ಬೆಂಗಳೂರು : ಅನಾಥ ಮಗುವಿಗೆ ಎದೆ ಹಾಲು ಉಣಿಸುವ ಮೂಲಕ ಮಹಿಳಾ ಪೊಲೀಸ್ ಪೇದೆಯೋರ್ವರು ಮಾನವೀಯತೆ ಮೆರೆದಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. 

ಯಲಹಂಕ ಠಾಣೆಯ ಸಂಗೀತ ಹಳಿಮನಿ ಎಂಬ ಮಹಿಳಾ ಪೊಲೀಸ್ ಪೇದೆ ಅನಾಥ ಶಿಶುವಿಗೆ ಹಾಲುಣಿಸಿ ತಾಯಿ ಮಮತೆ ತೋರಿಸಿದ್ದಾರೆ.

ಬರಲ್ಲ ಅಂತಿದ್ದ ಜನರ ಬಳಿಯೇ ಠಾಣೆ ಕೊಂಡೊಯ್ದ ಸಿಂಹಿಣಿ!

ಬುಧವಾರ ಜಿಕೆವಿಕೆ ಉದ್ಯಾನವನದ ಬಳಿ ಅನಾಥ ಹೆಣ್ಣು ಮಗುವೊಂದು ಪತ್ತೆಯಾಗಿತ್ತು. ಕೂಡಲೇ ಅಲ್ಲೇ ಇದ್ದ ಸಿವಿಲ್ ಡಿಫೆನ್ಸ್ ಮಂದಿ ಮಗುವನ್ನ ಸರ್ಕಾರಿ ಆಸ್ಪತ್ರೆಗೆ ಕೊಂಡೊಯ್ದಿದ್ದಾರೆ. ಹಾಲು ಹಾಗೂ ಗ್ಲೂಕೋಸ್ ಇಲ್ಲದೆ ಮಗುವಿನ ಶಕ್ತಿ ಕುಂದಿದ್ದು,  ಹೀಗಾಗಿ ಸ್ಥಳದಲ್ಲೆ ಇದ್ದ ಸಂಗೀತ ಕೂಡಲೇ ಮಗುವಿಗೆ ಹಾಲು ಉಣಿಸಿ ಸಾರ್ಥಕತೆ ಮೆರೆದಿದ್ದಾರೆ. ಪೇದೆ ಸಂಗೀತ ಕಾರ್ಯಕ್ಕೆ ಆಸ್ಪತ್ರೆ ಸಿಬ್ಬಂದಿ ಉನ್ನತ ಅಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಭಾರತ್ ಬಂದ್ : ಹಸಿವು ತಾಳದೆ ಅಂಗಲಾಚಿದ ಮಕ್ಕಳಿಗೆ ಪೇದೆಯ ನೆರವು

ಸದ್ಯ ಮಗುವಿನ ಆರೋಗ್ಯ ಸ್ಥಿತಿ ಸ್ಥಿರವಾಗಿದ್ದು, ವಾಣಿ ವಿಲಾಸ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ಮಗುವಿನ ಆರೋಗ್ಯ ಸಂಪೂರ್ಣ ಸುಧಾರಣೆಯಾದ ಬಳಿಕ ಮಕ್ಕಳ ಕಲ್ಯಾಣ ಇಲಾಖೆಗೆ ವೈದ್ಯರು ಹಸ್ತಾಂತರ ಮಾಡಲಿದ್ದಾರೆ.

ತೊಟ್ಟಿಯಲ್ಲಿ ಎಸೆದ ಹಸುಳೆಗೆ ಎದೆ ಹಾಲುಣಿಸಿ ಮಾನವೀಯತೆ ಮೆರೆದ ಮಹಿಳಾ ಪೇದೆ