ಲಾಕ್‌ಡೌನ್ ಸಡಿಲಗೊಳಿಸಿದರೂ ಮೆಟ್ರೋ ಪ್ರಯಾಣಕ್ಕೆ ಅನುಮತಿ ನೀಡಿಲ್ಲ. ಹೀಗಾಗಿ ಮೆಟ್ರೋ ಪ್ರಯಾಣಿಕರು ಇದೀಗ ಬಿಎಂಟಿಸಿ ಸೇರಿದಂತೆ ಇತರ ಸಾರಿಗೆ ವಾಹನದಲ್ಲಿ ಸಂಚಾರ ಆರಂಭಿಸಿದ್ದಾರೆ. ಇದೀಗ ಜೂನ್ 1 ರಿಂದ ಮೆಟ್ರೋ ಆರಂಭಿಸಲು ಸಿದ್ದತೆ ನೆಡೆಸಲಾಗಿದೆ.
ಬೆಂಗಳೂರು(ಮೇ.28): ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳಲ್ಲಿ ಬಹುತೇಕರು ಮೆಟ್ರೋ ಪ್ರಯಾಣವನ್ನೇ ನೆಚ್ಚಿಕೊಂಡಿದ್ದಾರೆ. ಅದರಲ್ಲೂ ಬೆಂಗಳೂರಿನ ಟ್ರಾಫಿಕ್‌ಗೆ ಮೆಟ್ರೋಗಿಂತ ಉತ್ತಮ ಸಾರಿಗೆ ವ್ಯವಸ್ಥೆ ಮತ್ತೊಂದಿಲ್ಲ ಅನ್ನೋ ಮಾತು ಪ್ರಯಾಣಿಕರದ್ದು. ಕೊರೋನಾ ವೈರಸ್ ಕಾರಣ ಮಾರ್ಚ್ 22 ರಿಂದ ನಿಂತಿರುವ ಮೆಟ್ರೋ ಸಂಚಾರ ಇದೀಗ ಮತ್ತೆ ಆರಂಭಿಸಲು ತಯಾರಿ ನಡಿದಿದೆ. ಇದೀಗ ಜೂನ್ 1 ರಿಂದ ಮೆಟ್ರೋ ಸಂಚಾರ ಆರಂಭವಾಗುವ ಸಾಧ್ಯತೆ ಇದೆ.
"
ಈ 5 ರಾಜ್ಯಗಳಿಂದ ಬರೋ ಜನರಿಗೆ ಕರ್ನಾಟಕಕ್ಕೆ ನೋ ಎಂಟ್ರಿ: ಸಂಪುಟ ಸಭೆಯಲ್ಲಿ ತೀರ್ಮಾನ
ಸಾಮಾಜಿಕ ಅಂತರ, ಥರ್ಮಲ್ ಸ್ಕ್ಯಾನಿಂಗ್, ಸ್ಯಾನಿಟೈಸರ್ ಸೇರಿದಂತೆ ಹಲವು ಸುರಕ್ಷತಾ ಕ್ರಮಗಳನ್ನು ಅಳವಡಿಸಿಕೊಂಡು ಮೆಟ್ರೋ ಸಂಚಾರ ಜೂನ್ 1 ರಿಂದ ಆರಂಭವಾಗುವ ಸಾಧ್ಯತೆ ಹೆಚ್ಚಿದೆ. ಮೇ. 31ಕ್ಕೆ 4ನೇ ಹಂತದ ಲಾಕ್‌ಡೌನ್ ಅಂತ್ಯವಾಗಲಿದೆ. ಈ ವೇಳೆ ಮತ್ತಷ್ಟು ಕ್ಷೇತ್ರಗಳಿ ಮೇಲಿನ ಲಾಕ್‌ಡೌನ್ ಸಡಿಲಿಕೆಯಾಗಲಿದೆ. ಇದರೊಂದಿಗೆ ಮೆಟ್ರೋ ಸಂಚಾರಕ್ಕೆ ಅನುಮತಿ ಸಿಗುವ ನಿರೀಕ್ಷೆ ಇದೆ.
ಸದ್ಯ ಮೆಟ್ರೋ ಬಿಟ್ಟು ಉಳಿದೆಲ್ಲಾ ಸಂಚಾರ ಸೇವೆಗಳಿಗೆ ಅನುಮತಿ ನೀಡಲಾಗಿದೆ. ಮೇ.18ಕ್ಕೆ ಕೇಂದ್ರ ಸರ್ಕಾರ ಮೆಟ್ರೋ ಸಂಚಾರಕ್ಕೆ ಅನುಮತಿ ನೀಡುವ ನಿರೀಕ್ಷೆ ಇತ್ತು. ಹೀಗಾಗಿ ಸಂಚಾರ ಆರಂಭಕ್ಕೆ ತಯಾರಿ ನಡೆಸಿತ್ತು. ಆದರೆ ಕೇಂದ್ರ ಸರ್ಕಾರ ಅನುಮತಿ ನಿರಾಕರಿಸಿತ್ತು. ಸದ್ಯ ಮೆಟ್ರೋ ಬಿಟ್ಟು ಉಳಿದೆಲ್ಲಾ ಸಾರಿಗೆಗೆ ಅನುಮತಿ ಸಿಕ್ಕಿದೆ. ಬಿಎಂಟಿಸಿ, ಕೆಎಸ್ ಆರ್ ಟಿಸಿ, ಆತಂರಿಕ ವಿಮಾನಯಾನ, ಓಲಾ, ಊಬರ್, ಕ್ಯಾಬ್ ಎಲ್ಲಾ ಸಾರಿಗೆಗೂ ಸರ್ಕಾರ ಅನುಮತಿ ನೀಡಿದೆ.
ಮೆಟ್ರೋ ಸಂಚಾರ ಸ್ಥಗಿತಗೊಂಡು ಇಂದಿಗೆ 68 ದಿನಗಳಾಗಿವೆ. ಮೆಟ್ರೋ ದಲ್ಲಿ ಲಾಕ್ಡೌನ್ ಗೂ ಮುನ್ನ ಪ್ರತಿನಿತ್ಯ ಸರಿಸುಮಾರು 4.20 ಲಕ್ಷ ಮಂದಿ ಪ್ರಯಾಣ ಮಾಡ್ತಿದ್ದರು. ಟಿಕೆಟ್ ರೂಪದಲ್ಲಿ ಪ್ರತಿನಿತ್ಯ 1 ಕೋಟಿ ರೂಪಾಯಿ ಆದಾಯ ಹರಿದು ಬರುತ್ತಿತ್ತು. 2 ತಿಂಗಳಿಗೂ ಹೆಚ್ಚು ಕಾರ ಮೆಟ್ರೋ ಸ್ಥಗಿತಗೊಂಡಿದೆ. ಆಗಾಗಲೇ ಆರ್ಥಿಕ ನಷ್ಟ ಅನುಭವಿಸಿರುವ ಮೆಟ್ರೋ ಇದೀಗ ಅನುಮತಿಗಾಗಿ ಕಾಯುತ್ತಿದೆ.
