ಬೆಳ್ಳಂದೂರು [ಏ. 20] ಕುಡಿದ ಮತ್ತಿನಲ್ಲಿ ಕ್ಯಾಬ್ ಚಾಲಕನ ಮೇಲೆ ಯುವತಿ ಹಲ್ಲೆ  ಮಾಡಿದ್ದಾಳೆ. ನಡು ರಸ್ತೆಯಲ್ಲೇ ಯುವತಿ ರಾದ್ದಾಂತ ಮಾಡಿದ್ದಾಳೆ. ಪ್ರಶ್ನೆ ಮಾಡಿದ್ದಕ್ಕೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾಳೆ. ಆದರೆ ಪೊಲೀಸರು ಚಾಲಕನ ಮೇಲೆಯೇ ಪ್ರಕರಣ ದಾಖಲಿಸಿದ್ದಾರೆ.

ಗಂಡನ ಸಾವನ್ನು ಪ್ರಶ್ನಿಸಿ ದೂರು ನೀಡಿದ್ದಕ್ಕೆ ಪತ್ನಿಗೆ ಹಿಗ್ಗಾಮುಗ್ಗಾ ಥಳಿತ

ಚಾಲಕರ ಮೇಲೆಯೆ ಬಿತ್ತು ಕೇಸ್ 10 ಕ್ಕು ಅಧಿಕ ಪಿಟ್ಟಿ ಕೇಸ್ ದಾಖಲಿಸಿರೋ ಬೆಳ್ಳಂದೂರು ಪೊಲೀಸರು ಯುವತಿ ಪರವಾಗಿ ನಿಂತಿದ್ದಾರೆ. ಬೆಳ್ಳಂದೂರು ಪೊಲೀಸ್ ಠಾಣೆಯ ಎಎಸ್ ಐ ಮಂಜುನಾಥ್ ರಿಂದ ಚಾಲಕರ ಮೇಲೆ ದಬ್ಬಾಳಿಕೆ ಮಾಡಿದ  ಆರೋಪವೂ ಕೇಳಿ ಬಂದಿದೆ.

ನೊಂದ ಚಾಲಕರು ಎಎಸ್ ಐ ಮಂಜುನಾಥ್ ದಬ್ಬಾಳಿಕೆ ವಿರೋಧಿಸಿ ಪ್ರತಿಭಟನೆಗೆ ಮುಂದಾಗಿದ್ದು ಪೊಲೀಸ್ ಠಾಣೆ ಮುಂದೆ ಜಮಾಯಿಸಿದ್ದರು.