ಬೆಂಗಳೂರು(ಆ.29):  ಸಿಎಂ ಬಿಎಸ್ ಯಡಿಯೂರಪ್ಪ, ಆರೋಗ್ಯ ಸಚಿವ ಶ್ರೀರಾಮುಲು ಸೇರಿದಂತೆ ಸರ್ಕಾರದ ಪ್ರಮುಖರಿಗೆ ಕೊರೋನಾ ವೈರಸ್ ತಗುಲಿ ಆಸ್ಪತ್ರೆ ಸೇರಿದ್ದರು. ಇದೀಗ ಕರ್ನಾಕದ ಶಾಸಕರು, ಸಚಿವರು ಸೇರಿದಂತೆ ಬಹುತೇಕ ನಾಯಕರಿಗೆ ಕೊರೋನಾ ವೈರಸ್ ವಕ್ಕರಿಸುತ್ತಿದೆ. ಇದೀಗ ರಾಜರಾಜೇಶ್ವರಿ ಮಾಜಿ ಶಾಸಕ ಮುನಿರತ್ನಗೆ ಕೊರೋನಾ ವೈರಸ್ ದೃಢಪಟ್ಟಿದೆ.

ಗಾಲಿ ಜನಾರ್ಧನ ರೆಡ್ಡಿಗೂ ವಕ್ಕರಿಸಿದ ಕೊರೋನಾ: ಆಸ್ಪತ್ರೆಗೆ ದಾಖಲು.

ಈ ಕುರಿತು ಮುನಿರತ್ನ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಮುನಿರತ್ನ ಹಂಚಿಕೊಂಡ ಸಂದೇಶ ಇದೀಗ ಸಂಚಲನ ಸೃಷ್ಟಿಸಿದೆ. ರಾಜರಾಜೇಶ್ವರಿ ಕ್ಷೇತ್ರದ ನನ್ನ ಎಲ್ಲಾ ಮತದಾರರ ಬಂಧುಗಳಿಗೆ ವಂದನೆಗಳು. 57 ವರ್ಷ ವಯನಸ್ಸಿನವನಾದ ನಾನು ಇಂದು ಕೋವಿಡ್ ಪರೀಕ್ಷೆ ಮಾಡಿಸಿದಾಗ ಕೊರೋನಾ ಪಾಸಿಟೀವ್ ಬಂದಿದೆ. ಕ್ಷೇಮವಾಗಿ ಬಂದರೆ ನಿಮ್ಮ ಸೇವೆ. ಇಲ್ಲದಿದ್ದರೆ ಕ್ಷಮಿಸಿಬಿಡಿ. ಇಂತಿ ನಿಮ್ಮ ಸೇವಕ ಮುನಿರತ್ನ ಎಂದು ಸಂದೇಶ ಹಂಚಿಕೊಂಡಿದ್ದಾರೆ.

ಬೆಂಗಳೂರು ನಗರದಲ್ಲಿ ಪ್ರತಿ ದಿನ ಸಾವಿರ ಸಾವಿರ ಕೊರೋನಾ ವೈರಸ್ ಪ್ರಕರಣಗಳು ದಾಖಲಾಗುತ್ತಿದೆ. ಮುಂಜಾಗ್ರತೆ, ಎಚ್ಚರಿಕೆ ವಹಿಸಿದ್ದ ಹಲವರಿಗೆ ಕೊರೋನಾ ವೈರಸ್ ತುಗಲಿದೆ.