ(ಎಕ್ಸ್ ಶೋ ರೂಂ)  

ಹಬ್ಬದ ಸಂಭ್ರಮ ಡಬಲ್ ಮಾಡಲು ಹೀರೋ X ಪಲ್ಸ್ 200 4 ವೇಲ್ವ್ ಬೈಕ್ ಬಿಡುಗಡೆ!

ಹೀರೋ ಮೋಟೋಕಾರ್ಪ್ ಸ್ಟ್ರಾಟಜಿ ಮತ್ತು ಜಾಗತಿಕ ಉತ್ಪನ್ನ ಯೋಜನೆ ಮುಖ್ಯಸ್ಥರಾದ ಮಾಲೋ ಲೆ ಮ್ಯಾಸನ್  ಹೇಳಿದರು, "ಪ್ಲೆಶರ್+ 110 ಒಂದು ಟ್ರೆಂಡ್‍ಸೆಟರ್ ಆಗಿದ್ದು, ಇದು ದೇಶದ ಅತ್ಯಂತ ಮೆಚ್ಚುಗೆ ಪಡೆದ ಮತ್ತು ಜನಪ್ರಿಯ ಸ್ಕೂಟರ್‍ಗಳಲ್ಲಿ ಒಂದಾಗಿದೆ. XTec ಮಾದರಿಯು ಪ್ಲಾಟಿನಂ ಆವೃತ್ತಿಯಿಂದ ಸ್ಫೂರ್ತಿ ಪಡೆದ ಸೊಗಸಾದ ಅಂಶಗಳು, ಫ್ರಂಟ್ ಮೆಟಲ್ ಫೆಂಡರ್ ನೊಂದಿಗೆ ಹೆಚ್ಚು ಬಾಳಿಕೆ, ಬ್ರಾಂಡ್ ಸೀಟ್ ಬ್ಯಾಕ್‍ರೆಸ್ಟ್‍ನೊಂದಿಗೆ ಹೆಚ್ಚು ಆರಾಮ ಮತ್ತು ಪ್ರೊಜೆಕ್ಟರ್ ಎಲ್‍ಇಡಿ ಹೆಡ್‍ಲ್ಯಾಂಪ್, ಬ್ಲೂಟೂತ್ ಸಂಪರ್ಕ ಮತ್ತು ಹೆಚ್ಚಿದ ಇಂಧನ ದಕ್ಷತೆಯನ್ನು ಹೆಚ್ಚಿಸಲು ಹೀರೋನ ಪೇಟೆಂಟ್ i3S ತಂತ್ರಜ್ಞಾನದೊಂದಿಗೆ ಹೆಚ್ಚು ಆಕರ್ಷಣೀಯವಾಗಿಸುತ್ತದೆ. ಪ್ಲೆಶರ್+ 110 ಈಗ ಇನ್ನಷ್ಟು ಅಪೇಕ್ಷಣೀಯವಾಗಿದೆ. 

ಐಕಾನಿಕ್ ಪ್ಲೆಶರ್ ಬ್ರಾಂಡ್ ಗ್ರಾಹಕರೊಂದಿಗೆ ಬಲವಾದ ಸಂಪರ್ಕವನ್ನು ಹೊಂದಿದೆ. ವಿಭಾಗ-ಪ್ರಥಮ ವೈಶಿಷ್ಟ್ಯಗಳೊಂದಿಗೆ, ಹೊಸ ಪ್ಲೆಶರ್+ ‘XTec’  ಖಂಡಿತವಾಗಿಯೂ ನಮ್ಮ ಸ್ಕೂಟರ್ ಪೋರ್ಟ್ ಪೋಲಿಯೊವನ್ನು ಬಲಪಡಿಸುತ್ತದೆ ಮತ್ತು ಈ ಹಬ್ಬದ ಸಂದರ್ಭದಲ್ಲಿ ಯುವಕರಿಗೆ ಹೆಚ್ಚಿನ ಸಂತೋಷವನ್ನು ನೀಡುತ್ತದೆ ಎಂದರು ಹೀರೋ ಮೋಟೋಕಾರ್ಪ್,ಮಾರಾಟ ಮತ್ತು ಮಾರಾಟಾನಂತರದ ಮುಖ್ಯಸ್ಥ ನವೀನ್ ಚೌಹಾಣ್ ಹೇಳಿದರು.

ಭಾರತದ ಅತ್ಯಂತ ಕಡಿಮೆ ಬೆಲೆ ಬೈಕ್ ಹೀರೋ HF 100 ಬಿಡುಗಡೆ!

