Asianet Suvarna News Asianet Suvarna News

ಭರ್ಜರಿ ಮೈಲೇಜ್; ದುಬಾರಿ ಪೆಟ್ರೋಲ್‌ಗೆ ಗುಡ್‌ಬೈ ಹೇಳಿ ಬಜಾಜ್ CNG ಖರೀದಿಸಲು ಇಲ್ಲಿವೆ ಕಾರಣ!

ಬೈಕ್ ಬೆಲೆಯೂ ಕಡಿಮೆ ಜೊತೆಗೆ ಸಿಎನ್‌ಜಿ ಕಾರಣ ನಿರ್ವಹಣೆಯೂ ಕಡಿಮೆ. ಇನ್ನು ಮೈಲೇಜ್ ಇತರ ಎಲ್ಲಾ ಬೈಕ್‌ಗಿಂತ ಉತ್ತಮ. ದುಬಾರಿ ಪೆಟ್ರೋಲ್‌ಗೆ ಗುಡ್ ಬೈ ಹೇಳಿ ಬಜಾಜ್ ಬಿಡುಗಡೆ ಮಾಡಿದ ಸಿಎನ್‌ಜಿ ಬೈಕ್ ಖರೀದಿಸಲು ಇವೆ ಹಲವು ಕಾರಣ.
 

Affordable price long range mileage Bajaj CNG freedom bike reduce your cost of living ckm
Author
First Published Jul 8, 2024, 3:17 PM IST | Last Updated Jul 8, 2024, 3:17 PM IST

ಮುಂಬೈ(ಜು.08) ಬಜಾಜ್ ಸಾಧನೆಯನ್ನು ವಿಶ್ವವೇ ಕೊಂಡಾಡುತ್ತಿದೆ. ಕಾರಣ ವಿಶ್ವದ ಮೊದಲ ಸಿಎನ್‌ಜಿ ಬೈಕ್ ಬಿಡುಗಡೆಯಾಗಿದೆ. ಬಜಾಜ್ ಫ್ರೀಡಂ ಬೈಕ್ ಸಿಎನ್‌ಜಿ ಹಾಗೂ ಪೆಟ್ರೋಲ್ ಮೂಲಕ ಚಲಿಸುವ ಮೊದಲ ಮೋಟಾರುಸೈಕಲ್. ಕಡಿಮೆ ಖರ್ಚಿನಲ್ಲಿ ಬೈಕ್ ನಿರ್ವಹಣೆ ಮಾಡಬಹುದು. ಪ್ರತಿ ನಿತ್ಯ ಬಳಕೆ, ದೂರ ಪ್ರಯಾಣ ಎರಡಕ್ಕೂ ಹೊಸ ಬೈಕ್ ಹೇಳಿಮಾಡಿಸಿದಂತಿದೆ. ಕಾರಣ ದುಬಾರಿ ಪೆಟ್ರೋಲ್‌ಗೆ ಗುಡ್ ಬೈ ಹೇಳಿ ಪ್ರತಿ ಕೆಜೆಗಿ 80 ರೂಪಾಯಿ ಬೆಲೆಯ ಸಿಎನ್‌ಜಿ ತುಂಬಿಸಿದರೆ ಸಾಕು. ಹೌದು, ಬಜಾಜ್ ಸಿಎನ್‌ಜಿ ಫ್ರೀಡಂ ಬೈಕ್ ಖರೀದಿಸಲು ಹಲವು ಕಾರಣಗಳಿವೆ.

ಸದ್ಯ ಮಾರುಕಟ್ಟೆಯಲ್ಲಿ ಯಾವುದೇ ಬೈಕ್ ಎಕ್ಸ್ ಶೋ ರೂಂ ಬೆಲೆ 1 ಲಕ್ಷ ರೂಪಾಯಿಗೂ ಅಧಿಕ. ಆದರೆ ಬಜಾಜ್ ಬಯೋ ಫ್ಯೂಯಲ್ ಬೈಕ್ ಬೆಲೆ 95,000 ರೂಪಾಯಿಯಿಂದ(ಎಕ್ಸ್ ಶೋ ರೂ) ಆರಂಭಗೊಳ್ಳುತ್ತಿದೆ. ಮುಖ್ಯವಾಗಿ 2 ಕೆಜಿ ಸಿಎನ್‌ಜಿ ಟ್ಯಾಂಕ್ ಹಾಗೂ 2 ಲೀಟರ್ ಪೆಟ್ರೋಲ್ ಟ್ಯಾಂಕ್‌ನ್ನು ಈ ಬೈಕ್ ಹೊಂದಿದೆ.  

