ಶಿವಾನಂದ ಫ್ಲೈಓವರ್ ಕೆಳಗೆ ಸ್ಕೇಟಿಂಗ್ ಅಂಕಣಕ್ಕೆ ಗ್ರಹಣ
ಸ್ವಚ್ಛತೆ ಕಾಪಾಡಲು ಬೆಂಗಳೂರು ಮಹಾನಗರ ಪಾಲಿಕೆ ನಿರ್ಧಾರ. -ಅರ್ಧಕ್ಕೆ ನಿಂತ ಬಾಸ್ಕೆಟ್ ಬಾಲ್ ಅಂಕಣ ನಿರ್ಮಾಣ.
ಬೆಂಗಳೂರು: ನಗರದ ಶಿವಾನಂದ ವೃತ್ತದ ಮೇಲ್ಸೇತುವೆ ಕೆಳಭಾಗದಲ್ಲಿರುವ ಖಾಲಿ ಜಾಗದಲ್ಲಿ ಸಾರ್ವಜನಿಕರಿಗೆ ‘ಸ್ಕೇಟಿಂಗ್’ ಹಾಗೂ ‘ಬ್ಯಾಸ್ಕೆಟ್ ಬಾಲ್’ ಅಂಕಣ ನಿರ್ಮಿಸುತ್ತಿದ್ದ ಕಾಮಗಾರಿ ಅರ್ಧಕ್ಕೆ ನಿಂತುಕೊಂಡಿದೆ.
ನಗರದ ಬಹುತೇಕ ಮೇಲ್ಸೇತುವೆಯ ಕೆಳಭಾಗದಲ್ಲಿ ಕಸ ಸುರಿಯುವುದು, ಮೂತ್ರ ವಿಸರ್ಜನೆ ಇತ್ಯಾದಿಗಳ ಕಾರಣ ನಗರದ ಸ್ವಚ್ಛತೆ ಹಾಗೂ ಸೌಂದರ್ಯಕ್ಕೆ ಧಕ್ಕೆ ಆಗುತ್ತಿರುವ ಹಿನ್ನೆಲೆಯಲ್ಲಿ ಇಂತಹದನ್ನು ತಡೆಯುವ ಉದ್ದೇಶದಿಂದ ಪ್ರಾಯೋಗಿಕವಾಗಿ ಶಿವಾನಂದ ಮೇಲ್ಸೇತುವೆ ಕೆಳಭಾಗದ ಖಾಲಿ ಜಾಗವನ್ನು ಸಾರ್ವಜನಿಕರ ಬಳಕೆಗೆ ಅನುಕೂಲವಾಗುವಂತೆ ಅಭಿವೃದ್ಧಿ ಪಡಿಸಲು ಬಿಬಿಎಂಪಿ ಯೋಜನಾ ವಿಭಾಗ ಮುಂದಾಗಿತ್ತು. ಆದರೆ, ಕಾಮಗಾರಿ ಕಳೆದ ಮೂರು ತಿಂಗಳಿನಿಂದ ಅರ್ಧಕ್ಕೆ ಸ್ಥಗಿತಗೊಂಡಿದೆ.
ಫ್ಲೈ ಓವರ್ ಕೆಳಗೆ ಸ್ಕೇಟಿಂಗ್, ಬ್ಯಾಸ್ಕೆಟ್ ಬಾಲ್ ಕೋರ್ಟ್
ಮುಖ್ಯಮಂತ್ರಿಗಳು ಹಾಗೂ ಅನೇಕ ಸಚಿವರ ಸರ್ಕಾರಿ ನಿವಾಸಗಳು, ಗಣ್ಯರು ವಾಸಿಸುವ ಈ ರಸ್ತೆಯ ಅತ್ಯಂತ ಜನಸಂದಣಿ ಹಾಗೂ ವಾಹನ ದಟ್ಟಣೆಯಿಂದ ಸದಾ ಕೂಡಿರುತ್ತದೆ. ಈ ಭಾಗದಲ್ಲಿ ಮಕ್ಕಳಿಗೆ ಆಟವಾಡುವುದಕ್ಕೂ ಮೈದಾನವಿಲ್ಲ. ಹೀಗಾಗಿ, 493 ಮೀ. ಉದ್ದದ ಮೇಲ್ಸೇತುವೆ ಕೆಳಭಾಗದ ಸ್ಥಳವನ್ನು ಅಭಿವೃದ್ಧಿ ಪಡಿಸಿ, ಒಂದು ಸ್ಕೇಟಿಂಗ್ ಅಂಕಣ ಮತ್ತು ಬ್ಯಾಸ್ಕೆಟ್ ಬಾಲ್ ಅಂಕಣ ನಿರ್ಮಿಸಲು ಪಾಲಿಕೆ ಮುಂದಾಗಿತ್ತು. ಜತೆಗೆ ಫ್ಲೈಓವರ್‌ನ ಎರಡು ತುದಿಯಲ್ಲಿ ಒಂದೊಂದು ಶೌಚಾಲಯ ನಿರ್ಮಾಣ ಹಾಗೂ ಸಾರ್ವಜನಿಕರು ಕುಳಿತುಕೊಳ್ಳಲು ಆಸನ ವ್ಯವಸ್ಥೆ ಮಾಡುವ ಕಾಮಗಾರಿಯೂ ಇದೀಗ ಸ್ಥಗಿತಗೊಂಡಿದೆ.
