ದೇಶದಲ್ಲಿ ಅರಾಜಕತೆ ಸೃಷ್ಟಿಸಲು ಕಾಂಗ್ರೆಸ್ ಫಂಡಿಂಗ್ ಮಾಡುತ್ತಿದೆ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ. ಇದಕ್ಕೆ ಛಲವಾದಿ ನಾರಾಯಣಸ್ವಾಮಿ ಕೂಡ ಧ್ವನಿಗೂಡಿಸಿದ್ದಾರೆ.

ಸಿಜೆಪಿ ಹಾಗೂ ಕಾಂಗ್ರೆಸ್‌ ದೋಸ್ತಿ ಪಕ್ಕಾನಾ? ಎನ್ನುವ ಹೊತ್ತೆಲ್ಲೇ ಇದೀಗ ಕೇಂದ್ರ ಸಚಿವ ಕುಮಾರ ಸ್ವಾಮಿ ಹೊಸದೊಂದು ಸ್ಪೋಟಕ ಹೇಳಿಕೆ ನೀಡಿದ್ದಾರೆ. ದೇಶದಲ್ಲಿ ಅಭದ್ರತೆ ಮತ್ತು ಅರಾಜಕತೆ ಸೃಷ್ಟಿಸಲು ಕಾಂಗ್ರೆಸ್‌ನಿಂದಲೇ ಫಂಡಿಂಗ್ ಆಗುತ್ತಿದೆ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಆರೋಪಿಸಿದ್ದಾರೆ. ಅಲ್ಲದೇ ಇದಕ್ಕೆ ರಾಜ್ಯ ಕಾಂಗ್ರೆಸ್‌ನ ಪ್ರಮುಖ ವಲಯದಿಂದ ಹೋಗುತ್ತಿದೆ ಎನ್ನುವ ಮಾತನ್ನು ಆಡಿದ್ದಾರೆ.

ಛಲವಾದಿ ನಾರಾಯಣ ಸ್ವಾಮಿ ಹೇಳಿದ್ದೇನು?

ಎಚ್‌ಡಿಕೆ ಹೇಳಿಕಗೆ ಚಲವಾದಿ ನಾರಾಯಣ ಸ್ವಾಮಿ ಧ್ವನಿಗೂಡಿಸಿದ್ದಾರೆ. ವಿಧಾನ ಪರಿಷತ್‌ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಕಾಂಗ್ರೆಸ್ ಸರ್ಕಾರದ ಅಸಲಿ ಮುಖವಾಡ ಈಗ ಬಯಲಾಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ. ನಿಜವಾಗಿಯೂ ದೇಶದಲ್ಲಿ ಅಭದ್ರಯೆ ಸೃಷ್ಟಿಸುವ ಹುನ್ನಾರ ಎಂದು ಕುಮಾರಸ್ವಾಮಿ ಹೇಳಿಕೆಗೆ ಧ್ವನಿಗೂಡಿಸಿದ್ದಾರೆ. ಆರೋಪ ಪ್ರತ್ಯಾರೋಪದ ಕಾವು ರಾಜ್ಯಾದ್ಯಂತ ಹೆಚ್ಚಿದೆ.

ಬಾಂಗ್ಲಾ ಪ್ರೇರಿತ ಹುನ್ನಾರ!

