ಬೆಂಗಳೂರು(ನ.13): ಪತ್ರಿಕಾಗೋಷ್ಠಿಗೆ ಪುತ್ರನನ್ನು ಕರೆದೊಯ್ದು ಕಾಂಗ್ರೆಸ್ ಮುಖಂಡರೊಬ್ಬರು ಪಕ್ಷದ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಅಧಿಕೃತ ಪ್ರತ್ರಿಕಾಗೋಷ್ಠಿಗೆ ಪುತ್ರನನ್ನನು ಕರೆದುಕೊಂಡು ಹೋಗಿ, ಜೊತೆಯಲ್ಲೇ ಕುಳ್ಳಿರಿಸಿಕೊಂಡಿರೋದಕ್ಕೆ ಕಾಂಗ್ರೆಸ್ ಅಸಮಾಧಾನ ವ್ಯಕ್ತಪಡಿಸಿದೆ.

ಕೆಪಿಸಿಸಿ ಮಾಧ್ಯಮ ವಿಭಾಗದ ಮುಖ್ಯಸ್ಥ ವಿ.ಎಸ್.ಉಗ್ರಪ್ಪ ಅವರು ತಮ್ಮ ಪುತ್ರ ನಿತೀನ್ ಕುಮಾರ್ ಅವರನ್ನು ಜತೆಯಲ್ಲಿ ಕೂರಿಸಿಕೊಂಡು ಪತ್ರಿಕಾಗೋಷ್ಠಿ ನಡೆಸಿರುವುದು ವಿವಾದ ಸೃಷ್ಟಿಸಿದೆ.

ಮೋದಿಯಿಂದ 15 ಲಕ್ಷ ರೂ. ಭರವಸೆ, ಸಾಕ್ಷಿ ಇದ್ರೆ ತೋರ್ಸಿ: ಸಿದ್ದುಗೆ ಸವಾಲು

ಕೆಪಿಸಿಸಿ ಮಾಧ್ಯಮ ವಿಭಾಗದ ಮುಖ್ಯಸ್ಥ ವಿ.ಎಸ್.ಉಗ್ರಪ್ಪ ಅವರು ತಮ್ಮ ಪುತ್ರ ನಿತೀನ್ ಕುಮಾರ್ ಅವರನ್ನು ಜತೆಯಲ್ಲಿ ಕೂರಿಸಿಕೊಂಡು ಪತ್ರಿಕಾಗೋಷ್ಠಿ ನಡೆಸಿರುವುದು ವಿವಾದ ಸೃಷ್ಟಿಸಿದೆ. ಮಹಾರಾಷ್ಟ್ರದಲ್ಲಿ ರಾಷ್ಟ್ರಪತಿ ಆಡಳಿತ ಜಾರಿ ಖಂಡಿಸಲು ಮಂಗಳವಾರ ಕೆಪಿಸಿಸಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ಆಯೋಜಿಸಲಾಗಿತ್ತು

ಈ ಗೋಷ್ಠಿಯ ವೇಳೆ ವೇದಿಕೆಯಲ್ಲಿ ಉಗ್ರಪ್ಪ ಅವರೊಂದಿಗೆ ಅವರ ಪುತ್ರ ನಿತೀನ್ ಕುಮಾರ್ ಅವರು ಸಹ ಆಸೀನರಾಗಿದ್ದರು. ಇದಕ್ಕೆ ಕಾಂಗ್ರೆಸ್ ಪಕ್ಷದಲ್ಲಿಯೇ ಅಸಮಾಧಾನಕ್ಕೆ ಕಾರಣವಾಗಿದೆ. ಮುಖಂಡರು ಪರೋಕ್ಷವಾಗಿ ಬೇಸರ ವ್ಯಕ್ತಪಡಿಸಿದ್ದಾರೆ.

ಬೆಳೆ ತ್ಯಾಜ್ಯ ಸುಡುವಿಕೆ ಏರಿಕೆ: ದಿಲ್ಲಿ ಮಾಲಿನ್ಯ ಮತ್ತೆ ಗಂಭೀರ.