ಕೆಟ್ಟುನಿಂತ ಬೈಕ್ ರಿಪೇರಿ ಮಾಡಿ ಮಧ್ಯರಾತ್ರಿ ಡ್ರಾಪ್, ರ‍್ಯಾಪಿಡೋ ಚಾಲಕನ ಹೊಗಳಿದ ಬೆಂಗಳೂರು ಮಹಿಳೆ , ಮಹಿಳೆ ಮನೆ ತಲುಪುವಷ್ಟರಲ್ಲಿ ರಾತ್ರಿ 1 ಗಂಟೆ. ಆದರೆ ಸುರಕ್ಷಿವಾಗಿ ಮನೆ ತಲುಪಿದ ಮಹಿಳೆ ಸೋಶಿಯಲ್ ಮೀಡಿಯಾದಲ್ಲಿ ನಡೆದ ಘಟನೆ ಹೇಳಿದ್ದಾಳೆ. 

ಬೆಂಗಳೂರು (ನ.25) ಬೆಂಗಳೂರು ಮಹಿಳೆ ರ‍್ಯಾಪಿಡೋ ಬೈಕ್ ಮೂಲಕ ತೆರಳುವಾಗ ಬೈಕ್ ಕೆಟ್ಟು ಹೋಗಿದೆ. ರೈಡ್ ಕ್ಯಾನ್ಸಲ್ ಮಾಡಿ ಹೋಗಲು ಬೆಳಗಿನ ಸಮಯವಲ್ಲ. ಅದು ಮಧ್ಯರಾತ್ರಿ. ಮತ್ತೊಂದು ಬೈಕ್ ಬುಕ್ ಮಾಡಿ ಪ್ರಯಾಣ ಮುಂದುವರಿಸುವುದು ಸುರಕ್ಷಿತವಲ್ಲ. ಈ ವೇಳೆ ರ‍್ಯಾಪಿಡೋ ಚಾಲಕ,ಭಯಪಡಬೇಡಿ, ಬೈಕ್ ರಿಪೇರಿ ಮಾಡಿ ನಿಮ್ಮನ್ನು ಮನೆಗೆ ಡ್ರಾಪ್ ಮಾಡುತ್ತೇನೆ ಎಂದು ಅಭಯ ನೀಡಿದ್ದಾನೆ. ಮೊಬೈಲ್ ಮೂಲಕ ಟಾರ್ಚ್ ಹಿಡಿಯುವ ಮೂಲಕ ರ‍್ಯಾಪಿಡೋ ಚಾಲಕನಿಗೆ ನೆರವಾಗಿದ್ದಾಳೆ. ಬೈಕ್ ರಿಪೇರಿ ಮಾಡಿ ಮಹಿಳೆಯನ್ನು ಡ್ರಾಪ್ ಮಾಡುವ ಹೊತ್ತಿಗೆ ರಾತ್ರಿ 1 ಗಂಟೆಯಾಗಿದೆ. ನಡೆದ ಘಟನೆಯ್ನು ಬೆಂಗಳೂರು ಮಹಿಳೆ ವಿವರಿಸಿದ್ದಾಳೆ. ಇದೇ ವೇಳೆ ರ‍್ಯಾಪಿಡೋ ಚಾಲಕನ ನೆರವನ್ನು ಶ್ಲಾಘಿಸಿದ್ದಾಳೆ.

