ಶಾಲಾ ಆವರಣಕ್ಕೂ ಕೆರೆ ನೀರು, ತೇಲಿ ಹೋದ ಪುಸ್ತಕಗಳು..!
ಹೊಸಕೆರೆಹಳ್ಳಿಯ ಕೆರೆ ಏರಿ ಒಡೆದು ತಗ್ಗು ಪ್ರದೇಶದಲ್ಲಿರುವ ಶಾರದಾ ಶಾಲಾ ಆವರಣದೊಳಗೆ ನುಗ್ಗಿದ್ದ ಪರಿಣಾಮ ಪುಸ್ತಕಗಳು ನೀರಲ್ಲಿ ತೇಲಿ ಹೋಗಿವೆ. ಕಂಪ್ಯೂಟರ್ ಸೇರಿ ಇತರ ಸಾಮಾಗ್ರಿಗಳು ಹಾನಿಗೊಳಗಾಗಿವೆ. ಶಾಲಾ ಕಾಂಪೌಂಡ್ ಕೂಡ ಕುಸಿದು ಬಿದ್ದಿದೆ.
ಬೆಂಗಳೂರು(ನ.13): ಇತ್ತೀಚೆಗೆ ನಗರದ ಹೊಸಕೆರೆಹಳ್ಳಿಯ ಕೆರೆ ಏರಿ ಒಡೆದು ತಗ್ಗು ಪ್ರದೇಶದಲ್ಲಿರುವ ಶಾರದಾ ಶಾಲಾ ಆವರಣದೊಳಗೆ ನುಗ್ಗಿದ್ದ ಪರಿಣಾಮ ₹3 ಲಕ್ಷ ಮೌಲ್ಯದ ಪುಸ್ತಕಗಳು ಕಂಪ್ಯೂಟರ್ ಮತ್ತಿತರ ವಸ್ತುಗಳಿಗೆ ಹಾನಿಯಾಗಿದೆ ಎಂದು ಶಾಲಾ ಆಡಳಿತ ಮಂಡಳಿ ಅಂದಾಜಿಸಿದೆ.
ಕಳೆದ ಶನಿವಾರ ರಾತ್ರಿ (ನ.9) ಭಾರಿ ಪ್ರಮಾಣದಲ್ಲಿ ಮಳೆಯಾದ ಪರಿಣಾಮ ಕೆರೆ ಏರಿ ಒಡೆದಿತ್ತು. ಏರಿ ಪಕ್ಕದಲ್ಲಿಯೇ ಇರುವ ಶಾರದಾ ಶಾಲಾ ಆವರಣಕ್ಕೂ ಕೆಸರು ನೀರು ನುಗ್ಗಿತ್ತು. ಇದರಿಂದ ರಸೀದಿ ಪುಸ್ತಕಗಳು, ವಿದ್ಯಾರ್ಥಿಗಳ ದಾಖಲಾತಿ ಪುಸ್ತಕಗಳು ಹಾಗೂ ಮೂರು ಕಂಪ್ಯೂಟರ್‌ಗಳು ಹಾಳಾಗಿವೆ. ಶಾಲಾ ಕಾಂಪೌಂಡ್ ಕೂಡ ಕುಸಿದು ಬಿದ್ದಿದೆ.
15 ಕಡೆ ಜೆಡಿಎಸ್ ಸ್ಪರ್ಧಿಸಲು : ಗೌಡರಿಗೆ ಸಿದ್ದರಾಮಯ್ಯ ತಿರುಗೇಟು
ಎಲ್‌ಕೆಜಿ, ಯುಕೆಜಿ ಮತ್ತು ಒಂದನೇ ತರಗತಿ ಮಕ್ಕಳ ಪುಸ್ತಕಗಳು ಕೂಡ ನೀರಿನಲ್ಲಿ ನೆನೆದು ಹಾಳಾಗಿವೆ. ಹಾನಿಯಾಗಿರುವ ಪುಸ್ತಕಗಳನ್ನು ಮಂಗಳವಾರ ಬಿಸಿಲಿನಲ್ಲಿ ಒಣಗಿಸಲಾಗಿದೆ. ರಾಜರಾಜೇಶ್ವರಿ ನಗರ ಪಾಲಿಕೆ ಸದಸ್ಯೆ ನಳಿನಿ ಮಂಜು ಅವರು ಮಂಗಳವಾರ ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಎಂದು ಉಪ ಪ್ರಾಂಶುಪಾಲರಾದ ರಾಜೇಶ್ವರಿ ತಿಳಿಸಿದ್ದಾರೆ.
ಭಾರೀ ಪ್ರಮಾಣ ದಲ್ಲಿ ಕೆಸರು ನೀರು ನುಗ್ಗಿದ್ದರಿಂದ ಶಾಲಾ ಆವರಣ ಕೆಸರುಮಯ ವಾಗಿತ್ತು. ಕಳೆದ ಎರಡು ದಿನಗಳ ಕಾಲ ಶಾಲೆಗೆ ರಜೆ ನೀಡಿ ಆವರಣವನ್ನು ಸ್ವಚ್ಛಗೊಳಿಸಲಾಗಿದೆ. ಬುಧವಾರದಿಂದ ಎಂದಿ ನಂತೆ ತರಗತಿಗಳು ನಡೆಯಲಿವೆ ಎಂದು ತಿಳಿಸಿದ್ದಾರೆ.
ದೇಶದಲ್ಲಿ ಏಕರೂಪದ ನಾಗರಿಕ ಸಂಹಿತೆ ಶೀಘ್ರ ಜಾರಿ