ಪ್ಲೆಶರ್+ ‘XTec’
ಪ್ರೊಜೆಕ್ಟರ್ ಎಲ್‍ಇಡಿ ಹೆಡ್ ಲ್ಯಾಂಪ್
ಉತ್ತಮ ಪ್ರಕಾಶಕ್ಕಾಗಿ, ಹೊಸ ಪ್ಲೆಶರ್+ XTec ವಿಭಾಗ-ಪ್ರಥಮ ಪ್ರೊಜೆಕ್ಟರ್ ಎಲ್‍ಇಡಿ ಹೆಡ್‍ಲ್ಯಾಂಪ್‍ನೊಂದಿಗೆ ಬರುತ್ತದೆ. ಹೊಸ ಹೆಡ್‍ಲ್ಯಾಂಪ್ 25% ಹೆಚ್ಚು ಬೆಳಕಿನ ತೀವ್ರತೆಯನ್ನು ದೀರ್ಘ ಮತ್ತು ವಿಶಾಲವಾದ ರಸ್ತೆಯ ನೋಟಾಕ್ಕೆ ಒದಗಿಸುತ್ತದೆ ಮತ್ತು ಎಲ್ಲಾ ಚಾಲನಾ ಪರಿಸ್ಥಿತಿಗಳಲ್ಲಿ ಗರಿಷ್ಠ ಆನ್-ರೋಡ್ ಗೋಚರತೆಯನ್ನು ನೀಡುವ ಆಂಟಿ-ಫಾಗ್ ಅನುಕೂಲವನ್ನು ನೀಡುತ್ತದೆ.

ಶೈಲಿ ಮತ್ತು ವಿನ್ಯಾಸ
ಪ್ಲೆಶರ್+ ‘XTec’ ರೆಟ್ರೊ ವಿನ್ಯಾಸ ಥೀಮ್ ಮತ್ತು ಕನ್ನಡಿಗಳು, ಮಫ್ಲರ್ ಪ್ರೊಟೆಕ್ಟರ್, ಹ್ಯಾಂಡಲ್ ಬಾರ್, ಸೀಟ್ ಬ್ಯಾಕ್‍ರೆಸ್ಟ್ ಮತ್ತು ಫೆಂಡರ್ ಸ್ಟ್ರೈಪ್‍ಗಳ ಮೇಲೆ ಪ್ರೀಮಿಯಂ ಕ್ರೋಮ್ ಸೇರ್ಪಡೆಗಳನ್ನು ಯಶಸ್ವಿಯಾಗಿಸುತ್ತದೆ. ಹೆಚ್ಚುವರಿಯಾಗಿ, ಡ್ಯುಯಲ್ ಟೋನ್ ಸೀಟ್ ಮತ್ತು ಬಣ್ಣದ ಒಳ ಪ್ಯಾನೆಲ್‍ಗಳು ಅದರ ಒಟ್ಟಾರೆ ಶೈಲಿಯನ್ನು ಮತ್ತಷ್ಟು ಹೆಚ್ಚಿಸುತ್ತವೆ.

ಡೆಸ್ಟಿನಿ 125 ಪ್ಲಾಟಿನಮ್ ಎಡಿಷನ್ ಸ್ಕೂಟರ್ ಬಿಡುಗಡೆ

ಹೆಚ್ಚಿನ ಆರಾಮ
ದೀರ್ಘ ಪ್ರಯಾಣವಾಗಲಿ ಅಥವಾ ನಿಮ್ಮ ದೈನಂದಿನ ನಗರ ಮಾರ್ಗವಾಗಲಿ, ಉತ್ತಮ ಗುಣಮಟ್ಟದ ಸೌಕರ್ಯಕ್ಕೆ ಬಂದಾಗ  ಪಿಲಿಯನ್‍ಗೆ ಬ್ರಾಂಡೆಡ್ ಸೀಟ್ ಬ್ಯಾಕ್‍ರೆಸ್ಟ್‍ನೊಂದಿಗೆ, ಪ್ಲೆಶರ್+ ಘಿಖಿeಛಿ ತನ್ನ ಭರವಸೆಯನ್ನು ಉಳಿಸಿಕೊಳ್ಳುತ್ತದೆ.