ರಾತ್ರಿ 11.45ಕ್ಕೆ ಕೆಟ್ಟು ನಿಂತ ಬೈಕ್

ಬೆಂಗಳೂರು ಮಹಿಳೆ ಅಶಾ ಮಾನೆ ನಡೆದ ಘಟನೆಯನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾಳೆ. 38 ಕಿಲೋಮೀಟರ್ ಪ್ರಯಾಣಕ್ಕೆ ರ‍್ಯಾಪಿಡೋ ಬೈಕ್ ಬುಕ್ ಮಾಜಿದ್ದಾಳೆ. ಪ್ರಯಾಣ ಆರಂಭಗೊಂಡಿದೆ. ಸುದೀರ್ಘ ಪ್ರಯಾಣದ ಕಾರಣ ಸಮಯ ಕೊಂಚ ತೆಗೆದುಕೊಂಡಿದೆ. ಉದ್ದೇಶಿತ ಸ್ಥಳ ತಲುಪಲು ಇನ್ನೂ ಕೆಲ ಕಿಲೋಮೀಟರ್ ಬಾಕಿ ಇತ್ತು. ಅಷ್ಯರಲ್ಲೇ ಗುಂಡಿ ಬಿದ್ದ ರಸ್ತೆಯಲ್ಲಿ ಸಾಗಿದ ಬೈಕ್‌ ಕೆಟ್ಟು ನಿಂತಿದೆ. ಎರಡು ದೊಡ್ಡ ರಸ್ತೆ ಗುಂಡಿಯಿಂದ ಬೈಕ್ ಕೆಟ್ಟಿದೆ. ರಾತ್ರಿ 11.45ರ ಹೊತ್ತಿಗೆ ಬೈಕ್ ಕೆಟ್ಟು ನಿಂತಿದೆ.

ಭಯಪಡಪೇಡಿ, ಡ್ರಾಪ್ ಮಾಡುತ್ತೇನೆ

ಬೈಕ್ ಕೆಟ್ಟಿದೆ ಎಂದು ರೈಡರ್ ಹೇಳಿದ ತಕ್ಷಣ ಬೇರೊಂದು ಬೈಕ್ ಬುಕ್ ಮಾಡಲು ಅಶಾ ಮಾನೆ ಮುಂದಿಗಿದ್ದಾರೆ. ಈ ವೇಳೆ ಮೇಡಂ ಭಯಪಡಬೇಡಿ, ಬೈಕ್ ರಿಪೇರಿ ಮಾಡಿ ನಿಮ್ಮ ಮನೆಗೆ ಡ್ರಾಪ್ ಮಾಡುತ್ತೇನೆ ಎಂದು ಅಭಯ ನೀಡಿದ್ದಾರೆ. ಹೀಗಾಗಿ ಅಶಾ ಮಾನೆ ಮತ್ತೊಂದು ಬೈಕ್ ಬುಕ್ ಮಾಡುವ ಸಾಹಸ ಮಾಡಲಿಲ್ಲ. ಮಧ್ಯರಾತ್ರಿ ಈ ರೀತಿ ಬೈಕ್ ಬುಕ್ ಮಾಡಿ ಪ್ರಯಾಣ ಮುಂದುವರಿಸುವುದು ಸುರಕ್ಷಿತವೂ ಅಲ್ಲ. ಆತ ಯಾರು ಅನ್ನೋದು ಗೊತ್ತಿಲ್ಲ. ಆದರೆ ಆತನ ಮಾತಿನಿಂದ ಅಲ್ಲೆ ನಿಂತೆ. ನನ್ನ ಮೊಬೈಲ್ ಚಾರ್ಜ್ ಖಾಲಿಯಾಗಿತ್ತು. ಹೀಗಾಗಿ ಚಾಲಕನ ಮೊಬೈಲ್ ಟಾರ್ಚ್ ಆನ್ ಮಾಡಿ ಚಾಲಕನ ರಿಪೇರಿಗೆ ನರವಾದೆ ಎಂದು ಅಶಾ ಮಾನೆ ಹೇಳಿದ್ದಾರೆ.

ಕೆಲ ಹೊತ್ತಿನ ಸರ್ಕಸ್ ಬಳಿಕ ರ‍್ಯಾಪಿಡೋ ಚಾಲಕ ಬೈಕ್ ರಿಪೇರಿ ಮಾಡಿದ್ದಾನೆ. ಬಳಿಕ ಅಶಾ ಮಾನೆಯನ್ನು ಮನೆಗೆ ಡ್ರಾಪ್ ಮಾಡಿದ್ದಾನೆ. ಅಷ್ಟೊತ್ತಿಗೆ ರಾತ್ರಿ 1 ಗಂಟೆಯಾಗಿದೆ.ಸುರಕ್ಷಿತವಾಗಿ ಅಶಾ ಮಾನೆ ಮನೆ ತಲುಪಿದ್ದಾರೆ. ರ‍್ಯಾಪಿಡೋ ಬೈಕ್ ಚಾಲಕ ಮಧ್ಯ ರಾತ್ರಿ ಮಹಿಳೆಗೆ ನೀಡಿದ ನೆರವು, ಮಾನವೀಯತೆ, ಸುರಕ್ಷತೆಗೆ ಭಾರಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

View post on Instagram