ಮೈಸೂರು(ನ.05): ಪೊಲೀಸ್ ವಿಚಾರಣೆ ನಡೆಸೋ ಮೊದಲೇ, ವಿಚಾರಣೆಗೆ ಹೆದರಿ ವ್ಯಕ್ತಿಯೊಬ್ಬರು ಆ್ಯಸಿಡ್ ಕುಡಿದಿರುವ ಘಟನೆ ಮೈಸೂರಿನಲ್ಲಿ ನಡೆದಿದೆ. ಕಳ್ಳತನದ ಚಿನ್ನ ಕರಗಿಸಿದ ಸಂಬಂಧ ಪೊಲೀಸರು ತನ್ನ ವಿಚಾರಣೆ ನಡೆಸಲಿದ್ದಾರೆ ಎಂಬ ಆಲೋಚನೆಯಿಂದಲೇ ವ್ಯಕ್ತಿ ಆ್ಯಸಿಡ್ ಕುಡಿದಿದ್ದಾನೆ.

ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ಪಟ್ಟಣದಲ್ಲಿ ಘಟನೆ ನಡೆದಿದೆ. ಪಿರಿಯಾಪಟ್ಟಣದ ಕರಿಬಸಪ್ಪ ಲೇಔಟ್‌ನ ಕೃಷ್ಣಮೂರ್ತಿ ಆ್ಯಸಿಡ್ ಕುಡಿದಿರುವ ಅಕ್ಕಸಾಲಿಗ. ಬೆಂಗಳೂರಿನಲ್ಲಿ ಕಳ್ಳತನವಾದ ಮಾಲನ್ನು ಕೃಷ್ಣಮೂರ್ತಿ ಕರಗಿಸಿಕೊಟ್ಟಿದ್ದ ಎಂಬ ಆರೋಪ ಕೇಳಿ ಬಂದಿತ್ತು.

ಪತ್ನಿಯ ಕೊಂದು 3 ದಿನ ಮಂಚದ ಕೆಳಗೆ ಮುಚ್ಚಿಟ್ಟ ಭೂಪ..!

ಕದ್ದ ಚಿನ್ನ ಕರಗಿಸುತ್ತಿದ್ದ ಎಂಬ ಆರೋಪದ ಹಿನ್ನೆಯಲ್ಲಿ ವಿಚಾರಣೆ ಮಾಡಲು ಪೊಲೀಸರು ಬೆಂಗಳೂರಿನಿಂದ ಪಿರಿಯಾಪಟ್ಟಣಕ್ಕೆ ಬಂದಿದ್ದರು. ಕಳ್ಳತನದ ಚಿನ್ನಾಭರಣವನ್ನ ಖರೀದಿ ಮಾಡುತ್ತಿದ್ದ ಆರೋಪದಡಿ ಬೆಂಗಳೂರು ಪೊಲೀಸರು ವಿಚಾರಣೆ ನಡೆಸಿದ್ದರು.

ವಿಚಾರಣೆ ನಡೆಸುವ ವೇಳೆ ಕೃಷ್ಣಮೂರ್ತಿ ಅಂಗಡಿಯಲ್ಲಿದ್ದ ಆ್ಯಸಿಡ್ ಸೇವಿಸಿದ್ದಾರೆ. ಅಸ್ವಸ್ಥನಾದ ಕೃಷ್ಣಮೂರ್ತಿಯನ್ನು ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಕೃಷ್ಣಮೂರ್ತಿ ನಡೆಯಿಂದ‌ ಪೊಲೀಸರು ಕಕ್ಕಾಬಿಕ್ಕಿಯಾಗಿದ್ದಾರೆ.

ಉಕ್ಕಿಹರಿದ ಡೋಣಿ ನದಿ: ಪ್ರವಾಹದಲ್ಲಿ ಸಿಲುಕಿದ್ದ 300 ಕುರಿಗಳು ಪಾರು