ಮಂಗಳೂರು :  ಮೋಟಾರು ವಾಹನ ತಿದ್ದುಪಡಿ ಮಸೂದೆ, ಕಾರ್ಮಿಕ ಕಾನೂನು ತಿದ್ದುಪಡಿ ಸೇರಿದಂತೆ ಕೇಂದ್ರ ಸರ್ಕಾರದ ವಿವಿಧ ನೀತಿಗಳ ವಿರುದ್ಧ ಕಾರ್ಮಿಕ ಸಂಘಟನೆಗಳು ದೇಶವ್ಯಾಪಿ ಕರೆ ನೀಡಿದ್ದ ಎರಡು ದಿನಗಳ ಬಂದ್‌ಗೆ ಮೊದಲ ದಿನ ಮಂಗಳವಾರ ರಾಜ್ಯದಲ್ಲಿ ಮಿಶ್ರ ‘ಅರ್ಧಂಬರ್ಧ ಪ್ರತಿಕ್ರಿಯೆ’ ವ್ಯಕ್ತವಾಗಿದೆ. 

ಮಂಗಳವಾರ ಬಳ್ಳಾರಿ ಹಾಗೂ ಕೋಲಾರದಲ್ಲಿ ಬಂದ್ ಸಂಪೂರ್ಣ ಯಶಸ್ವಿಯಾಗಿದ್ದು ಇದನ್ನು ಹೊರತು ಪಡಿಸಿದರೆ ಬಹುತೇಕ ಜಿಲ್ಲೆಯಲ್ಲಿ ಬಂದ್ ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಲವು ಜಿಲ್ಲೆಗಳಲ್ಲಿ ಹೆಚ್ಚಿನ ಪರಿಣಾಮ ಬೀರಿಲ್ಲ.

ಇನ್ನು ಇತ್ತ ಭಾರತ್ ಬಂದ್ ವೇಳೆ ಹಸಿವು ತಾಳಲಾರದೆ ಇಬ್ಬರು ಅಲೆಮಾರಿ ಪುಟಾಣಿಗಳು ಅಂಗಲಾಚುವ ದೃಶ್ಯ ಮಂಗಳೂರು ಸಿಟಿ ಬಸ್ ನಿಲ್ದಾಣದಲ್ಲಿ ಮಂಗಳವಾರ ಕಂಡುಬಂತು. 

ಶಿವಪ್ರಸಾದ್ ಬಳ್ಳಾರಿ ಎಂಬ ಪೊಲೀಸ್ ಪೇದೆಯೊಬ್ಬರು ಪುಟಾಣಿಗಳಿಗೆ ನೆರವಾಗುವ ಮೂಲಕ ಮಾನವೀಯತೆ ಮೆರೆದರು.