ಬೆಂಗಳೂರಿನ ಇನ್ಫೋಸಿಸ್ ಕಚೇರಿಯಲ್ಲಿ ಮಹಿಳಾ ಉದ್ಯೋಗಿಯ ಶೌಚಾಲಯದಲ್ಲಿ ವಿಡಿಯೋ ಚಿತ್ರೀಕರಣ ಮಾಡಿದ ಆರೋಪದ ಮೇಲೆ ಉದ್ಯೋಗಿಯೊಬ್ಬನನ್ನು ಬಂಧಿಸಲಾಗಿದೆ. ಆರೋಪಿಯ ಮೊಬೈಲ್‌ನಲ್ಲಿ 30ಕ್ಕೂ ಹೆಚ್ಚು ಮಹಿಳೆಯರ ವಿಡಿಯೋಗಳು ಪತ್ತೆಯಾಗಿವೆ.
ಬೆಂಗಳೂರು (ಜು.2): ಮಹಿಾ ಉದ್ಯೋಗಿ ಟಾಯ್ಲೆಟ್‌ಗೆ ಹೋಗಿದ್ದಾಗ ವಿಡಿಯೋ ಚಿತ್ರೀಕರಣ ಮಾಡಿದ್ದ ಪ್ರಕರಣದಲ್ಲಿ ಇನ್ಫೋಸಿಸ್ ಉದ್ಯೋಗಿ ಬಂಧನಕ್ಕೆ ಒಳಗಾಗಿದ್ದಾರೆ. ರಹಸ್ಯವಾಗಿ ಮಹಿಳಾ ಉದ್ಯೋಗಿ ವಿಡಿಯೋ ರೆಕಾರ್ಡ್ ಮಾಡುತ್ತಿದ್ದದ್ದು ಗಮನಕ್ಕೆ ಬಂದ ಹಿನ್ನಲೆಯಲ್ಲಿ ಎಲೆಕ್ಟ್ರಾನಿಕ್ ಸಿಟಿ ಪೊಲೀಸರಿಂದ ಆರೋಪಿಯ ಬಂಧನವಾಗಿದೆ.
ಆಂಧ್ರಪ್ರದೇಶ ಮೂಲದ 28 ವರ್ಷದ ಉದ್ಯೋಗಿ ಸ್ವಪ್ನಿಲ್ ನಾಗೇಶ್ ಮಲಿ ಬಂಧಿತ ವ್ಯಕ್ತಿ. ಶೌಚಾಲಯದಲ್ಲಿ ಮಹಿಳಾ ಉದ್ಯೋಗಿ ವಿಡಿಯೋ ರೆಕಾರ್ಡ್ ಮಾಡುವಾಗಲೇ ಈತ ಸಿಕ್ಕಿಬಿದ್ದಿದ್ದಾನೆ. ರಹಸ್ಯವಾಗಿ ತನ್ನ ಮೊಬೈಲ್‌ನಲ್ಲಿ ಮಹಿಳಾ ಉದ್ಯೋಗಿಯ ಶೌಚಾಲಯದ ವಿಡಿಯೋ ರೆಕಾರ್ಡ್ ಮಾಡಿದ್ದ. ಪಕ್ಕದ ಶೌಚಾಲಯದ ಕಮೋಡ್ ಮೇಲೆ ನಿಂತು ರೆಕಾರ್ಡ್ ಮಾಡಿದ್ದಾನೆ. ಈತ ರೆಕಾರ್ಡ್ ಮಾಡುತ್ತಿರುವುದು ಎದುರುಗಡೆ ಡೋರ್ ಮೇಲೆ ಪ್ರತಿಬಿಂದ ಮೂಡಿದೆ. ಕೂಡಲೇ ಹೊರ ಬಂದು ನೋಡಿದಾಗ ಯುವತಿ ಮಾತ್ರ ಕಂಡಿದ್ದಾಳೆ. ಮತ್ತೆ ಶೌಚಾಲಯದ ಒಳ ಹೋಗಿ ಆಕೆ ಪರಿಶೀಲನೆ ಮಾಡಿದ್ದಾರೆ. ಆಗ ಮೊಬೈಲ್ ನಲ್ಲಿ ರೆಕಾರ್ಡ್ ಮಾಡುವಾಗ ಆರೋಪಿ ಸಿಕ್ಕಿಬಿದ್ದಿದ್ದಾನೆ.
