ನೂತನ ಪೊಲೀಸ್ ಆಯುಕ್ತರಿಂದ ಮಹತ್ವದ ಆದೇಶ ಶೀಘ್ರದಲ್ಲೇ ಟೋಯಿಂಗ್ ಪುನರ್ ಆರಂಭ ವಾಹನ ಮಾಲೀಕರೆ ನೋ ಪಾರ್ಕಿಂಗ್ ಎಚ್ಚರ
ಬೆಂಗಳೂರು(ಮೇ.18): ಅತೀ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದ್ದ ವಾಹನ ಟೋಯಿಂಗ್ ಸ್ಥಗಿತ ನಿರ್ಧಾರ ಬೆಂಗಳೂರಿಗರಿಗೆ ನೆಮ್ಮದಿ ತಂದಿತ್ತು. ಪರಿಣಾಮ ಎಲ್ಲೆಂದರಲ್ಲಿ ವಾಹನ ನಿಲ್ಲಿಸುವುದು, ಟ್ರಾಫಿಕ್ ಜಾಮ್ ಸಮಸ್ಯೆಗಳು ಹೆಚ್ಚಾಗಿದೆ. ಇದರಿಂದ ನಗರದಲ್ಲಿ ಮತ್ತೆ ವಾಹನ ಟೋಯಿಂಗ್ ಪುನರ್ ಆರಂಭಿಸವುದಾಗಿ ನೂತನ ಪೊಲೀಸ್ ಆಯುಕ್ತ ಸಿ.ಎಚ್.ಪ್ರತಾಪ್ ರೆಡ್ಡಿ ಹೇಳಿದ್ದಾರೆ.
ಜನಾಕ್ರೋಶ ಹಿನ್ನೆಲೆಯಲ್ಲಿ ನಗರ ವ್ಯಾಪ್ತಿ ಆರು ತಿಂಗಳಿಂದ ಸ್ಥಗಿತಗೊಂಡಿದ್ದ ಟೋಯಿಂಗ್ ವ್ಯವಸ್ಥೆಯನ್ನು ಸರ್ಕಾರದ ಜತೆ ಶೀಘ್ರ ಮಾತುಕತೆ ನಡೆಸಿ ಪುನಾರಂಭಿಸುವುದಾಗಿ ನಗರ ನೂತನ ಪೊಲೀಸ್ ಆಯುಕ್ತ ಸಿ.ಎಚ್.ಪ್ರತಾಪ್ ರೆಡ್ಡಿ ಹೇಳಿದ್ದಾರೆ.ನಗರದ ಪೊಲೀಸ್ ಆಯುಕ್ತರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಮಂಗಳವಾರ ನಡೆದ ಮೊದಲ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದಲ್ಲಿ ಸುಗಮ ಸಂಚಾರಕ್ಕೆ ಟೋಯಿಂಗ್ ವ್ಯವಸ್ಥೆ ಜಾರಿಗೊಳಿಸುವುದು ಅನಿರ್ವಾಯವಾಗಿದೆ ಎಂದರು.
ದಂಡ ಕಟ್ತೇನೆ ಎಂದರೂ ಬಿಡದೆ ಟ್ರಾಫಿಕ್ ಪೊಲೀಸರ ಅಟ್ಯಾಕ್.. ಪ್ರಶ್ನೆ ಮಾಡಿದ ಯುವಕನಿಗೆ ಅವಾಜ್
ನಗರದಲ್ಲಿ ಟೋಯಿಂಗ್ ಅನ್ನು ತಾತ್ಕಾಲಿಕ ಸ್ಥಗಿತಗೊಳಿಸಲಾಗಿದೆ. ಸಣ್ಣ ಅಪಘಾತವಾದರೂ ಟೋಯಿಂಗ್ ಮಾಡಬೇಕಾಗಿದೆ. ಹೀಗಾಗಿ ಮತ್ತೆ ನಗರದಲ್ಲಿ ಟೋಯಿಂಗ್ ವ್ಯವಸ್ಥೆ ಜಾರಿಗೊಳಿಸುವ ಸಂಬಂಧ ಸರ್ಕಾರದ ಜತೆ ಶೀಘ್ರವೇ ಮಾತುಕತೆ ನಡೆಸುತ್ತೇನೆ. ಇದಕ್ಕಾಗಿ ಹೊಸ ಮಾರ್ಗಸೂಚಿ ರೂಪಿಸಲಾಗುತ್ತದೆ ಎಂದು ಆಯುಕ್ತರು ತಿಳಿಸಿದರು.
