ಮೈಸೂರು ದಸರಾ ಉದ್ಘಾಟನೆಯಾಗಿದೆ. ಮೈಸೂರು ದಸರಾಗೆ ತೆರಳುವ ಜನರಿಗೆ ಭಾರತೀಯ ರೈಲ್ವೇ ಇದೀಗ ವಿಶೇಷ ರೈಲು ವ್ಯವಸ್ಥೆ ಮಾಡಿದೆ. ಬೆಂಗಳೂರಿನಿಂದ ಮೈಸೂರಿಗೆ ವಿಶೇಷ ರೈಲು ವ್ಯವಸ್ಥೆ ಮಾಡಲಾಗಿದೆ. ಈ ರೈಲಿನ ವೇಳಾಪಟ್ಟಿ ಇಲ್ಲಿದೆ.

ಬೆಂಗಳೂರು (ಅ.13) ವಿಶ್ವವಿಖ್ಯಾತ ಮೈಸೂರು ದಸರಾ ಉದ್ಘಾಟನೆಯಾಗಿದೆ. ಧಾರ್ಮಿಕ, ಸಾಂಸ್ಕೃತಿಕ, ಕ್ರೀಡೆ ಸೇರಿದಂತೆ ಹಲವು ಕಾರ್ಯಕ್ರಮಗಳು ಅದ್ಧೂರಿಯಾಗಿ ಆರಂಭಗೊಂಡಿದೆ. ಮೈಸೂರಿನ ವೈಭವೋಪೇತ ದಸರಾ ನೋಡಲು ದೇಶ ವಿದೇಶಗಳಿಂದ ಜನರು ಆಗಮಿಸುತ್ತಾರೆ. ಪ್ರಮುಖವಾಗಿ ಬೆಂಗಳೂರಿನಿಂದ ಅತೀ ಹೆಚ್ಚು ಮಂದಿ ಮೈಸೂರಿಗೆ ತೆರಳುತ್ತಾರೆ. ಇದೀಗ ಭಾರತೀಯ ರೈಲ್ವೇ ಮೈಸೂರು ದಸರಾಗೆ ಬೆಂಗಳೂರಿನಿಂದ ವಿಶೇಷ ರೈಲು ನೀಡಿದೆ. ಬೆಂಗಳೂರು ಮೈಸೂರು ಹಾಗೂ ಮೈಸೂರು ಬೆಂಗಳೂರು ನಡುವೆ ಈ ರೈಲು ಸಂಚರಿಸಲಿದೆ.

ಯಾವಾಗಿನಿಂದ ವಿಶೇಷ ರೈಲು

ಮೈಸೂರು ದಸರಾ ಸಂದರ್ಭದಲ್ಲಿ ಸಂಚಾರ ದಟ್ಟಣೆ ಕಡಿಮೆ ಮಾಡಲು ಹಾಗೂ ಪ್ರಯಾಣಿಕರು ಸುಲಭವಾಗಿ ಮೈಸೂರು ತಲುಪಲು ಸಾಧ್ಯವಾಗುವಂತೆ ಮಾಡಲು ಭಾರತೀಯ ರೈಲ್ವೇ ವಿಶೇಷ ರೈಲು ವ್ಯವಸ್ಥೆ ಮಾಡಿದೆ. ಮೈಸೂರು-ಬೆಂಗಳೂರು-ಚಾಮರಾಜನಗರ ನಡುವಿನ ಈ ರೈಲು ಅಕ್ಟೋಬರ್ 16ರಿಂದ ಅಕ್ಟೋಬರ್ 22ರ ವರೆಗೆ ಸೇವೆ ನೀಡಲಿದೆ.