ಕೂಡಲೇ ಮಹಿಳೆ ಕಿರುಚಾಡಿದ್ದು, ಅಲ್ಲಿಯೇ ಮಹಿಳಾ ಉದ್ಯೋಗಿಯ ಕ್ಷಮೆ ಕೇಳಿದ್ದಾನೆ. ಈ ಹಂತದಲ್ಲಿ ಎಚ್‌ಆರ್ ಸಿಬ್ಬಂದಿ ಬಂದು ಪರಿಶೀಲನೆ ಮಾಡಿದಾಗ ವಿಡಿಯೋ ಪತ್ತೆಯಾಗಿದೆ. ಸುಮಾರು 30ಕ್ಕೂ ಅಧಿಕ ಮಹಿಳೆಯರ ವಿಡಿಯೋ ಇದರಲ್ಲಿ ಪತ್ತೆಯಾಗಿದೆ.
ಆದರೆ, ಕಠಿಣ ಕ್ರಮಕ್ಕೆ ಮುಂದಾಗದೆ ಇನ್ಫೋಸಿಸ್ ಆಡಳಿತ ಮಂಡಳಿ ಉದ್ಯೋಗಿಯ ಕ್ಷಮೆ ಕೇಳಿಸಿ ಪ್ರಕರಣವನ್ನು ಮುಚ್ಚಿಹಾಕಲು ಮುಂದಾಗಿತ್ತು. ಆದರೆ, ಮಹಿಳಾ ಉದ್ಯೋಗಿ ಪತಿಗೆ ವಿಚಾರ ತಿಳಿದು ಗಲಾಟೆ ದೊಡ್ಡದಾಗಿದ್ದು, ಇನ್ಫೋಸಿಸ್ ಕಂಪನಿ ಬಳಿ ಮಹಿಳೆಯ ಪತಿ ಆಕ್ರೋಶ ವ್ಯಕ್ತಪಡಿಸಿದ್ದ. ಬಳಿಕ ಮಂಗಳವಾರ ಎಲೆಕ್ಟ್ರಾನಿಕ್ಸ್ ಸಿಟಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದ. ದೂರು ಆಧರಿಸಿ ಇಂದು ಎಲೆಕ್ಟ್ರಾನಿಕ್ಸ್ ಸಿಟಿ ಪೊಲೀಸರು ವ್ಯಕ್ತಿಯನ್ನು ಬಂಧಿಸಿದ್ದಾರೆ.
ಸ್ವಪ್ನಿಲ್ ನಾಗೇಶ್ ಮಲಿ ಇನ್ಫೋಸಿಸ್ ಕಂಪನಿಯ ಹೀಲೀಕ್ಸ್ ಡಿಪಾರ್ಟ್‌ಮೆಂಟ್‌ನಲ್ಲಿ ಸೀನಿಯರ್ ಅಸೋಸಿಯೇಟ್ ಕನ್ಸಲ್ಟೆಂಟ್ ಆಗಿ ಕೆಲಸ ಮಾಡುತ್ತಿದ್ದಾನೆ.
ಎಫ್‌ಐಆರ್‌ನಲ್ಲಿ ಇರೋದೇನು?
ದೂರುದಾರೆ ಇನ್ಫೋಸಿಸ್ ಕಂಪನಿಯಲ್ಲಿ ಟೆಕ್ನಿಕಲ್ ಅನಾಲಿಸ್ಟ್ ಆಗಿ ಕೆಲಸ ಮಾಡುತ್ತಿದ್ದು, ಹೆಚ್ಚಿನ ಅವಧಿಯಲ್ಲಿ ವರ್ಕ್ ಫ್ರಮ್ ಹೋಮ್‌ನಲ್ಲಿಯೇ ಇರುತ್ತಾರೆ. ಆದರೆ, ಇತ್ತೀಚೆಗೆ ಕಂಪನಿ ತಿಂಗಳಲ್ಲಿ 10 ದಿನಗಳ ಕಾಲ ಕಚೇರಿಗೆ ಬಂದು ಕೆಲಸ ಮಾಡುವುದು ಕಡ್ಡಾಯ ಮಾಡಿದೆ. ಹೀಗಿರುವಾಗ ಜೂನ್ 30 ರಂದು ಬೆಳಗ್ಗೆ 10 ಗಂಟೆಗೆ ಕಂಪನಿಗೆ ಬಂದಿದ್ದ ದೂರುದಾರೆ 11 ಗಂಟೆಯ ವೇಳೆ ಕಂಪನಿಯ ಮೂರನೇ ಮಹಡಿಯಲ್ಲಿದ್ದ ವಾಷ್‌ರೂಮ್‌ಗೆ ಹೋಗಿದ್ದಾರೆ.'