ಆರೋಪಕ್ಕೆ ತಕ್ಕಂತೆ ಕಾಂಗ್ರೆಸ್‌ ವರ್ತಿಸುತ್ತಿದೆಯಾ ಎನ್ನುವ ಪ್ರಶ್ನೆ ಈಗಾಗಲೇ ಸಾರ್ವಜನಿಕ ವಲಯದಲ್ಲಿ ಮೂಡಿದೆ. ಈಗಾಗಲೇ ನೇಹಾ ಭೋರಾ ಬಾಂಗ್ಲಾ ಪ್ರೇರಿತ ಮಾದರಿ ಎನ್ನುವುದನ್ನು ಹೇಳಿದ್ದಾರೆ. ಆದ್ದರಿಂದ ದೇಶದಲ್ಲಿ ಗಲಭೆ ಎಬ್ಬಿಸಲು ಬಾಂಗ್ಲಾದೇಶದ ಮಾದರಿಯಿಂದ ಪ್ರೇರಿತರಾಗಿ ದೊಡ್ಡ ಸಂಚು ರೂಪಿಸಲಾಗಿದೆ ಎಂದು ನಾರಾಯಣಸ್ವಾಮಿ ಹೇಳಿದ್ದಾರೆ. ಅದೇ ರೀತಿ ರಮೇಶ ಜಗಜಿಣಗಿ ಎರಡೂ ಒಂದೇ ಪಕ್ಷ ಅಂತ ಘೋಷಿಸಲಿ ಎಂದು ಹೇಳಿದ್ದಾರೆ.

ಕಾಂಗ್ರೆಸ್-ಸಿಜೆಪಿ ವಿಲೀನದ ಲೇವಡಿ!

ನಿನ್ನೆ ಸಂಚಲನ ಮೂಡಿದ ಕಾಂಗ್ರೆಸ್‌ ಸಚಿವ ಪ್ರಿಯಾಂಕ್‌ ಖರ್ಗೆ ಹೇಳಿಕೆ ಇಂದು ವ್ಯಂಗ್ಯಾತ್ಮಕ ರೂಪವನ್ನು ಪಡೆದುಕೊಂಡಿದೆ. ಅವರ ಹೇಳಿಕೆ ವಿವಾದದ ನಡುವೆಯೇ, ಕಾಂಗ್ರೆಸ್‌ ಮತ್ತು ಸಿಜೆಪಿ ಎರಡೂ ಒಂದೇ" ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿಕೆ ನೀಡಿದ್ದಾರೆ. ಇದನ್ನೇ ಬಂಡವಾಳವಾಗಿಸಿಕೊಂಡ ಬಿಜೆಪಿ, ಕಾಂಗ್ರೆಸ್ ಧೋರಣೆ ಟೀಕಿಸಿ, ಮುಂದೊಂದು ದಿನ ಕಾಂಗ್ರೆಸ್ ಪಕ್ಷವು ಸಿಜೆಪಿಯೊಂದಿಗೆ ವಿಲೀನವಾದರೂ ಅಚ್ಚರಿಯಿಲ್ಲ ಎಂದು ಲೇವಡಿ ಮಾಡಿದೆ.

ದೆಹಲಿಯಲ್ಲಿ ಆರದ ಪ್ರತಿಭಟನೆ ಕಾವು!
ಎಸ್‌ಐಆರ್‍‌ನಲ್ಲಿ ಅಕ್ರಮ ನಡೆದಿದೆ ಎಂಬ ಆರೋಪ ಮಾಡಿ ಕಾಂಗ್ರೆಸ್‌ ಸೇರಿ ಇಂಡಿ ಮೈತ್ರಿ ಕೂಟ ಹಾಗೂ ಸಿಜೆಪಿ ಬೃಹತ್‌ ಪ್ರತಿಭಟನೆ ನಡೆಸಿದೆ. ಅಲ್ಲದೇ ಇಂದು ಎಷ್ಟೋ ಜನರನ್ನು ಬಂಧಿಸಿದೆ. ಈ ಹಿನ್ನೆಲೆಯಲ್ಲಿ ರಾಜ್ಯವ್ಯಾಪಿಯೂ ಆರೋಪ, ಪ್ರತ್ಯಾರೋಪ ಹೆಚ್ಚಿವೆ. ಆದರೆ ಗ್ಯಾನೇಶ್‌ಕುಮಾರ್‍‌ ರಾಜೀನಾಮೆ ಕೊಡ್ತಾರಾ ಎನ್ನುವುದನ್ನು ಕಾದು ನೋಡಬೇಕಿದೆ.