ಬೆಂಗಳೂರು [ನ.15]:  ನಿವೃತ್ತ ಐಎಎಸ್‌ ಅಧಿಕಾರಿಯೊಬ್ಬರ ಸೋದರ ಸಂಬಂಧಿಕನಿಗೆ ಮತ್ತು ಬರಿಸುವ ಮದ್ದು ನೀಡಿ ಮನೆಯಲ್ಲಿದ್ದ ಚಿನ್ನಾಭರಣ ದೋಚಿ ಮನೆ ಕಾವಲುಗಾರ ಪರಾರಿಯಾಗಿರುವ ಘಟನೆ ಬಸವೇಶ್ವರ ನಗರದಲ್ಲಿ ಬುಧವಾರ ರಾತ್ರಿ ನಡೆದಿದೆ.

ನಿವೃತ್ತ ಐಎಎಸ್‌ ಅಧಿಕಾರಿ ಸಿ.ಸೋಮೕಶೇಖರ್‌ ನಿವಾಸದಲ್ಲೇ ಈ ಕೃತ್ಯ ನಡೆದಿದ್ದು, ಪರಾರಿಯಾಗಿರುವ ಆರೋಪಿಗಳ ಪತ್ತೆ ಬಸವೇಶ್ವರ ನಗರ ಠಾಣೆ ಪೊಲೀಸರು ಬಲೆ ಬೀಸಿದ್ದಾರೆ. ಕೆಲಸದ ನಿಮಿತ್ತ ಸೋಮಶೇಖರ್‌ ಅವರು ಬುಧವಾರ ಹೊರ ಹೋಗಿದ್ದಾಗ ಈ ಘಟನೆ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತುಮಕೂರು ಜಿಲ್ಲಾಧಿಕಾರಿ ಹಾಗೂ ಸಹಕಾರ ಇಲಾಖೆಯ ಕಾರ್ಯದರ್ಶಿ ಸೇರಿದಂತೆ ಸಕಾರ್ರದ ನಾನಾ ಹುದ್ದೆಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ನಂತರ ಸೋಮಶೇಖರ್‌ ಅವರು, ತಮ್ಮ ಕುಟುಂಬದ ಜತೆ ಬಸವೇಶ್ವರ ನಗರದಲ್ಲಿ ನೆಲೆಸಿದ್ದಾರೆ. ಬಸವೇಶ್ವರ ಪೊಲೀಸ್‌ ಠಾಣೆಯ ಸಮೀಪದಲ್ಲೇ ಅವರ ಮನೆ ಇದೆ. ಕೆಲವು ದಿನಗಳಿಂದ ನೇಪಾಳ ಮೂಲದ ಬಹದ್ದೂರ್ ಎಂಬಾತನನ್ನು ಮನೆ ಕಾವಲಿಗೆ ನೇಮಿಸಿಕೊಂಡಿದ್ದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಕೆಲಸದ ನಿಮಿತ್ತ ಬುಧವಾರ ಹೊರ ಹೊರಟಿದ್ದ ಸೋಮಶೇಖರ್‌ ಅವರು, ತಮ್ಮ ಸೋದರನ ಪುತ್ರ ಸಂತೋಷ್‌ಗೆ ಮನೆಯಲ್ಲಿ ರಾತ್ರಿ ಮಲಗುವಂತೆ ಸೂಚಿಸಿದ್ದರು. 

ರಾಥ್ರಿ ಸಂತೋಷ್‌ ಅವರಿಗೆ ಊಟದಲ್ಲಿ ಮತ್ತು ಬರಿಸುವ ಮದ್ದು ನೀಡಿದ ಕಾವಲುಗಾರ, ಸಂತೋಷ್‌ ಪ್ರಜ್ಞೆ ತಪ್ಪಿದ ಬಳಿಕ ತನ್ನ ಕೈಚಳಕ ತೋರಿಸಿದ್ದಾನೆ. ಮನೆಯಲ್ಲಿದ್ದ ಚಿನ್ನಾಭರಣ ಸೇರಿದಂತೆ  ಲಕ್ಷಾಂತರ ರು. ಮೌಲ್ಯದ ವಸ್ತುಗಳನ್ನು ಕದ್ದು ಪರಾರಿಯಾಗಿದ್ದಾನೆ.