ಬೆಂಗಳೂರಿಗೆ ತಂಪೆರೆದ ಮಳೆ: ಖುಷಿಯಲ್ಲಿ ಮಿಂದೆದ್ದ ನೆಟ್ಟಿಗರು
ಐದು ತಿಂಗಳಿನಿಂದ ಬರಡಾಗಿದ್ದ ಬೆಂಗಳೂರಿಗೆ ಶುಕ್ರವಾರದ ವರುಣನ ಸಿಂಚನ ಉಲ್ಲಾಸ ನೀಡಿದೆ. ನಗರದ ನಿವಾಸಿಗಳು ಮಳೆಯ ವಿಡಿಯೋಗಳನ್ನು ಹಂಚಿಕೊಂಡು ಸಂಭ್ರಮಿಸಿದ್ದಾರೆ.
ಸದಾ ಉಲ್ಲಾಸಕರ ತಂಪು ಹವೆಗೆ ಹೆಸರಾಗಿದ್ದ ಬೆಂಗಳೂರು ಈ ವರ್ಷ ಬಳಲಿ ಬಾಯಾರಿ ಹೋಗಿತ್ತು. 150 ದಿನಗಳಿಂದ ಮಳೆಯಿಲ್ಲದೆ, ಕೆರೆತೊರೆಗಳು ಬತ್ತಿ, ಕುಡಿಯಲೂ ನೀರಿಲ್ಲದೆ ಸುಸ್ತಾಗಿತ್ತು. ಜೊತೆಗೆ, ಎಂದೂ ಇಲ್ಲದಷ್ಟು ತಾಪಮಾನ ಬೆಂಗಳೂರಿನ ಒಡಲನ್ನು ಮತ್ತಷ್ಟು ಬರಡಾಗಿಸಿ ಇಲ್ಲಿನ ಜನರನ್ನು ಹೈರಾಣಾಗಿಸಿತ್ತು. ನಗರವು ಮಧ್ಯಮ ಹವಾಮಾನಕ್ಕೆ ಹೆಸರುವಾಸಿಯಾಗಿದ್ದರೂ ಸಹ ಬೆಂಗಳೂರಿನ ನಿವಾಸಿಗಳು ಫ್ಯಾನ್‌ಗಳು ಮತ್ತು ಹವಾನಿಯಂತ್ರಣಗಳಿಗಾಗಿ ಪರದಾಡುವಂತಾಗಿತ್ತು.
ಪ್ರತಿಯೊಬ್ಬರೂ ಹುಯ್ಯೋ ಹುಯ್ಯೋ ಮಳೆರಾಯ ಎಂದು ಗೋಗರೆದರೂ ಏಪ್ರಿಲ್ ತಿಂಗಳಲ್ಲಿ ಮಳೆಯ ಒಂದು ಹನಿಯೂ ಬೆಂಗಳೂರಿನ ಅಳಲಿಗೆ ಕರಗಿರಲಿಲ್ಲ. ಕಳೆದ 40 ವರ್ಷಗಳಲ್ಲೇ ಇಲ್ಲದಂತೆ ಮಳೆ ಆಟವಾಡಿಸಿತ್ತು. ಆದರೆ, ಮೇ ತಿಂಗಳಲ್ಲಿ ಮಳೆರಾಯನ ಮನಸ್ಸು ಕೊಂಚ ಕರಗಿದಂತಿದೆ. ಮೇ 3ರಂದು ನಗರದಲ್ಲಿ ಮೋಡ ಮುಸುಕುತ್ತಿದ್ದಂತೆಯೇ ನಿವಾಸಿಗಳ ಸಂತೋಷಕ್ಕೆ ಪಾರವೇ ಇರಲಿಲ್ಲ.