ಕೆಎಸ್ಆರ್ ಬೆಂಗಳೂರು-ಅಶೋಕಪುರಂ ಹಾಗೂ ಕೆಎಸ್ಆರ್ ಬೆಂಗಳೂರು ಸ್ಪೆಷಲ್ ಟ್ರೈನ್ (06285/06286) ಅಕ್ಟೋಬರ್ 19, 20 ಹಾಗೂ 21ರಂದು ಮೂರು ಟ್ರಿಪ್ ಸೇವೆ ನೀಡಲಿದೆ. ಇನ್ನು ಟ್ರೈನ್ ನಂಬರ್ 06285 ಕೆಎಸ್ಆರ್ ಬೆಂಗಳೂರು ನಿಲ್ದಾಣದಿಂದ ಮಧ್ಯಾಹ್ನ 12.15ಕ್ಕೆ ಹೊರಡಲಿದ್ದು, ಅಶೋಕಪುರಂಗೆ ಮಧ್ಯಾಹ್ನ 3.40ಕ್ಕೆ ತಲುಪಲಿದೆ. ಅಶೋಕಪುರಂನಿಂದ ಸಂಜೆ 4.10ಕ್ಕೆ ಹೊರಡಲಿದ್ದು ರಾತ್ರಿ 8 ಗಂಟೆಗೆ ಬೆಂಗಳೂರು ತಲುಪಲಿದೆ. 8 ಬೋಗಿಗಳ ಮೆಮೋ ರೈಲು ಬೆಂಗಳೂರಿನಿಂದ ಹೊರಟು ಕೆಂಗೇರಿ, ಬಿಡದಿ, ರಾಮನಗರ, ಚನ್ನಪಟ್ಟಣ , ಮದ್ದೂರು, ಮಂಡ್ಯ ಯೆಲಿಯೂರು, ಬೈದ್ರಹಳ್ಳಿ, ಪಾಂಡವಪುರ, ಶ್ರೀರಂಗಪಟ್ಟಣ, ನಾಗನಹಳ್ಳಿ, ಮೈಸೂರು ಹಾಗೂ ಚಾಮರಾಜಪುರದಲ್ಲಿ ನಿಲುಗಡೆಯಾಗಲಿದೆ.

ಮತ್ತೊಂದು ರೈಲು ಸಂಖ್ಯೆ 06287/06288 ಬೆಂಗಳೂರು ಮೈಸೂರು 6 ಟ್ರಿಪ್ ಸೇವೆ ನೀಡಲಿದೆ. ಅಕ್ಟೋಬರ್ 16ರಿಂದ 21ರ ವರೆಗ ಈ ರೈಲು ಪ್ರಯಾಣಿಕರಿಗೆ ಸೇವೆ ನೀಡಲಿದೆ. ಈ ರೈಲು ಬೆಂಗಳೂರಿನಿಂದ ರಾತ್ರಿ 9.15ಕ್ಕೆ ಹೊಡಲಿದ್ದು, ಮಧ್ಯರಾತ್ರಿ 12.20ಕ್ಕೆ ಮೈಸೂರು ತಲುಪಲಿದೆ. ಇನ್ನ ಮೈಸೂರಿನಿಂದ ಮಧ್ಯರಾತ್ರಿ 12.30ಕ್ಕೆ ಹೊರಡಲಿದ್ದು, ರಾತ್ರಿ 3.30ಕ್ಕೆ ಬೆಂಗಳೂರು ತಲುಪಲಿದೆ. ಇದು 8 ಮೆಮೋ ಕೋಚ್ ರೈಲಾಗಿದೆ.

ಇದರ ಜೊತೆಗೆ ಮತ್ತೆರೆಡು ಹೆಚ್ಚುವರಿ ಸ್ಪೆಷಲ್ ರೈಲು ಸೇವೆ ಲಭ್ಯವಿದೆ. 06293/06294 ರೈಲು ಅಕ್ಟೋಬರ್ 21ಕ್ಕೆ ಸೇವೆ ನೀಡಲಿದೆ. ಅಕ್ಟೋಬರ್ 21ಕ್ಕೆ 06289/06290 ರೈಲು ಸೇವೆ ನೀಡಲಿದೆ.