ಬೆಂಗಳೂರು(ನ.06): ಕುಡಿದ ಅಮಲಿನ ಅಪರಿಚಿತನಿಗೆ ಸತ್ಕಾರ ನೀಡಿ ಬಳಿಕ ಹತ್ಯೆಗೆ ಯತ್ನಿಸಿದ ಆರೋಪದ ಮೇರೆಗೆ ಅಂಚೆ ಇಲಾಖೆ ಉದ್ಯೋಗಿಯೊಬ್ಬನನ್ನು ಎಚ್‌ಎಎಲ್‌ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಗುರುರಾಜ ಲೇಔಟ್‌ನ ಸುಹಾಸ್‌ ಬಂಧಿತನಾಗಿದ್ದು, ಕೆಲ ದಿನಗಳ ಹಿಂದೆ ರಸ್ತೆ ಬದಿ ನಿಂತಿದ್ದ ತುಮಕೂರಿನ ರಾಜು ಎಂಬಾತನನ್ನು ಡ್ರಾಪ್‌ ನೆಪದಲ್ಲಿ ಮನೆಗೆ ಕರೆದೊಯ್ದು ಈ ಕೃತ್ಯ ಎಸಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಮೈಸೂರು: ಪೊಲೀಸ್ ವಿಚಾರಣೆಗೆ ಹೆದರಿ ಆ್ಯಸಿಡ್ ಕುಡಿದ..!

ಅಂಚೆ ಇಲಾಖೆಯಲ್ಲಿ ಉದ್ಯೋಗದಲ್ಲಿದ್ದ ಸುಹಾಸ್‌, ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಪತ್ನಿಯಿಂದ ಆತ ಪ್ರತ್ಯೇಕವಾಗಿದ್ದಾನೆ. ಕೆಲಸ ಮುಗಿಸಿಕೊಂಡು ಅ.26ರಂದು ರಾತ್ರಿ ಮದ್ಯ ಸೇವಿಸಿ ಆತ ಮನೆಗೆ ಮರಳುತ್ತಿದ್ದ. ಆಗ ಮಾರ್ಗ ಮಧ್ಯೆ ತುಮಕೂರಿನ ರಾಜು ಸಹ ಪಾನಮತ್ತರಾಗಿ ರಸ್ತೆ ಬದಿ ನಿಂತಿದ್ದಾರೆ. ಆಗ ಬೈಕ್‌ ನಿಲ್ಲಿಸಿದ ಸುಹಾಸ್‌, ಡ್ರಾಪ್‌ ಕೊಡುವುದಾಗಿ ಹೇಳಿ ರಾಜು ಅವರನ್ನು ಬೈಕ್‌ಗೆ ಹತ್ತಿಸಿಕೊಂಡಿದ್ದಾನೆ. ರಾಜು, ನನಗೆ ನಗರದಲ್ಲಿ ಯಾರು ಪರಿಚಿತರಿಲ್ಲ. ಎಲ್ಲಿಗೆ ಹೋಗಬೇಕು ಗೊತ್ತಾಗುತ್ತಿಲ್ಲ ಎಂದಿದ್ದಾರೆ. ಈ ಮಾತಿಗೆ ಸುಹಾಸ್‌, ನನ್ನ ಮನೆಯಲ್ಲಿ ರಾತ್ರಿ ತಂಗಿದ್ದು ಬೆಳಗ್ಗೆ ನಿಮ್ಮೂರಿಗೆ ಹೊರಡಿ ಎಂದು ಹೇಳಿ ಮನೆಗೆ ಕರೆದೊಯ್ದಿದ್ದಾನೆ. ತರುವಾಯ ನಡುರಾತ್ರಿ ಕಳೆದ ಮೇಲೆ ನಿದ್ರೆಯಲ್ಲಿದ್ದ ರಾಜು ಮೇಲೆ ಆತ ಏಕಾಏಕಿ ದಾಳಿ ನಡೆಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಪತ್ನಿಯ ಕೊಂದು 3 ದಿನ ಮಂಚದ ಕೆಳಗೆ ಮುಚ್ಚಿಟ್ಟ ಭೂಪ

ಈ ವೇಳೆ ಪ್ರತಿರೋಧವನ್ನು ಲೆಕ್ಕಿಸದೆ ರಾಜನ ಕುತ್ತಿಗೆ, ಹೊಟ್ಟೆಹಾಗೂ ಎದೆಗೆ ಭಾಗಗಳಿಗೆ ಆತ ಚಾಕುವಿನಿಂದ ಇರಿದಿದ್ದಾನೆ. ಹಲ್ಲೆಯಿಂದ ಆತ ಪ್ರಜ್ಞಾಹೀನರಾಗಿದ್ದಾನೆ. ಆಗ ರಾಜು ಮೃತಪಟ್ಟಿದ್ದಾನೆ ಎಂದು ಭಾವಿಸಿದ ಸುಹಾಸ್‌, ಆತನನ್ನು ಮನೆಯಿಂದ ಹೊರಗೆ ಎಳೆದುಕೊಂಡು ಹೊರಗಡೆ ರಸ್ತೆಗೆ ಹಾಕಿದ್ದಾನೆ. ಈ ವಿಚಾರವನ್ನು ತನ್ನ ಸಂಬಂಧಿಕರ ಬಳಿ ಹೇಳಿಕೊಂಡಿದ್ದ. ಅಲ್ಲದೆ ಚರ್ಚ್ಗೆ ತೆರಳಿ ತಪ್ಪಿಗೆ ಕ್ಷಮೆ ಕೋರಿ ಪ್ರಾರ್ಥನೆ ಸಹ ಸಲ್ಲಿಸಿದ್ದ.

ಹಾಸನ: KGF ಸ್ಟೈಲ್‌ನಲ್ಲಿ ಮಗಳ ಮೇಲೆ ಹಲ್ಲೆ ಮಾಡ್ತಾನೆ ಈ ಕ್ರೂರ ತಂದೆ