ಆಕೆಗೆ ಒಪ್ಪಿಗೆ ಇಲ್ಲದಿದ್ದರೂ ಪತ್ನಿಯೊಂದಿಗೆ ಅಸಹಜ ಸಂಭೋಗ ಅತ್ಯಾಚಾರವಲ್ಲ!: ಮಧ್ಯ ಪ್ರದೇಶ ಹೈಕೋರ್ಟ್
ಎಲ್ಲರೂ ಮೋಡಗಟ್ಟಿದ ಬಾನನ್ನು ಸ್ಟೇಟಸ್ ಮಾಡಿಕೊಳ್ಳುತ್ತಿದ್ದಂತೆಯೇ ಸುರಿದೇ ಸುರಿದ ವರುಣ. ಈ ಸಿಂಚನಕ್ಕೆ ದೇವರು ಅಂತೂ ವರ ಕೊಟ್ಟನೆಂಬಂತೆ ಬೆಂಗಳೂರಿಗರು ಸಂಭ್ರಮಿಸಿದರು. ಬೆಂಗಳೂರು ರೈನ್ಸ್ ಎಂಬುದು ವಾಟ್ಸಾಪ್, ಟ್ವಿಟ್ಟರ್, ಫೇಸ್ಬುಕ್, ಇನ್ಸ್ಟಾ ಎಲ್ಲೆಡೆ ಟ್ರೆಂಡ್ ಆಯಿತು. ಜನರು ಇದೊಂದು ಬ್ರೇಕಿಂಗ್ ವಿಷಯವಾಗಿದ್ದು, ತಾವೇ ಬ್ರೇಕ್ ಮಾಡಬೇಕೆಂಬ ಗಡಿಬಿಡಿಯಲ್ಲಿ ಸೋಷ್ಯಲ್ ಮೀಡಿಯಾಕ್ಕೆ ಮಳೆಯನ್ನು ಎಳೆ ತಂದರು.
ಜನರು ಮಕ್ಕಳನ್ನು ಮಳೆನೀರಿನಡಿ ತಂದು ಕುಣಿದು ಕುಪ್ಪಳಿಸಿದರು, ಮಳೆ ನೀರಿನ ರೀಲ್ಸ್ ಮಾಡಿ ಶೇರ್ ಮಾಡಿದರು. ಮಳೆಯಿಂದಾದ ಟ್ರಾಫಿಕ್ ಜಾಮನ್ನು ಕೂಡಾ ದೂರದೇ ಅದರ ವಿಡಿಯೋ ಮಾಡಿದರು. ಮಳೆಯ ಹಾಡುಗಳನ್ನೆಲ್ಲ ಹಾಕಿಕೊಂಡು ಸಂಭ್ರಮಿಸಿದರು. ಈ ಮಳೆಯಿಂದಾದ ಖುಷಿಯ ಬಗ್ಗೆ ಬರೆದು ಹಂಚಿಕೊಂಡರು.
ವಿವಾಹಿತೆಯರು ತಮ್ಮ ಅತ್ತೆ ಮಾವನ ಜೊತೆ ಇರೋಕೆ ಬಯಸೋಲ್ಲ ಏಕೆ?
ಕೊನೆ ಮಳೆ ಬಂದಿದ್ದು ಯಾವಾಗ?
ನಗರದಲ್ಲಿನ ಕೊನೆಯ ಗಮನಾರ್ಹ ಮಳೆಯನ್ನು ನವೆಂಬರ್ 21, 2023 ರಂದು ದಾಖಲಿಸಲಾಗಿದೆ. ಅದು ಬಿಟ್ಟರೆ ಮೇನಲ್ಲೇ ಬಂದಿದ್ದು ಹನಿಗಳ ಸಿಂಚನ. ಈ ನಡುವೆ ಪಟ್ಟುಬಿಡದ ಶಾಖದ ಅಲೆಯು ಆರೋಗ್ಯ ಮತ್ತು ದೈನಂದಿನ ಜೀವನದ ಬಗ್ಗೆ ಕಾಳಜಿಯನ್ನು ಹುಟ್ಟುಹಾಕಿತ್ತು. ನೀರಿನ ಕೊರತೆಯಿಂದ ಪರಿಸ್ಥಿತಿಯು ಉಲ್ಬಣಗೊಂಡಿತು, ಅಸ್ವಸ್ಥತೆಯನ್ನು ಉಲ್ಬಣಗೊಳಿಸಿತು. ನಗರವು ದಾಖಲೆ-ಮುರಿಯುವ ತಾಪಮಾನವನ್ನು ಅನುಭವಿಸಿತು.
ಕಡೆಗೂ 2024 ವರ್ಷವು ಬೆಂಗಳೂರಿನ ಮಳೆ ನೋಡಿತು. ಸೆಖೆಯ ಆರ್ಭಟಕ್ಕೆ ಕೊಂಚ ಬ್ರೇಕ್ ಸಿಕ್ಕಿತು.