ಟೋಯಿಂಗ್ ಸಿಬ್ಬಂದಿ ದುಂಡಾವರ್ತನೆ ಹಾಗೂ ಮನಬಂದಂತೆ ದಂಡ ಪ್ರಯೋಗದ ವಿರುದ್ಧ ಜನಾಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ನಗರ ವ್ಯಾಪ್ತಿ ಟೋಯಿಂಗ್ ವ್ಯವಸ್ಥೆಯನ್ನು ಸ್ಥಗಿತಗೊಳಿಸಿದ್ದ ಸರ್ಕಾರವು, ಇದಕ್ಕಾಗಿ ಹೊಸ ಮಾರ್ಗಸೂಚಿ ಹೊರಡಿಸುವುದಾಗಿ ಹೇಳಿತ್ತು. ಆದರೆ ನಿಲುಗಡೆ ನಿಷೇಧಿತ ಪ್ರದೇಶಗಳ ಗುರುತು ಹಾಗೂ ದಂಡದ ಮೊತ್ತ ಪರಿಷ್ಕರಣೆ ಸೇರಿದಂತೆ ಟೋಯಿಂಗ್ ವ್ಯವಸ್ಥೆ ಸುಧಾರಣಾ ಕ್ರಮಗಳ ಬಗ್ಗೆ ಆರು ತಿಂಗಳು ಕಳೆದರೂ ಯಾವುದೇ ನಿರ್ಧಾರ ತೆಗೆದುಕೊಳ್ಳದೆ ತ್ರಿಶಂಕು ಸ್ಥಿತಿಯಲ್ಲೇ ಉಳಿದಿದೆ. ಈಗ ನೂತನ ಆಯುಕ್ತರ ಟೋಯಿಂಗ್ ಪುನಾರಂಭ ಹೇಳಿಕೆ ಸಾರ್ವಜನಿಕರ ವಲಯದಲ್ಲಿ ಮತ್ತೆ ‘ಟೋಯಿಂಗ್ ಬೂತ’ದ ಬಗ್ಗೆ ಸಂಚಲ ಮೂಡಿದೆ.
ನಮ್ಮ ಬೆಂಗಳೂರು ನಗರವು ಗ್ಲೋಬಲ್ ಸಿಟಿ ಆಗಿದೆ. ಈ ನಗರವನ್ನು ವಿಶ್ವದ ಯಾವುದೇ ಮೂಲೆಗೆ ಹೋದರೂ ಗುರುತಿಸುತ್ತಾರೆ. ನಗರದ ಘನತೆ ಮತ್ತು ವಿಶ್ವಾಸ ಉಳಿಸಲು ಕೆಲಸ ಮಾಡುತ್ತೇನೆ ಎಂದು ಭರವಸೆ ನೀಡಿದರು.
ಟೋಯಿಂಗ್‌ಗೆ ಬ್ರೇಕ್ ಹಾಕಿದ ಸರ್ಕಾರ: ನಿಟ್ಟುಸಿರು ಬಿಟ್ಟ ಸಿಲಿಕಾನ್ ಸಿಟಿ ಮಂದಿ..!
ನಿರ್ಗಮಿತ ಪೊಲೀಸ್ ಆಯುಕ್ತ ಕಮಲ್ ಪಂತ್ ಅವರು ನನ್ನ ಆಪ್ತ ಮಿತ್ರರು. ನಗರದ ಆಯುಕ್ತರಾಗಿ ಕಮಲ್ ಪಂತ್ ಒಳ್ಳೆಯ ಕೆಲಸ ಮಾಡಿದ್ದು, ಅವರ ಕಾಲದಲ್ಲಿ ನಡೆದಿರುವ ಎಲ್ಲ ಕೆಲಸಗಳನ್ನು ಯಾವುದೇ ಪರಿವರ್ತನೆ ಇಲ್ಲದೆ ಮುಂದುವರೆಸಿಕೊಂಡು ಹೋಗಲಾಗುತ್ತದೆ. ಈಗ ಚಾಲ್ತಿಯಲ್ಲಿರುವ ವ್ಯವಸ್ಥೆಯನ್ನು ಮತ್ತಷ್ಟುಸುಧಾರಣೆಗೆ ಕ್ರಮ ಜರುಗಿಸುತ್ತೇನೆ ಎಂದು ಪ್ರತಾಪ್ ರೆಡ್ಡಿ ಹೇಳಿದರು.
ಎರಡು ವರ್ಷಗಳು ಕೊರೋನಾ ಸೋಂಕಿನ ಕಾರಣಕ್ಕೆ ನಗರದಲ್ಲಿ ಸಂಚಾರ ಸಮಸ್ಯೆ ಇರಲಿಲ್ಲ. ಈಗ ಸೋಂಕು ಇಳಿಕೆ ಮುಖವಾಗಿ ಜನರ ಬದುಕು ಸಹಜ ಸ್ಥಿತಿಗೆ ಮರಳಿದ್ದು, ನಗರದಲ್ಲಿ ಮತ್ತೆ ವಾಹನಗಳ ಓಡಾಟ ಶುರುವಾಗಿದೆ. ಇದರಿಂದ ಸಂಚಾರ ದಟ್ಟಣೆ ಕೂಡ ಉಂಟಾಗಿದೆ. ಸಂಚಾರ ಸಮಸ್ಯೆ ಬಗೆಹರಿಸಲು ಶ್ರಮಿಸುತ್ತೇನೆ ಎಂದು ನುಡಿದರು.