ವರ್ಧಿತ ಬಾಳಿಕೆ
ಸವಾರಿಯನ್ನು ಭವ್ಯವಾಗಿಸುವ ಕ್ರೋಮ್ ಅಂಶಗಳೊಂದಿಗೆ; ಇದು ಈಗ ಮೆಟಲ್ ಫ್ರಂಟ್ ಫೆಂಡರ್‍ನ ಹೆಚ್ಚುವರಿ ಪ್ರಯೋಜನವನ್ನು ಹೊಂದಿದ್ದು ಅದು ಅದರ ಬಾಳಿಕೆಯನ್ನು ಮತ್ತಷ್ಟು ಹೆಚ್ಚಿಸುತ್ತದೆ.

ಕನೆಕ್ಟಿವಿಟಿ
ಪ್ಲೆಶರ್+ XTec ನೊಂದಿಗೆ, ನೀವು ಎಲ್ಲವೂ ನಿಮ್ಮ ದೃಷ್ಟಿ ಮತ್ತು ನಿಯಂತ್ರಣದಲ್ಲಿರುತ್ತದೆ. ಬ್ಲೂಟೂತ್ ಕನೆಕ್ಟಿವಿಟಿಯೊಂದಿಗೆ ಡಿಜಿಟಲ್ ಅನಲಾಗ್ ಸ್ಪೀಡೋಮೀಟರ್ ಒಳಬರುವ ಮತ್ತು ಮಿಸ್ಡ್ ಕಾಲ್ ಎಚ್ಚರಿಕೆಗಳನ್ನು, ಫೋನ್ ಬ್ಯಾಟರಿ ಸ್ಥಿತಿಯೊಂದಿಗೆ ಹೊಸ ಸಂದೇಶ ಎಚ್ಚರಿಕೆಗಳನ್ನು ಪ್ರದರ್ಶಿಸುತ್ತದೆ.

ಹೊಸ ಕಲರ್ ಥೀಮ್
ಏಳು ಅತ್ಯಾಕರ್ಷಕ ಬಣ್ಣಗಳಲ್ಲಿ ಲಭ್ಯವಿದ್ದು, ಪ್ಲೆಶರ್+ XTec ಗಾಗಿ ವಿಶೇಷವಾಗಿ ರಚಿಸಲಾದ ಜುಬಿಲಂಟ್ ಹಳದಿ ಇನ್ನಷ್ಟು ವರ್ಧಿತ ವಿಶೇಷತೆಯನ್ನು ಖಾತ್ರಿಗೊಳಿಸುತ್ತದೆ.

ಎಂಜಿನ್
ಪ್ಲೆಶರ್+ XTec 110 ಸಿಸಿ ಃS-ಗಿI ಅನುಸರಿತ ಎಂಜಿನ್‍ನೊಂದಿಗೆ 7000 ಆರ್‍ಪಿಎಮ್‍ನ 8 ಬಿಎಚ್‍ಪಿ ಯಷ್ಟು ಗಮನಾರ್ಹವಾದ ಪವರ್ ಔಟ್‍ಪುಟ್ ಅನ್ನು ಉತ್ಪಾದಿಸುತ್ತದೆ ಮತ್ತು ಹೆಚ್ಚಿನ ಕಾರ್ಯಕ್ಷಮತೆಯ ಸವಾರಿಗೆ 8.7 ಎನ್‍ಎಂ  5500 ಬೇಡಿಕೆ ಮೇಲೆ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಕಾರ್ಯಕ್ಷಮತೆ ಮತ್ತು ಆರಾಮದ ಬ್ರಾಂಡ್ ಭರವಸೆಯನ್ನು ತಲುಪಿಸುವ ಮೂಲಕ, ಹೊಸ ಪ್ಲೆಶರ್+ XTec, ಅತ್ಯಧಿಕ ಇಂಧನ ಕ್ಷಮತೆಗಾಗಿ i3S ಪೇಟೆಂಟ್ ತಂತ್ರಜ್ಞಾನ ದೊಂದಿಗೆ ಬರುತ್ತದೆ.

ಸುರಕ್ಷತೆ
ಸವಾರ ಮತ್ತು ಪಿಲಿಯನ್ ನ ಅತ್ಯಧಿಕ ಸುರಕ್ಷತೆಯನ್ನು ಖಾತ್ರಿಪಡಿಸಲು, ಸ್ಕೂಟರ್, ಸೈಡ್-ಸ್ಟ್ಯಾಂಡ್ ದೃಶ್ಯ ಸೂಚನೆ ಮತ್ತು 'ಸೈಡ್-ಸ್ಟ್ಯಾಂಡ್ ಎಂಜಿನ್ ಕಟ್-ಆಫ್' ಗಳನ್ನು ಹೊಂದಿದೆ.
 

Follow Us:
Download App:
  • android
  • ios