ಬ್ರಿಡ್ಜ್ ನಲ್ಲಿ ಭಾರೀ ಗುಂಡಿ : ಸಂಚಾರ ಮಾರ್ಗ ಬದಲಾಗಿ ಕಿ.ಮೀವರೆಗೂ ಟ್ರಾಫಿಕ್ ಜಾಮ್
ಬೆಂಗಳೂರಿನ ಮೇಲ್ಸೇತುವೆ ಮೇಲೆ ಭಾರೀ ಗಾತ್ರದ ಗುಂಡಿ ಬಿದ್ದು, ಸಂಚಾರ ಮಾರ್ಗ ಬದಲಾವಣೆ ಮಾಡಲಾಗಿದೆ. ಇದರಿಂದ ಕಿಲೋ ಮೀಟರ್ ವರೆಗೂ ಟ್ರಾಫಿಕ್ ಜಾಮ್ ಉಂಟಾಗಿದೆ
ಬೆಂಗಳೂರು [ನ.02]: ಬೆಂಗಳೂರಿನ ಸುಮ್ಮನಹಳ್ಳಿ ಬ್ರಿಡ್ಜ್ ಮೇಲೆ ಗುಂಡಿ ಬಿದ್ದಿರುವ ಹಿನ್ನೆಲೆ ನಾಯಂಡಹಳ್ಳಿ-ಗೊರಗುಂಟೆಪಾಳ್ಯ ಮಾರ್ಗದ ರಸ್ತೆ ಸಂಚಾರ ಬಂದ್ ಆಗಿದೆ.
ಮುನ್ನೆಚ್ಚರಿಕಾ ಕ್ರಮವಾಗಿ ರಸ್ತೆ ಮಾರ್ಗ ಬಂದ್ ಮಾಡಿ ಕಾಮಾಕ್ಷಿಪಾಳ್ಯ ಸಂಚಾರಿ ಪೊಲೀಸರು ಸೂಚನೆ ನೀಡಿದ್ದಾರೆ. ರಸ್ತೆ ಸಂಚಾರ ಬಂದ್ ಹಿನ್ನೆಲೆ ಪರ್ಯಾಯವಾಗಿ ಸರ್ವೀಸ್ ರಸ್ತೆ ಮೂಲಕ ವಾಹನ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ.
ಬೆಂಗಳೂರಿಗರ ಗಮನಕ್ಕೆ: ಎಚ್ಚರವಾಗಿರಿ ಈ ಗುಂಡಿ ನೋಡಿ...
ಕಳೆಪೆ ಕಾಮಗಾರಿಯಿಂದ ಕೇವಲ 10 ವರ್ಷಗಳ ಹಿಂದೆ ನಿರ್ಮಾಣ ಮಾಡಲಾಗಿರುವ ಸುಮ್ಮನಹಳ್ಳಿ ಬ್ರಿಡ್ಜ್ ಮೇಲೆ ಸುಮಾರು 6 ಅಡಿಯಷ್ಟು ಗಾತ್ರದ ಗುಂಡಿ ಬಿದ್ದಿದೆ. ಸೂಕ್ತ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲಾಗುತ್ತಿದೆ.
ಟ್ರಾಫಿಕ್ ಜಾಮ್ : ಸುಮ್ಮನಹಳ್ಳಿ ಬ್ರಿಡ್ಜ್ ಮೇಲೆ ರಸ್ತೆ ಗುಂಡಿ ಬಿದ್ದ ಹಿನ್ನಲೆಯಲ್ಲಿ ಪರ್ಯಾಯವಾಗಿ ಸಂಚಾರಕ್ಕೆ ಅವಕಾಶ ನೀಡಲಾಗಿರುವ ಸರ್ವಿಸ್ ರೋಡಲ್ಲಿ ಭಾರೀ ಟ್ರಾಫಿಕ್ ಜಾಮ್ ಉಂಟಾಗಿದೆ.
ಔಟರ್ ರಿಂಗ್ ರೋಡಲ್ಲಿ ವಾಹನ ಸಂಚಾರ ಸಂಪೂರ್ಣ ಬಂದ್ ಮಾಡಿದ್ದು, ಇದರಿಂದ ಕಿಲೋ ಮೀಟರ್ವರೆಗೂ ಟ್ರಾಫಿಕ್ ಜಾಮ್ ಉಂಟಾಗಿದೆ. ಟ್ರಾಫಿಕ್ ಜಾಮಿಂದ ವಾಹನ ಸವಾರರು ಪರದಾಡುತ್ತಿದ್ದಾರೆ.