ವಿಶ್ವದ ಮೊದಲ ಸಿಎನ್‌ಜಿ ಬೈಕ್‌ ಬಿಡುಗಡೆಗೊಳಿಸಿದ ಬಜಾಜ್: ಎಷ್ಟಿದರ ಬೆಲೆ ಇಲ್ಲಿದೆ ಡಿಟೇಲ್ಸ್

2  ಕೆಜಿ ಸಿಎನ್‌ಜಿ ಇಂಧನದಲ್ಲಿ ಈ ಬೈಕ್ 220ಕಿಲೋಮೀಟರ್ ಮೈಲೇಜ್ ನೀಡಲಿದೆ. ಇನ್ನು 2 ಲೀಟರ್ ಪೆಟ್ರೋಲ್‌ಗೆ 130 ಕಿಲೋಮೀಟರ್ ಮೈಲೇಜ್ ನೀಡಲಿದೆ. ಒಟ್ಟು 330 ರಿಂದ 350 ಕಿ.ಮೀ ಮೈಲೇಜ್ ನೀಡಲಿದೆ. ಒಂದು ಕೆಜಿ ಸಿಎನ್‌ಜಿಗೆ ಬೆಂಗಳೂರಿನ ಬೆಲೆ 80 ರಿಂದ 82 ರೂಪಾಯಿ. ಅಂದರೆ 1 ಕೆಜಿ ಸಿನ್‌ಜಿ ಅಂದರೆ ಸರಾಸರಿ 80 ರೂಪಾಯಿಯಲ್ಲಿ 100 ರಿಂದ 110 ಕಿ.ಮೀ ಮೈಲೇಜ್ ಈ ಬೈಕ್ ನೀಡಲಿದೆ.  

ಸಿಎನ್‌ಜಿ ಖಾಲಿಯಾದರೆ ತುಂಬಿಸಿಕೊಳ್ಳುವುದು ಕಷ್ಟದ ಮಾತಲ್ಲ. ದೇಶಾದ್ಯಂತ ಸಿಎನ್‌ಜಿ ಪಂಪ್‌ಗಳಿವೆ. ಜೊತೆಗೆ ಇದೀಗ ಬಜಾಜ್ ಮತ್ತಷ್ಟು ಸಿಎನ್‌ಜಿ ಪಂಪ್ ಸ್ಥಾಪಿಸುತ್ತಿದೆ. ಹೀಗಾಗಿ ಭವಿಷ್ಯದಲ್ಲಿ ಇದೀಗ ಬಜಾಜ್ ಸಿಎನ್‌ಜಿ ಬೈಕ್ ಮೂಲಕ ದೇಶದ ಮಾರುಕಟ್ಟೆ ಆಕ್ರಮಿಸಿಕೊಳ್ಳಲಿದೆ. ನಡು ದಾರಿಯಲ್ಲಿ ಸಿಎನ್‌ಜಿ ಖಾಲಿಯಾದರೆ, 2 ಲೀಟರ್ ಪೆಟ್ರೋಲ್ ಮೂಲಕ 130 ಕಿ.ಮೀ ಪ್ರಯಾಣಿಸಿ ಪೆಟ್ರೋಲ್ ಅಥವಾ ಸಿಎನ್‌ಜಿ ತುಂಬಿಸಿಕೊಳ್ಳಹದು.

ಮಾಲಿನ್ಯ ವಿಚಾರದಲ್ಲೂ ಸಿಎನ್‌ಜಿ ಬೈಕ್ ಪರಿಸರಕ್ಕೆ ಪೂಕವಾಗಿದೆ. ಪೆಟ್ರೋಲ್ ಬೈಕ್‌ಗೆ ಹೋಲಿಸಿದರೆ ಸಿಎನ್‌ಜಿ ಶೇಕಡಾ 26 ರಷ್ಟು ಕಡಿಮೆ CO2 ಹೊರಸೂಸಲಿದೆ. ಎಮಿಷನ್ ಪ್ರಮಾಣ ಕಡಿಮೆ ಆಗಿರುವ ಕಾರಣ ಪರಿಸರಕ್ಕೆ ಪೂರಕವಾಗಿದೆ. ಇನ್ನು ಸಿಎನ್‌ಜಿ ಕಾರಣ ಬೈಕ್ ಪವರ್ ಕಡಿಮೆ ಎಂದುಕೊಂಡರೆ ತಪ್ಪು. ಕಾರಣ ಇದು 125 ಸಿಸಿ ಎಂಜಿನ್ ಸಿಎನ್‌ಜಿ ಮೋಟಾರ್ ಬೈಕ್. 8,000 ಆರ್‌ಪಿಎಂನಲ್ಲಿ 9.4 bhp ಪವರ್ ಹೊಂದಿದ್ದರೆ, 9.7 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. 5 ಸ್ಪೀಡ್ ಗೇರ್ ಬಾಕ್ಸ್ ಹೊಂದಿದೆ. ಪೆಟ್ರೋಲ್ ಇಂಧನದ 125 ಸಿಸಿ ಎಂಜಿನ್‌ಗೆ ಹೋಲಿಸಿದರೆ 2.5 bhp ಪವರ್ ಕಡಿಮೆಯಾಗಲಿದೆ.

 ನಿಮ್ಮ ಲುಕ್ ಹೆಚ್ಚಿಸುವ ಅತ್ಯಾಕರ್ಷ ಹೊಸ ಜಾವಾ 42 ಬಾಬರ್ ಬೈಕ್ ಲಾಂಚ್, ಬೆಲೆ ಎಷ್ಟು?

Latest Videos
Follow Us:
Download App:
  • android
  • ios