Asianet Suvarna News Asianet Suvarna News

Hospital: ಸರಕಾರಿ ಆಸ್ಪತ್ರೆಗೆ ಮೈಕ್ರಾನ್ ಕಂಪನಿಯಿಂದ ಆಧುನಿಕ ಸಲಕರಣೆ ಕೊಡುಗೆ, ಸಚಿವ ಅಶ್ವತ್ಥನಾರಾಯಣ ಚಾಲನೆ!

  • ಕೆ.ಸಿ.ಜನರಲ್ ಆಸ್ಪತ್ರೆ, ಬಿಬಿಎಂಪಿ ಪ್ರಾಥಮಿಕ ಕೇಂದ್ರ, ಮಾಗಡಿ ಆಸ್ಪತ್ರೆಗೆ ಸಲಕರಣೆ
  • ಮೈಕ್ರಾನ ಸಂಸ್ಥೆಯಿಂದ ಆಸ್ಪತ್ರೆಗೆ ಅತ್ಯಾಧುನಿಕ ಸಲಕರಣೆ ಕೊಡುಗೆ
  • ಕಾರ್ಯಕ್ರಮಕ್ಕೆ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಚಾಲನೆ
Micron technology  company donate modern technology equipment to government hospitals Bengaluru ckm
Author
Bengaluru, First Published Nov 16, 2021, 12:24 AM IST

ಬೆಂಗಳೂರು( ನ.16): ಕೊರೋನಾ ವೈರಸ್(Coronavirus) ವಕ್ಕರಿಸಿದ ಬಳಿಕ ದೇಶದ ಆರೋಗ್ಯ ಕ್ಷೇತ್ರದ(Health Sector) ಮೇಲೆ ಹೆಚ್ಚಿನ ಗಮನ ಹರಿಸಲಾಗುತ್ತಿದೆ. ಆಸ್ಪತ್ರೆಗಳ ಮೂಲಕ ಸೌಕರ್ಯ ಹೆಚ್ಚಳ, ಅತ್ಯಾಧುನಿಕ ಸಲಕರಣೆ ಸೇರಿದಂತೆ ಹೆಚ್ಚಿನ ಕಾಳಜಿ ವಹಿಸಲಾಗುತ್ತಿದೆ. ಸರ್ಕಾರ ಜೊತಗೆ ಹಲವು ಸಂಘ ಸಂಸ್ಥೆಗಳು ಕೈಜೋಡಿಸಿದೆ. ಇದೀಗ  ಮೈಕ್ರಾನ್ ಟೆಕ್ನಾಲಜೀಸ್ ಕಂಪನಿಯು ಕೋವಿಡ್ ಪಿಡುಗನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಮಲ್ಲೇಶ್ವರಂನ ಕೆ.ಸಿ.ಜನರಲ್ ಆಸ್ಪತ್ರೆ, ಪ್ಯಾಲೇಸ್ ಗುಟ್ಟಹಳ್ಳಿಯ ಬಿಬಿಎಂಪಿ ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಮಾಗಡಿ ಸರಕಾರಿ ಆಸ್ಪತ್ರೆಗೆ ನೀಡಿದ ಅತ್ಯಾಧುನಿಕ ಪ್ಯಾರಾ ಮಾನಿಟರ್ ಉಪಕರಣಗಳಿಗೆ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ(CN Ashwath Narayan) ಸೋಮವಾರ ಚಾಲನೆ ನೀಡಿದರು.

ಇದರ ಅಂಗವಾಗಿ ಪ್ಯಾಲೇಸ್ ಗುಟ್ಟಹಳ್ಳಿಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಂಪನಿಯು ನಲವತ್ತು  5-ಪ್ಯಾರಾ ಮಾನಿಟರ್, ಇಪ್ಪತ್ತು 6-ಪ್ಯಾರಾ ಮಾನಿಟರ್, 3 ಸಾವಿರ ಡಿಜಿಟಲ್ ಪಲ್ಸ್ ಆಕ್ಸಿಮೀಟರ್, 20 ಸಾವಿರ ಎನ್-95 ಮಾಸ್ಕ್, 50 ಸಾವಿರ ಸರ್ಜಿಕಲ್ ಮಾಸ್ಕ್, 15 ಸಾವಿರ ಏಪ್ರಾನ್ಸ್, 2 ಸಾವಿರ ಕೈಗವಸುಗಳು ಮತ್ತು 3 ಸಾವಿರ ಮುಖಕವಚಗಳನ್ನು ದೇಣಿಗೆಯಾಗಿ ಕೊಟ್ಟಿತು.

Post Mortem: ಮರಣೋತ್ತರ ಪರೀಕ್ಷೆಗೆ ಹೊಸ ನಿಯಮ ಪ್ರಕಟಿಸಿದ ಕೇಂದ್ರ ಆರೋಗ್ಯ ಇಲಾಖೆ, ಇಂದಿನಿಂದಲೇ ಜಾರಿ

ಇವುಗಳ ಪೈಕಿ ಇಪ್ಪತ್ತು 5-ಪ್ಯಾರಾ ಮಾನಿಟರುಗಳನ್ನು ಕೆ.ಸಿ.ಜನರಲ್ ಆಸ್ಪತ್ರೆಯಲ್ಲಿ, 16 ಉಪಕರಣಗಳನ್ನು ಪ್ಯಾಲೇಸ್ ಗುಟ್ಟಹಳ್ಳಿಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮತ್ತು 4 ಮಾನಿಟರುಗಳನ್ನು ರಾಮನಗರ ಜಿಲ್ಲೆಯ ಮಾಗಡಿ ಸರಕಾರಿ ಆಸ್ಪತ್ರೆಯಲ್ಲಿ ಅಳವಡಿಸಲಾಗಿದೆ.

