Asianet Suvarna News Asianet Suvarna News

103 ಬಾರಿ ಸಂಚಾರ ನಿಯಮ ಉಲ್ಲಂಘಿಸಿದವ 104ನೇ ಬಾರಿ ಸಿಕ್ಕಿ ಬಿದ್ದ : ಬಿದ್ದ ದಂಡವೆಷ್ಟು?

103 ಟ್ರಾಫಿಕ್ ನಿಯಮ ಉಲ್ಲಂಘಿಸಿದ ವ್ಯಕ್ತಿ 104 ಬಾರಿ ಸಿಕ್ಕಿ ಬಿದ್ದಿದ್ದು, ಸಂಪೂರ್ಣ ದಂಡ ಪಾವತಿಸಿದ್ದಾನೆ. 

Man Break traffic Rules 104 Time Paid 10 thousand Fine
Author
Bengaluru, First Published Oct 14, 2019, 8:05 AM IST

ಬೆಂಗಳೂರು [ಅ.14]:  ಒಂದಲ್ಲಾ, ಎರಡಲ್ಲ ಬರೋಬ್ಬರಿ 103 ಬಾರಿ ಸಂಚಾರ ನಿಯಮ ಉಲ್ಲಂಘಿಸಿದ ದ್ವಿಚಕ್ರ ಸವಾರನೊಬ್ಬ 104 ನೇ ಬಾರಿ ಸಂಚಾರ ನಿಯಮ ಉಲ್ಲಂಘಿಸಿದ ವೇಳೆ ಜಾಲಹಳ್ಳಿ ಸಂಚಾರ ಠಾಣೆ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾನೆ. ಬಿಇಎಲ್ ನಿವಾಸಿ ಮೊಹಮ್ಮದ್ ಶಬ್ಬೀರ್ ಒಟ್ಟು 104 ಸಂಚಾರ ನಿಯಮ ಉಲ್ಲಂಘನೆಗೆ 10,400 ರು. ದಂಡ ಪಾವತಿಸಿ ಪ್ರಕರಣದಿಂದ ಮುಕ್ತಿ ಹೊಂದಿದ್ದಾನೆ. 

ಮೂಲತಃ ಮಂಗಳೂರಿನ ನಿವಾಸಿಯಾಗಿರುವ ಶಬೀರ್ ನಗರದಲ್ಲಿ ಕೆಲ ವರ್ಷಗಳಿಂದ ನೆಲೆಸಿದ್ದು, ಫುಡ್ ಡೆಲವರಿ ಬಾಯ್ ಆಗಿದ್ದಾನೆ. ಇತ್ತೀಚೆಗೆ ಜಾಲಹಳ್ಳಿ ಸಂಚಾರ ಠಾಣೆ ಸಹಾಯಕ ಪೊಲೀಸ್ ಸಬ್‌ಇನ್‌ಸ್ಪೆಕ್ಟರ್(ಎಎಸ್‌ಐ) ಪುಟ್ಟರಾಜು ಅವರು ರಾಮಚಂದ್ರಪುರ ವೃತ್ತದ ಬಳಿ ಸಂಚಾರ ನಿಯಮ ಉಲ್ಲಂಘಿಸಿದ ವಾಹನಗಳನ್ನು ತಡೆದು ದಂಡ ವಿಧಿಸುತ್ತಿದ್ದರು. ಈ ವೇಳೆ ಶಬ್ಬೀರ್ ಅದೇ ಮಾರ್ಗದಲ್ಲಿ ಬಂದಿದ್ದು, ದ್ವಿಚಕ್ರ ವಾಹನದ ಒಂದು ಸಂಖ್ಯೆ ಅಳಿಸಿರುವುದು ಕಂಡು ಬಂದಿದೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಕೂಡಲೇ ವಾಹನ ತಡೆದ ಪೊಲೀಸರು ಪರಿಶೀಲನೆ ನಡೆಸಿದಾಗ ನೋಂದಣಿ ಸಂಖ್ಯೆ ಪೈಕಿ ಒಂದು ಸಂಖ್ಯೆಯನ್ನು ಅಳಿಸಿ ಹಾಕಿದ್ದ. ಅಲ್ಲದೆ, ಹಳೆಯ ದಂಡಗಳನ್ನು ನೋಡಿದಾಗ 103 ಬಾರಿ ಉಲ್ಲಂಘನೆ ಮಾಡಿರುವುದು ತಿಳಿದು ಬಂದಿತು. 103 ಸಂಚಾರ ನಿಯಮ ಉಲ್ಲಂಘನೆ ಪೈಕಿ ಸಿಗ್ನಲ್ ಜಂಪ್, ಹೆಲ್ಮೆಟ್ ಧರಿಸದೆ ವಾಹನ ಚಾಲನೆ ಹಾಗೂ ಮೊಬೈಲ್ ಬಳಕೆ ಹೆಚ್ಚಿನ ಪ್ರಕರಣಗಳಿವೆ. ದಂಡ 10,400 ಹಣವನ್ನು ಶಬ್ಬೀರ್ ಪಾವತಿಸಿದ್ದಾನೆ ಎಂದು ಎಂದು ಸಂಚಾರ ಪೊಲೀಸರು ತಿಳಿಸಿದರು.

Follow Us:
Download App:
  • android
  • ios