ಬೆಂಗಳೂರಿನಿಂದ ವಿಶೇಷ ರೈಲು ಸೇವೆ ಆರಂಭ ಮಾಡಲಾಗಿದೆ. ನವೆಂಬರ್ 1 ರಿಂದಲೇ ರೈಲು ಸಂಚಾರ ಆರಮಭವಾಗಿದ್ದು, ಪ್ರಯಾಣಿಕರು ಅನುಕೂಲ ಪಡೆಯಬಹುದಾಗಿದೆ.
ಬೆಂಗಳೂರು [ನ.04]: ನೈಋುತ್ಯ ರೈಲ್ವೆಯು ನಗರದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ (ಕೆಎಸ್‌ಆರ್) ರೈಲು ನಿಲ್ದಾಣದಿಂದ ಹಿಂದೂಪುರಕ್ಕೆ ನ.1ರಿಂದ ಮೆಮು ವಿಶೇಷ ರೈಲು ಸಂಚಾರ ಆರಂಭಿಸಿದೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಭಾನುವಾರ ಹೊರತುಪಡಿಸಿ ವಾರದ ಆರು ದಿನಗಳ ಕಾಲ ಈ ರೈಲು (ಸಂಖ್ಯೆ 06565/06566) ಸಂಚರಿಸಲಿದೆ. ಪ್ರತಿ ದಿನ ಕೆಎಸ್‌ಆರ್ ರೈಲು ನಿಲ್ದಾಣದಿಂದ ಬೆಳಗ್ಗೆ 9.30ಕ್ಕೆ ಹೊರಟು ಮಧ್ಯಾಹ್ನ 12 ಗಂಟೆಗೆ ಹಿಂದೂಪುರ ರೈಲು ನಿಲ್ದಾಣ ತಲುಪಲಿದೆ. ಮಧ್ಯಾಹ್ನ 1 ಗಂಟೆಗೆ ಹಿಂದೂಪುರದಿಂದ ಹೊರಟು ಸಂಜೆ 4.10ಕ್ಕೆ ಕೆಎಸ್‌ಆರ್ ರೈಲು ನಿಲ್ದಾಣ ತಲುಪಲಿದೆ.
2 ದಶಕಗಳ ಕನಸು ನನಸು: ದಾಂಡೇಲಿ-ಧಾರವಾಡ ನಡುವೆ ಚುಕುಬುಕು ರೈಲು...
ಕಂಟೋನ್ಮೆಂಟ್, ಬೆಂಗಳೂರು ಪೂರ್ವ, ಬೈಯಪ್ಪನಹಳ್ಳಿ, ಚನ್ನಸಂದ್ರ, ಯಲಹಂಕ, ರಾಜಾನುಕುಂಟೆ, ದೊಡ್ಡಬಳ್ಳಾಪುರ, ವಡ್ಡರಹಳ್ಳಿ, ಮಾಕಳಿದುರ್ಗಾ, ತೊಂಡೆಬಾವಿ, ಸೋಮೇಶ್ವರ, ಗೌರಿಬಿದನೂರು, ವಿದುರಾಶ್ವತ್ಥ, ದೇವರಪಲ್ಲೆ ಮಾರ್ಗದಲ್ಲಿ ಹಿಂದೂಪುರ ತಲುಪಲಿದೆ ಎಂದು ನೈಋುತ್ಯ ರೈಲ್ವೆ ತಿಳಿಸಿದೆ.
