ಬಟ್ಟೆ ಅಡಿ ಮಲಗಿದ್ದ ಮಗುವನ್ನು ಸರಿಯಾಗಿ ಗಮನಿಸದೇ ಪೋಷಕರು ಮಗು ನಾಪತ್ತೆಯಾಗಿದ್ದ ಎಂದು ಪೊಲೀಸರಿಗೆ ದೂರು ನೀಡಿ ಪೊಲೀಸರನ್ನು ಪೇಚಿಗೆ ಸಿಲುಕಿಸಿದ್ದ ವಿಚಿತ್ರ ಘಟನೆ ಬೆಂಗಳೂರಿನ ಕೆ.ಆರ್‌ ಪುರಂನ ಜನತಾ ಕಾಲೋನಿಯಲ್ಲಿ ನಡೆದಿದೆ.

ಬೆಂಗಳೂರು: ಬಟ್ಟೆ ಅಡಿ ಮಲಗಿದ್ದ ಮಗುವನ್ನು ಸರಿಯಾಗಿ ಗಮನಿಸದೇ ಪೋಷಕರು ಮಗು ನಾಪತ್ತೆಯಾಗಿದ್ದ ಎಂದು ಪೊಲೀಸರಿಗೆ ದೂರು ನೀಡಿ ಪೊಲೀಸರನ್ನು ಪೇಚಿಗೆ ಸಿಲುಕಿಸಿದ್ದ ವಿಚಿತ್ರ ಘಟನೆ ಬೆಂಗಳೂರಿನ ಕೆ.ಆರ್‌ ಪುರಂನ ಜನತಾ ಕಾಲೋನಿಯಲ್ಲಿ ನಡೆದಿದೆ. ನಿನ್ನೆ ರಾತ್ರಿ 7.30 ಕ್ಕೆ ಪೊಲೀಸ್ ಠಾಣೆಗೆ ಬಂದ ದಂಪತಿ ಮಗು ಕಾಣೆಯಾಗಿದೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ. 

ತಮ್ಮ ಮಗು ಮನೆ ಮುಂದೆ ಆಟವಾಡುತ್ತಿದಾಗ ಕಾಣೆಯಾಗಿದೆ (Missing compalint)ಎಂದು ದೂರಿನಲ್ಲಿ ದಂಪತಿ ಉಲ್ಲೇಖಿಸಿದ್ದಾರೆ. ತಮ್ಮ ಆರು ವರ್ಷದ ಮಗು ಕಾಣೆಯಾಗಿದೆ ಎಂದು ದೂರು ನೀಡಿದ್ದರು. ದೂರು ದಾಖಲಿಸಿಕೊಂಡ ಪೊಲೀಸರು ಹುಡುಕಾಟ ನಡೆಸಿದ್ದರು. ಮಗಳನ್ನು ಎಲ್ಲಾ ಕಡೆ ಹುಡುಕಿದ್ದರೂ ಸಿಗಲಿಲ್ಲ ಹೀಗಾಗಿ ದೂರು ನೀಡಲು ಬಂದಿದ್ದೇವೆ ಎಂದು ದಂಪತಿ ತಿಳಿಸಿದ್ದರು. ಕೂಡಲೇ ಕಾರ್ಯಪ್ರವೃತ್ತರಾಗಿದ್ದ ಕೆ.ಆರ್.ಪುರಂ ಪೊಲೀಸರು (K.R. Puram), ಸಬ್ ಇನ್ಸ್ ಪೆಕ್ಟರ್ (Sub Inspector) ರಮ್ಯ ಹಾಗೂ ಸಿಬ್ಬಂದಿ ಮಗುವಿಗಾಗಿ ಎಲ್ಲಾ ಕಡೆ ಹುಡುಕಾಟ ನಡೆಸಿದ್ದಾರೆ. 

9 ವರ್ಷದ ಹಿಂದೆ ನಾಪತ್ತೆಯಾಗಿದ್ದ ಮಗಳ ಮರಳಿ ಮನೆ ಸೇರಿಸಿದ 'ಸೀಲ್ '

ಬಳಿಕ ಕಿಡ್ನಾಪ್ (Kidnap) ಆದ ಸ್ಥಳದಲ್ಲಿ ಏನಾದರೂ ಸುಳಿವು ಸಿಗುವುದೋ ಎಂದು ಪೊಲೀಸರು ಹುಡುಕಾಟಕ್ಕೆಂದು ಮನೆಗೆ ಬಂದಾಗ ಮನೆಯೊಳಗೆ ಬಟ್ಟೆ ಕೆಳಗೆ ಮಗು ಮಲಗಿ ನಿದ್ರಿಸುತ್ತಿದ್ದಿದ್ದು, ಕಂಡು ಬಂದಿದೆ. ಮಗಳು ಮಲಗಿದಾಗ ತಾಯಿ (Mother) ಒಣಗಿದ್ದ ಬಟ್ಟೆಯನ್ನು ತಂದು ಮಗುವಿನ ಮೇಲೆ ಹಾಕಿ ಹೋಗಿದ್ದಳು. ಆದರೂ ಮಗು ಮಾತ್ರ ಚೆನ್ನಾಗಿ ಮಲಗಿ ನಿದ್ರಿಸುತ್ತಿತ್ತು. ಇದಾದ ನಂತರ ತಾಯಿ ಹಾಗೂ ತಂದೆ ಮಗುವಿಗಾಗಿ ಹುಡುಕಾಟ ನಡೆಸಿದ್ದು ಕಾಣದೇ ಇದ್ದಾಗ ಗಾಬರಿಯಾಗಿ ದೂರು ನೀಡಿದ್ದಾರೆ.

ಪೋಷಕರ ಈ ಬೇಜವಾಬ್ದಾರಿಯಿಂದ ಪೊಲೀಸರು ಸುಸ್ತಾಗುವಂತಾಗಿದೆ.

The Kerala Story: 32 ಸಾವಿರ ಹುಡುಗಿಯರ ನಾಪತ್ತೆ: ಬೆಚ್ಚಿ ಬೀಳಿಸಿದ ಟ್ರೇಲರ್​!