ಬೆಂಗಳೂರು, [ ಅ.25]: ಹೊರವರ್ತುಲ ರಸ್ತೆಯಲ್ಲಿ ಬಿಎಂಟಿಸಿ ಬಸ್‌ ಸಂಚಾರಕ್ಕಾಗಿ ಪ್ರತ್ಯೇಕ ಪಥ ನಿರ್ಮಿಸಲಾಗಿದೆ. ಈ ಪಥದಲ್ಲಿ ಸಂಚರಿಸುವ ಬಸ್‌ಗಳಿಗೆ ‘ನಿಮ್ಮ ಬಸ್‌’ ಎಂದು ನಾಮಕರಣ ಮಾಡಲಾಗಿದೆ.

ಪ್ರತ್ಯೇಕ ಪಥದಲ್ಲಿ ಇನ್ನು BMTC ಬಸ್‌ ಸಂಚಾರ

ಕೆ.ಆರ್‌.ಪುರ ಟಿನ್‌ ಫ್ಯಾಕ್ಟರಿಯಿಂದ ಸಿಲ್ಕ್ ಬೋರ್ಡ್‌ ಜಂಕ್ಷನ್‌ವರೆಗೆ 18 ಕಿ.ಮೀ. (ಒಂದು ಭಾಗದಲ್ಲಿ 9 ಕಿ.ಮೀ.) ಉದ್ದದ ಪ್ರತ್ಯೇಕ ಪಥ ನಿರ್ಮಿಸಲಾಗುತ್ತಿದೆ. ಸದ್ಯ 3ರಿಂದ 4 ಕಿ.ಮೀ. ಉದ್ದದ ಮಾರ್ಗದಲ್ಲಿ ಪಥ ನಿರ್ಮಿಸಲಾಗಿದ್ದು, ಅ.31ರೊಳಗೆ ಸಂಪೂರ್ಣ ಪಥ ನಿರ್ಮಿಸಲು ನಿರ್ಧರಿಸಲಾಗಿದೆ.

BMTC ಬಸ್‌ ಪಥದಲ್ಲಿ ಬೇರೆ ವಾಹನ ಸಂಚರಿಸಿದರೆ ದಂಡ!

ಅದರಂತೆ ಈಗಾಗಲೇ ನಿರ್ಮಾಣಗೊಂಡಿರುವ ಪಥದಲ್ಲಿ ಪ್ರಾಯೋಗಿಕ ಸಂಚಾರವನ್ನು ಆರಂಭಿಸಲಾಗಿದೆ. ಮೊದಲ ಭಾಗವಾಗಿ ನವೆಂಬರ್ 1 ರಿಂದ ಸಿಲ್ಕ್ ಬೋರ್ಡ್​ನಿಂದ ಬೈಯಪ್ಪನಹಳ್ಳಿ ಬಸ್ ಲೇನ್ ನಲ್ಲಿ ಸಂಚಾರ ಆರಂಭವಾಗಲಿದ್ದು, ಈ ಯೋಜನೆಗೆ ಬಿಎಂಟಿಸಿ ‘ನಿಮ್ಮ ಬಸ್’ ಎಂದು ಹೆಸರು ಅಂತಿಮಗೊಳಿಸಿದೆ.

ಜತೆಗೆ ಪ್ರತ್ಯೇಕ ಲೋಗೋವನ್ನು ಸಿದ್ಧಪಡಿಸಿ, ಬಸ್‌ಗಳ ಮೇಲೆ ಅಂಟಿಸಲಾಗುತ್ತಿದೆ. ಆ ಮೂಲಕ ಬಸ್‌ಗಳ ಬಗ್ಗೆ ಜನರಲ್ಲಿ ಅಭಿಮಾನವನ್ನುಂಟು ಮಾಡುವ ಉದ್ದೇಶವನ್ನು ಬಿಎಂಟಿಸಿ ಹೊಂದಿದೆ.

BMTC ಬಸ್‌ಗೆ ವಿಶೇಷ ದಾರಿ; ಪ್ರಯಾಣಿಕರೇ ನೆಮ್ಮದಿಯಿಂದ ಮಾಡಿ ಸವಾರಿ!

ಒಟ್ಟಿನಲ್ಲಿ ​ ಟ್ರ್ರಾಫಿಕ್​ನಿಂದಾಗಿ ಬಸ್​ಗಳ ವೇಗ ಆಮೆ ನಡಿಗೆಯಂತಾಗಿದೆ. ಇದಕ್ಕೆ ಬ್ರೇಕ್​ ಹಾಕಿ ಕುದುರೆ ವೇಗ ನೀಡುವ ನಿರ್ಧಾರಕ್ಕೆ ಬಂದಿರುವ ಬಿಎಂಟಿಸಿ, ಲೇನ್ ಪ್ಲಾನ್​ ಕೈಗೆತ್ತಿಕೊಂಡಿದೆ.