ಬೆಂಗಳೂರು [ಅ.16]:  ಮಹಿಳೆಯರು ಸ್ನಾನಕ್ಕೆ, ಶೌಚಾಲಯಕ್ಕೆ ಹೋದಾಗ ಬಾಗಿಲು ತಟ್ಟಿವಿಕೃತಿ ಮೆರೆಯುತ್ತಿದ್ದ ಆರೋಪಿಯೊಬ್ಬ ವಿಲ್ಸನ್‌ ಗಾರ್ಡನ್‌ ಠಾಣೆ ಪೊಲೀಸರ ಬಲೆಗೆ ಬಿದ್ದಿದ್ದಾನೆ.

ಸುಧಾಮನಗರದ ಕೆ.ಎಸ್‌.ಗಾರ್ಡನ್‌ ನಿವಾಸಿ ಕನಕರಾಜ (28) ಬಂಧಿತ.

ಆರೋಪಿಗೆ ಪೋಷಕರಿಲ್ಲ. ಅಕ್ಕ-ಅಣ್ಣನ ಜತೆ ಕೆ.ಎಸ್‌.ಗಾರ್ಡನ್‌ನಲ್ಲಿ ನೆಲೆಸಿದ್ದ. ಮೆಕ್ಯಾನಿಕ್‌ ಆಗಿರುವ ಕನಕರಾಜ ರಾತ್ರಿ 10ರಿಂದ 12ರ ಸಮಯದಲ್ಲಿ ಅಪರಿಚಿತರ ಮನೆ ಬಳಿ ಹೋಗಿ, ಮಹಿಳೆಯರ ಖಾಸಗಿ ಕ್ಷಣಗಳನ್ನು ಕಿಟಕಿಯಿಂದ ನೋಡಿ, ಮನೆಯಲ್ಲಿ ಯಾರಿದ್ದೀರಾ ಎಂದು ಕೇಳಿ ಹೋಗುತ್ತಿದ್ದ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಆರೋಪಿ ಆರು ತಿಂಗಳಿಂದ ವಿಕೃತವಾಗಿ ವರ್ತಿಸುತ್ತಿದ್ದ. ಸಾರ್ವಜನಿಕರು ಶಾಂತಿನಗರ ಕ್ಷೇಮಾಭಿವೃದ್ಧಿ ಸಂಘದ ಮೂಲಕ ವಾಟ್ಸಪ್‌ ಗ್ರೂಪ್‌ ಮತ್ತು ಪೊಲೀಸ್‌ ಠಾಣೆಯ ವಾಟ್ಸಪ್‌ ಗ್ರೂಪ್‌ ಮಾಡಿಕೊಂಡು ಮಾಹಿತಿ ಹಂಚಿಕೊಳ್ಳುತ್ತಿದ್ದರು. ಒಂದು ತಿಂಗಳ ಹಿಂದೆ ಮನೆ ಬಳಿ ಎಲ್ಲಾ ಸಿಸಿ ಕ್ಯಾಮೆರಾ ಹಾಕಿಸಿಕೊಂಡಿದ್ದರು. ಆರೋಪಿಯು ಸಾಫ್ಟ್‌ವೇರ್‌ ಉದ್ಯೋಗಿಯ ಮೊದಲ ಮಹಡಿಗೆ ಹತ್ತುವ ದೃಶ್ಯಾವಳಿ ಕಾಣಿಸಿದೆ. ಕೂಡಲೇ ಈ ಬಗ್ಗೆ ವಾಟ್ಸಪ್‌ನಲ್ಲಿ ಹಂಚಿಕೊಂಡಿದ್ದರು. ಆರೋಪಿ ಅ.13ರಂದು ಇದೇ ರೀತಿ ಕೃತ್ಯ ಎಸೆಗಲು ಮುಂದಾದಾಗ ಸ್ಥಳೀಯರೇ ಆತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.