ಟ್ರಾಫಿಕ್ ದಂಡಕ್ಕೆ ಶೇ.50 ವಿನಾಯಿತಿ ವಿಸ್ತರಣೆ ಆಗುತ್ತಾ?

ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳ ಬಾಕಿ ದಂಡ ಪಾವತಿಗೆ ಶೇಕಡ 50ರಷ್ಟು ವಿನಾಯಿತಿ ಅಂತ್ಯದ ಬೆನ್ನಲ್ಲೇ ನಗರ ಸಂಚಾರ ಪೊಲೀಸರು ದಂಡ ಸಂಗ್ರಹದ ಬಗ್ಗೆ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ವರದಿ ಸಲ್ಲಿಸಲು ಸಿದ್ಧತೆ ನಡೆಸಿದ್ದಾರೆ.

Will the traffic fine exemption be extended, Traffic Police to submit report to State Legal Services Authority on fine collection akb

ಬೆಂಗಳೂರು: ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳ ಬಾಕಿ ದಂಡ ಪಾವತಿಗೆ ಶೇಕಡ 50ರಷ್ಟು ವಿನಾಯಿತಿ ಅಂತ್ಯದ ಬೆನ್ನಲ್ಲೇ ನಗರ ಸಂಚಾರ ಪೊಲೀಸರು ದಂಡ ಸಂಗ್ರಹದ ಬಗ್ಗೆ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ವರದಿ ಸಲ್ಲಿಸಲು ಸಿದ್ಧತೆ ನಡೆಸಿದ್ದಾರೆ. ಸಂಚಾರ ಪೊಲೀಸರು ಫೆ.3ರಿಂದ 11ರ ವರೆಗೆ 9 ದಿನ 41.20 ಲಕ್ಷ ಪ್ರಕರಣಗಳಿಂದ ಬರೋಬ್ಬರಿ .120.76 ಕೋಟಿ ಬಾಕಿ ದಂಡ ಸಂಗ್ರಹಿಸಿದ್ದರು. ಈ ಬಗ್ಗೆ ಸಂಚಾರ ಪೊಲೀಸರು ವರದಿ ಸಿದ್ಧಪಡಿಸಿದ್ದು, ಸೋಮವಾರ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ (State Legal Services Authority) ಸಲ್ಲಿಸುವ ಸಾಧ್ಯತೆಯಿದೆ.

ಪ್ರಾಧಿಕಾರದ ಅಧ್ಯಕ್ಷ ಬಿ.ವೀರಪ್ಪ ಅವರು ಜ.27ರಂದು ನಡೆದ ಪ್ರಾಧಿಕಾರದ ಸಭೆಯಲ್ಲಿ ಸಾರಿಗೆ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿದ್ದರು. ರಾಜ್ಯಾದ್ಯಂತ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳ ಬಾಕಿ ದಂಡ ಪಾವತಿಗೆ ವಿನಾಯಿತಿ ನೀಡುವಂತೆ ಬಿ.ವೀರಪ್ಪ ಅವರು ಸಲಹೆ ನೀಡಿದ್ದರು. ಇದಕ್ಕೆ ಸಮ್ಮತಿ ಸೂಚಿಸಿದ್ದ ಸಾರಿಗೆ ಇಲಾಖೆ ಆಯುಕ್ತ, ಬಾಕಿ ದಂಡ ಪಾವತಿಗೆ ಶೇ.50ರ ವಿನಾಯಯಿತಿ ಕೋರಿ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರು. ರಾಜ್ಯ ಸರ್ಕಾರ ಈ ಪ್ರಸ್ತಾವನೆ ಒಪ್ಪಿ ಫೆ.3ರಿಂದ 11ರವರೆಗೆ ಬಾಕಿ ದಂಡ ಪಾವತಿಗೆ ಶೇ.50ರ ವಿನಾಯಿತಿ ನೀಡಿ ಆದೇಶಿಸಿತ್ತು.

Bengaluru Traffic ಟ್ರಾಫಿಕ್‌ ದಂಡ: ದಾಖಲೆಯ 17.61 ಕೋಟಿ ರು. ಸಂಗ್ರಹ!

ನಾಳೆ ಸಭೆ: ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಬಿ.ವೀರಪ್ಪ ಅವರು ಮಂಗಳವಾರ(ಫೆ.14) ಸಾರಿಗೆ ಇಲಾಖೆ ಅಧಿಕಾರಿಗಳು ಮತ್ತು ನಗರ ಸಂಚಾರ ಪೊಲೀಸ್‌ ಅಧಿಕಾರಿಗಳ ಸಭೆ ಕರೆದಿದ್ದಾರೆ. ಈ ಸಭೆಯಲ್ಲಿ ಬಾಕಿ ದಂಡ ವಿನಾಯಿತಿ ವಿಸ್ತರಣೆ ಬಗ್ಗೆ ಚರ್ಚೆ ನಡೆಯುವ ಸಾಧ್ಯತೆಯಿದೆ. ಏಕೆಂದರೆ, ಸಾಕಷ್ಟುಸಾರ್ವಜನಿಕರು ಬಾಕಿ ದಂಡ ಪಾವತಿಗೆ ಮತ್ತಷ್ಟುಕಾಲಾವಕಾಶ ನೀಡುವಂತೆ ಮನವಿ ಮಾಡಿದ್ದರು.

ಲೈನ್‌ಮ್ಯಾನ್‌ಗೆ ₹500 ಟ್ರಾಫಿಕ್ ದಂಡ: ಪೊಲೀಸ್ ಠಾಣೆಯ ವಿದ್ಯುತ್‌ ಕಟ್‌

Latest Videos
Follow Us:
Download App:
  • android
  • ios