ಕುಡಿಯುವ ನೀರು ಬೇರೆ ಉಪಯೋಗಕ್ಕೆ ಬಳಸುತ್ತಿದ್ದೀರಾ? ವ್ಯರ್ಥ ಮಾಡುತ್ತಿದ್ದೀರಾ? ಆದೇಶ ಹೊರಡಿಸಿದ ಒಂದೇ ವಾರದಲ್ಲಿ ಬೆಂಗಳೂರು ಜಲ ಮಂಡಳಿ ಬರೋಬ್ಬರಿ 6 ಲಕ್ಷ ರೂಪಾಯಿ ವಸೂಲಿ ಮಾಡಿದೆ.
ಬೆಂಗಳೂರು(ಫೆ.25) ಬೇಸಿಗೆ ಬಿಸಿಲು ಹೆಚ್ಚಾಗುತ್ತಿದೆ. ನೀರಿಗೆ ಹಾಹಾಕರ ಶುರುವಾಗಿದೆ. ಬೆಂಗಳೂರಿನಲ್ಲಿ ಹಲವಡೆ ಈಗಲೇ ಬೋರಿನ ನೀರು ಪಾತಾಳ ತಲುಪಿದೆ. ಹಲವು ಏರಿಯಾಗಳಲ್ಲಿ ಕುಡಿಯುವ ನೀರಿನ ಸಮಸ್ಯೆಗಳು ಎದರಾಗುತ್ತಿದೆ. ಹೀಗಾಗಿ ಮೊದಲೆ ಎಚ್ಚೆತ್ತುಕೊಂಡಿರುವ ಬೆಂಗಳೂರು ಜಲಮ ಮಂಡಳಿ ಕಳೆದ ವಾರ ಮಹತ್ವದ ಆದೇಶ ಹೊರಡಿಸಿತ್ತು. ನೀರು ಪೊಲು ಮಾಡುವವರಿಗೆ ದಂಡ ವಿಧಿಸುವುದಾಗಿ ಎಚ್ಚರಿಸಿತ್ತು. ಇದೀಗ ಒಂದೇ ವಾರದಲ್ಲಿ ಬೆಂಗಳೂರು ಜಲಮಂಡಳಿ ಬರೋಬ್ಬರಿ 6 ಲಕ್ಷ ರೂಪಾಯಿ ದಂಡ ರೂಪದಲ್ಲಿ ವಸೂಲಿ ಮಾಡಿದೆ.
ಒಂದು ವಾರದಲ್ಲಿ ಬೆಂಗಳೂರು ಜಲಮಂಡಳಿ ಬರೋಬ್ಬರಿ 112 ಮಂದಿ ನಿಯಮ ಉಲ್ಲಂಘಿಸಿದವರ ವಿರುದ್ಧ ಕ್ರಮ ಕೈಗೊಂಡಿದೆ. ಕುಡಿಯವ ನೀರನ್ನು ಅನಗತ್ಯ ಕಾರ್ಯಗಳಿಗೆ ಬಳಕೆ ಮಾಡಿದ್ದಕ್ಕೆ ಈ ದಂಡ ವಿಧಿಸಲಾಗಿದೆ. ಕುಡಿಯವ ನೀರನ್ನು ಕುಡಿಯಲು ಮಾತ್ರ ಬಳಕೆ ಮಾಡಬೇಕು. ನಿಮ್ಮ ಮನೆಯಲ್ಲಿ ನೀರು ಯಥೇಚ್ಚವಾಗಿದ್ದರೂ ಕುಡಿಯವ ನೀರನ್ನು ಕುಡಿಯಲು ಬಿಟ್ಟು ಬೇರೆ ಕಾರ್ಯಗಳಿಗೆ ಉಪಯೋಗಿಸಿದರೆ ದಂಡ ತಪ್ಪಿದ್ದಲ್ಲ.
ಮೇಕೆದಾಟು ಕುಡಿಯುವ ನೀರಿನ ಯೋಜನೆಗೆ ಅನುಮೋದನೆ ಸಿಗುವ ವಿಶ್ವಾಸ: ಸಂಸದ ಡಾ.ಮಂಜುನಾಥ್
ಜಲಮಂಡಳಿಯ ಹೊಸ ಆದೇಶದ ಪ್ರಕಾರ ಕುಡಿಯವ ನೀರನ್ನು ವಾಹನ ಸ್ವಚ್ಚ ಮಾಡಲು, ಹೂವಿನ ತೋಟ, ಕಟ್ಟಡ ನಿರ್ಮಾಣ, ಮನೆ ವರಾಂಡ ಸ್ವಚ್ಚಗೊಳಿಸಲು, ಮನೋರಂಜಕವಾಗಿ ಬಳಸುವ ಕಾರಂಜಿಯಂತ ಆರ್ಷಕಣೆಗೆ ಬಳಕೆ ಮಾಡುವಂತಿಲ್ಲ. ಇನ್ನು ಸಿನಿಮಾ ಮಂದಿರ, ಮಾಲ್ ಸೇರಿದಂತೆ ಸಾರ್ವಜನಿಕರು ಸೇರುವ ಕಡೆಗಳಲ್ಲಿ ಕುಡಿಯುವ ನೀರನ್ನು ಬೇರೆ ಉಪಯೋಗಕ್ಕೆ ಬಳಸುವಂತಿಲ್ಲ. ರಸ್ತೆ ನಿರ್ಮಾಣ, ಸ್ವಚ್ಚತಾ ಕಾರ್ಯ ಸೇರಿದಂತೆ ಯಾವುದೇ ಇತರ ಉಯೋಗಕ್ಕೆ ಕುಡಿಯುವ ನೀರು ಬಳಸಿದರೆ ದಂಡ ವಿಧಿಸಲಾಗುತ್ತದೆ.
ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಕಾಯ್ದೆ-1964ರ ಅಡಿಯಲ್ಲಿ ಕಲಂ 33 ಮತ್ತು 34 ರ ಅನುಸಾರ ದಂಡ ವಸೂಲಿ ಮಾಡಲಾಗುತ್ತಿದೆ. ಕಳೆದ ಒಂದು ವಾರದಲ್ಲಿ 112 ಪ್ರಕರಣ ದಾಖಲಾಗಿದೆ. ಇವರಿಂದ 5.60 ಲಕ್ಷ ರೂಪಾಯಿ ದಂಡ ವಸೂಲಿ ಮಾಡಲಾಗಿದೆ. ಈ ಮೂಲಕ ಕುಡಿಯವ ನೀರನ್ನು ಸಮಪರ್ಕವಾಗಿ ಬಳಸುವಂತ ಮಾಡಲು ಹಾಗೂ ನೀರಿಗೆ ಎದುರಾಗುವ ಹಾಹಾಕಾರ ತಪ್ಪಿಸಲು ಈ ಕ್ರಮ ಕೈಗೊಳ್ಳಲಾಗಿದೆ. ಈ ಆದೇಶವನ್ನು ಬೆಂಗಳೂರಿನ ಎಲ್ಲೆಡೆ ಪರಿಣಾಮಕಾರಿಯಾಗಿ ಜಾರಿ ಮಾಡಲಾಗಿದೆ. ಹೀಗಾಗಿ ಸಾರ್ವಜನಿಕರು ನೀರು ಪೋಲಾಗದಂತೆ ಎಚ್ಚರ ವಹಿಸುವುದು ಅತ್ಯಗತ್ಯ. ಕುಡಿಯುವ ನೀರನ್ನು ಅತ್ಯಂತ ಜಾಗರೂಕತೆಯಿಂದ ಬಳಸುವುದು ಒಳಿತು.