ಫ್ಲೈ ಓವರ್ ಕೆಳಗೆ ಆಟದ ಮೋಜು:
ಶಿವಾನಂದ ವೃತ್ತದಲ್ಲಿ ಬಹುತೇಕ ಉದ್ಘಾಟನೆಗೆ ಸಿದ್ಧಗೊಂಡಿರುವ ನೂತನ ಮೇಲ್ಸೇತುವೆ ಕೆಳಭಾಗದಲ್ಲಿರುವ ಸ್ಥಳಾವಕಾಶದಲ್ಲಿ ‘ಸ್ಕೇಟಿಂಗ್’ ಹಾಗೂ ‘ಬ್ಯಾಸ್ಕೆಟ್ ಬಾಲ್’ ಅಂಕಣ ನಿರ್ಮಿಸಿ ಸದ್ಬಳಕೆ ಪ್ರಯೋಗಕ್ಕೆ ಬಿಬಿಎಂಪಿ ಮುಂದಾಗಿತ್ತು. ಬಿಬಿಎಂಪಿ ವ್ಯಾಪ್ತಿಯಲ್ಲಿ ಬರೋಬ್ಬರಿ 47 ಫ್ಲೈಓವರ್‌ಗಳಿದ್ದು, ಇವುಗಳ ಕೆಳ ಭಾಗದಲ್ಲಿ ಕಸ ಸುರಿಯುವುದು, ಮೂತ್ರ ವಿಸರ್ಜನೆ ಸೇರಿ ಅನೈತಿಕ ಜಾಣಗಳಾಗಿ ಮಾರ್ಪಟಿವೆ. ಇದರಿಂದ ನಗರದ ಸ್ವಚ್ಛತೆ ಮತ್ತು ಸೌಂದರ್ಯ ಧಕ್ಕೆ ಉಂಟಾಗುತ್ತಿದೆ. ಹೀಗಾಗಿ, ಪ್ರಾಯೋಗಿಕವಾಗಿ ಶಿವಾನಂದ ಮೇಲ್ಸೇತುವೆ ಕೆಳಭಾಗದ ಸ್ಥಳವನ್ನು ಸಾರ್ವಜನಿಕರ ಬಳಕೆಗೆ ಅನುಕೂಲವಾಗುವಂತೆ ಅಭಿವೃದ್ಧಿಪಡಿಸಲು ಬಿಬಿಎಂಪಿ ಯೋಜನಾ ವಿಭಾಗ ಮುಂದಾಗ, ಕಾರ್ಯವನ್ನೂ ಆರಂಭಿಸಿತ್ತು.
ಸಂಚಾರಕ್ಕೆ ಮುಕ್ತವಾದರೂ ಹೇಗಿದೆ ಸ್ಥಿತಿ
ಸರಿಯಾಗ ಬಳಕೆಯಾದ ಫ್ರೈ ಓವರ್:
ಕುಂಟುತ್ತಾ ಸಾಗಿದ ಫ್ಲೈ ಓವರ್ ಕಾಮಗಾರಿ ಅರ್ಧಂಬರ್ಧ ಉದ್ಘಾಟನೆಯಾಗಿದ್ದು, ಅತ್ಲಾಗೆ ಪೂರ್ತಿಯೂ ಬಳಕೆಯಾಗುತ್ತಿಲ್ಲ. ನಿರೀಕ್ಷೆಯಂತೆ ಈ ಭಾಗದಲ್ಲಿ ಸ್ವಲ್ಪವೂ ಟ್ರಾಫಿಕ್ ಕಿರಿ ಕಿರಿಯೂ ತಪ್ಪಿಲ್ಲ. ಅಲ್ಲದೇ ಪ್ರಯಾಣಿಕರಿಗೆ ಈ ಭಾಗದಲ್ಲಿ ರೋಡ್ ಕ್ರಾಸ್ ಮಾಡುವುದು ತ್ರಾಸ ಎನಿಸುತ್ತಿದೆ. ಅದ್ಯಾವ ಉದ್ದೇಶದಿಂದ ಆ ಕಾಮಗಾರಿ ಆರಂಭಿಸಲಾಗಿತ್ತು, ಅದು ಯಶಸ್ವಿಯಾಗಿಲ್ಲ ಎಂಬುವುದು ಮಾತ್ರ ಸ್ಪಷ್ಟ.