ಈ ಹಂತದಲ್ಲಿ ಅವರಿಗೆ ಎದುರುಗಡೆ ಇರುವ ಡೋರ್‌ನಲ್ಲಿ ರಿಫ್ಲೆಕ್ಶನ್ ಕಂಡುಬಂದಿದೆ. ಅದು ಏನೆಂದು ಪಕ್ಕದಲ್ಲಿ ನೋಡಿದಾಗ ತಮ್ಮ ಪಕ್ಕದ ವಾಶ್‌ರೂಮ್‌ನ ಪಕ್ಕಕ್ಕೆ ಇರುವ ಇನ್ನೊಂದು ವಾಶ್‌ರೂಮ್‌ನಿಂದ ಹುಡುಗಿಯೊಬ್ಬಳು ಹೊರಬಂದಿದ್ದಳು. ಅ ಬಳಿಕ ಮತ್ತೆ ವಾಶ್ ರೂಮ್‌ಗೆ ಹೋಗಿ ಅಲ್ಲಿ ಇದ್ದು 5-6 ನಿಮಿಷ ಗಮನಿಸಿದ ಬಳಿಕ ತಮ್ಮ ಪಕ್ಕದ ವಾಶ್‌ರೂಮ್‌ನಿಂದ ಮೊಬೈಲ್‌ಫೋನ್‌ನಿಂದ ಯಾರೋ ವಿಡಿಯೋ ಮಾಡಲು ಆರಂಭಿಸುತ್ತಿರುವುದು ಕಂಡುಬಂದಿದೆ. ಬಳಿಕ ಈಕೆ ಕೂಡ ಕಮೋಡ್ ಮೇಲೆ ನಿಂತುಕೊಂಡು ನೋಡಿದಾಗ ಯಾರೋ ಒಬ್ಬ ಹುಡುಗ ಪ್ಯಾಂಟ್ ಕಳಚಿ ತಾನು ಟಾಯ್ಲೆಟ್‌ನಲ್ಲಿ ಮೂತ್ರ ವಿಸರ್ಜನೆ ಮಾಡುತ್ತಿರುವ ವಿಡಿಯೋವನ್ನು ಮೊಬೈಲ್‌ನಲ್ಲಿ ಗುಪ್ತವಾಗಿ ರೆಕಾರ್ಡ್ ಮಾಡಿದ್ದಾನೆ. ಇದು ಗೊತ್ತಾದ ಬಳಿಕ ಆತ ಕ್ಷಮೆ ಕೇಳಿದ್ದಾನೆ. ಈ ಹಂತದಲ್ಲಿ ದೂರುದಾರೆ ಜೋರಾಗಿ ಕಿರುಚಾಡಿ, ಮಹಿಳೆಯರ ವಾಶ್‌ರೂಮ್‌ನಲ್ಲಿ ಹುಡುಗ ಇದ್ದಾನೆ ಎಂದಿದ್ದಾನೆ. ಈ ವೇಳೆ ಪರಾರಿಯಾಗಲು ಯತ್ನಿಸಿದ್ದ ಆತನನ್ನು ಇತರ ಉದ್ಯೋಗಿಗಳು ಹಿಡಿದಿದ್ದಾರೆ. ಈತ ಮೊಬೈಲ್ ಫೋನ್ ಚೆಕ್ ಮಾಡಿದಾಗ ಅದರಲ್ಲಿ ದೂರುದಾರೆಯ ವಿಡಿಯೋ ಜೊತೆ ಉಳಿದ ಮಹಿಳೆಯರ ವಿಡಿಯೋ ಕೂಡ ಇದ್ದವು.
