ಬೆಂಗಳೂರು[ಜು. 11] ಇದು ಭಾನುವಾರ ಸಂಜೆ ನಡೆದ ಘಟನೆ. ಆದರೆ ಇದಕ್ಕೊಂದು ಮೆಚ್ಚುಗೆ ಬೇಕೆ ಬೇಕು. ದಾರಿಯಲ್ಲಿ ಮ್ಯಾನ್ ಹೋಲ್ ಕಂಡರೆ ಏನು ಮಾಡುತ್ತೇವೆ. ಪಕ್ಕದಲ್ಲಿ ದಾರಿ ಎಲ್ಲಿದೆ ಎಂದು ಹುಡುಕಿ ಹೆಜ್ಜೆ ಇಡುತ್ತೇವೆ. ಆದರೆ ಈ ಪೊಲೀಸ್ ಹಾಗೆ ಮಾಡಿಲ್ಲ.

ಎಚ್‌ಎಸ್‌ ಆರ್ ಲೇಔಟ್ ನ ಮೂರನೇ ಹಂತದಲ್ಲಿ ತೆರಳುತ್ತಿದ್ದ ಪೊಲೀಸ್ ಅಧಿಕಾರಿ  ಎಂ.ಗಿರೀಶ್ ಅವರಿಗೆ ತೆರೆದಿರುವ ಮ್ಯಾನ್ ಹೋಲ್ ಕಂಡಿದೆ. ತಕ್ಷಣ ಸ್ವಯಂ ಕಾರ್ಯನಿರತರಾದ ಗಿರೀಶ್ ಕಲ್ಲೊಂದನ್ನು ತಂದು ಮ್ಯಾನ್ ಹೋಲ್ ಮುಚ್ಚಿದ್ದು ಶ್ಲಾಘನೆಗೆ ಪಾತ್ರವಾಗಿದ್ದಾರೆ. 

221 ರಸ್ತೆ ಗುಂಡಿ ಮುಚ್ಚಿದ ಬೆಂಗಳೂರು ಸಂಚಾರ ಪೊಲೀಸರು!

ಪೊಲೀಸ್ ಹಿರಿಯ ಅಧಿಕಾರಿಗಳು ಜತೆಗೆ ನಾಗರಿಕರು ಸಹ ಕೆಲಸವನ್ನು ಕೊಂಡಾಡಿದ್ದಾರೆ. ಇಂಥ ಮಾದರಿ ಕೆಲಸ ಮಾಡಿದ ನಿಮಗೆ ಧನ್ಯವಾದ  ಎಂದು ಹೇಳಿದ್ದಾರೆ.