ಸಾಧನೋಪಕರಣಗಳಿಗೆ ಚಾಲನೆ ನೀಡಿದ ಸಚಿವರು, ಅವುಗಳ ಕಾರ್ಯವಿಧಾನವನ್ನು ಪ್ರತ್ಯಕ್ಷವಾಗಿ ತಿಳಿದುಕೊಂಡರು.  ಬೆಂಗಳೂರು ಹಾಗೂ ಕರ್ನಾಟಕದಲ್ಲಿನ ಸರ್ಕಾರಿ ಆಸ್ಪತ್ರೆಗಳ ಸೌಲಭ್ಯಗಳನ್ನು ಹೆಚ್ಚಿಸಲಾಗಿದೆ. ಆಸ್ಪತ್ರೆಗಳ ಮೂಲಸೌಕರ್ಯ, ಆಧುನಿಕ ಸಲಕರಣೆಗೆ ಸರ್ಕಾರ ವಿಶೇಷ ಗಮನ ಹರಿಸಿದೆ. ಕೇಂದ್ರ ಸರ್ಕಾರದ ಸಹಯೋಗದಲ್ಲಿ ಸರ್ಕಾರಿ ಆಸ್ಪತ್ರೆಗಳನ್ನು ಮೇಲ್ದರ್ಜೆಗೆ ಏರಿಸಲಾಗುತ್ತಿದೆ. ಇದರ ನಡುವೆ ಮೈಕ್ರಾನ್ ಟೆಕ್ನಾಲಜಿಸ್ ಕಂಪನಿಗಳಂತ ಸಂಸ್ಥೆಗಳು ಸರ್ಕಾರದ ಜೊತೆ ಕೈಜೋಡಿಸಿದೆ. ಈ ಮೂಲಕ ಸರ್ಕಾರಿ ಆಸ್ಪತ್ರೆಗಳ ಸೌಲಭ್ಯ ಹೆಚ್ಚಳಕ್ಕೆ ನೆರವಾಗಿದೆ ಎಂದು ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿದರು.

ಸರ್ಕಾರಿ ಆಸ್ಪತ್ರೆಗಳನ್ನು ಗುರುತಿಸಿ ಅಲ್ಲಿನ ಸಮಸ್ಯೆಗಳಗೆ ಪರಿಹಾರವಾಗಿ ಅತ್ಯಾಧುನಿಕ ಸಲಕರಣೆ, ತಂತ್ರಜ್ಞಾನ ನೀಡುತ್ತಿರುವ ಮೈಕ್ರಾನ್ ಸಂಸ್ಥೆ ಕಾರ್ಯವನ್ನು ಅಶ್ವತ್ಥನಾರಾಯಣ ಶ್ಲಾಘಿಸಿದರು. ನಮ್ಮ ಸರ್ಕಾರ ಆರೋಗ್ಯ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ಬಿಡುಗಡೆ ಮಾಡಿದೆ. ಈ ಮೂಲಕ ಹಲವು ಸರ್ಕಾರಿ ಆರೋಗ್ಯ ಕೇಂದ್ರಗಳನ್ನು ಮೇಲ್ದರ್ಜೆಗೆ ಏರಿಸಲು ಕೆಲಸ ನಡೆಯುತ್ತಿದೆ ಎಂದು ಅಶ್ವತ್ಥನಾರಾಯಣ ಹೇಳಿದರು.

ಯುನೈಟೆಡ್ ಆಸ್ಪತ್ರೆಯಲ್ಲಿ ಪೋಷಕ ಕಲಾವಿದರಿಗೆ ಉಚಿತ ಆರೋಗ್ಯ ತಪಾಸಣೆ!

ಭವಿಷ್ಯದಲ್ಲಿ ಸರ್ಕಾರ ಜೊತೆ ಸೇರಿ ಆರೋಗ್ಯ ಕ್ಷೇತ್ರದಲ್ಲಿ ಮತ್ತಷ್ಟು ಸುಧಾರಣೆ ತರಲು ಪ್ರಯತ್ನಿಸುವುದಾಗಿ ಮೈಕ್ರಾನ್ ಸಂಸ್ಥೆ ಹೇಳಿದೆ. ಕೋವಿಡ್ ಬಳಿಕ ಪ್ರತಿ ಆಸ್ಪತ್ರೆ, ಆರೋಗ್ಯ ಕೇಂದ್ರದ ಮಹತ್ವ ತಿಳಿದಿದೆ. ಸರ್ಕಾರಿ ಆಸ್ಪತ್ರೆಗೆ ಆಗಮಿಸುವ ಪ್ರತಿಯೊಬ್ಬರು ಸೂಕ್ತ ಸೌಲಭ್ಯ ಪಡೆದುಕೊಳ್ಳಲ ಸಲಕರಣೆಗಳನ್ನು ನೀಡಲಾಗಿದೆ ಎಂದು ಮೈಕ್ರಾನ್ ಸಂಸ್ಥೆ ಹೇಳಿಕೊಂಡಿದೆ.

Follow Us:
Download App:
  • android
  • ios