Bengaluru Auto Fare ಆಟೋ ಪ್ರಯಾಣದ ಪರಿಷ್ಕೃತ ದರ ಪಟ್ಟಿ ಪ್ರಕಟ, ಮೀಟರ್ ಮಾರ್ಪಾಡಿಗೆ ಡೆಡ್‌ಲೈನ್!

  • ಡಿಸೆಂಬರ್ 1 ರಿಂದ ಬೆಂಗಳೂರು ಆಟೋ ಪ್ರಯಾಣದ ಹೆಚ್ಚಳ
  • ಆಟೋ ದರದ ಪರಿಷ್ಕೃತ ದರ ಪಟ್ಟಿ ಪ್ರಕಟ 
  • ಆಟೋಗಳ ಮೀಟರ್ ಮಾರ್ಪಾಟಿಗೆ ಡೆಡ್‌ಲೈನ್ ನೀಡಿದ ಸಾರಿಗೆ ಪ್ರಾಧಿಕಾರ
Bengaluru Urban district administration releases Revised Auto rickshaw fare list ckm

ಬೆಂಗಳೂರು(ಡಿ.07): ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಿಂದ ಹಲವು ವಸ್ತುಗಳ ಬೆಲೆ ಹೆಚ್ಚಾಗಿದೆ. ಜೀವನ ದುಬಾರಿಯಾಗಿದೆ. ಇದರ ಬೆನ್ನಲ್ಲೇ ಬೆಂಗಳೂರಲ್ಲಿ(Bengaluru) ಆಟೋ ಪ್ರಯಾಣ ದರ(Auto Fare) ಈಗಾಗಲೇ ಹೆಚ್ಚಾಗಿದೆ. ಡಿಸೆಂಬರ್ 1 ರಿಂದ ಬೆಂಗಳೂರು ಆಟೋ ದರ ಹೆಚ್ಚಳವಾಗಿದೆ. ಇದೀಗ ಪ್ರಾದೇಶಿಕ ಸಾರಿಗೆ ಪ್ರಾಧಿಕಾರ ಪರಿಷ್ಕೃತ ಆಟೋ ಪ್ರಯಾಣ ದರ ಪಟ್ಟಿ(New rates) ಪ್ರಕಟಿಸಿದೆ. ಇದೇ ವೇಳೆ ಆಟೋ ಮಾಲೀಕರು, ಚಾಲಕರಿಗೆ ಪರಿಷ್ಕೃತ ದರಕ್ಕೆ ತಕ್ಕಂತೆ ಮೀಟರ್(Auto Meeter) ಮಾರ್ಪಾಟು ಮಾಡಲು ಡೆಡ್‌ಲೈನ್ ನೀಡಿದೆ.

ಹೊಸ ದರ ಪಟ್ಟಿಯಲ್ಲಿ ನೂತನ ದರದ ಕುರಿತು ಸಂಪೂರ್ಣ ವಿವರ ನೀಡಲಾಗಿದೆ. ಇದಕ್ಕೆ ತಕ್ಕಂತೆ ಆಟೋದಲ್ಲಿ ಅಳವಡಿಸಿರುವ ಮೀಟರ್ ಮಾರ್ಪಾಡು ಮಾಡಲು 3 ತಿಂಗಳ ಅವಧಿ ನೀಡಲಾಗಿದೆ. 3 ತಿಂಗಳಲ್ಲಿ ಆಟೋ ರಿಕ್ಷಾ(auto-rickshaw) ಮೀಟರ್ ಮಾರ್ಪಾಟು ಮಾಡಬೇಕು ಎಂದಿದೆ. ಬೆಂಗಳೂರಿನ ಬಹುತೇಕ ಆಟೋಗಳು ಮೀಟರ್‌ನಲ್ಲಿ ಈಗಾಗಲೇ ಮಾರ್ಪಾಟು ಮಾಡಿದೆ. 

Bengaluru Auto Fare: ಬೆಲೆ ಏರಿಕೆ ಮಧ್ಯೆ ಇಂದಿನಿಂದ ಆಟೋ ದರ ಹೆಚ್ಚಳ

ಹೊಸ ದರ ಪ್ರಕಾರ ಮಿನಿಮಮ್(Minimum rate) ಆಟೋ ಪ್ರಯಾಣ ದರವನ್ನು 25 ರೂಪಾಯಿಂದ 30 ರೂಪಾಯಿಗೆ ಹೆಚ್ಚಿಸಲಾಗಿದೆ. ಈ ಹಿಂದಿನ ದರಕ್ಕಿಂತ 5 ರೂಪಾಯಿ ಹೆಚ್ಚಿಸಲಾಗಿದೆ. 0 ಯಿಂದ 1.9 ಕಿಲೋಮೀಟರ್‌ಗೆ 30 ರೂಪಾಯಿ ನೀಡಬೇಕಿದೆ. ಇನ್ನು 5 ಕಿಲೋಮೀಟರ್ ಅಂತರಕ್ಕೆ ಈ ಹಿಂದೆ 65 ರೂಪಾಯಿ ಚಾರ್ಜ್ ಮಾಡಲಾಗುತ್ತಿತ್ತು. ಇದೀಗ 75 ರೂಪಾಯಿ ನೀಡಬೇಕಿದೆ. 10 ಕಿಲೋಮೀಟರ್ ಅಟೋ ಪ್ರಯಾಣ ಹಳೇ ದರ 130 ರೂಪಾಯಿ, ಹೊಸ ದರ 150 ರೂಪಾಯಿ. ಇನ್ನು 15 ಕಿಲೋಮೀಟರ್ ಆಟೋ ಪ್ರಯಾಣಕ್ಕೆ ದರ ಹೆಚ್ಚಳಕ್ಕೂ ಮೊದಲು 195 ರೂಪಾಯಿ ಇತ್ತು. ಪರಿಷ್ಕೃತ ದರದ ಪ್ರಕಾರ 225 ರೂಪಾಯಿ ನೀಡಬೇಕು. 20 ಕಿ.ಮೀ ಪ್ರಯಾಣಕ್ಕೆ ಹಳೇ ದರ 260 ರೂಪಾಯಿ ಇದ್ದರೆ ಹೊಸ ದರ 300 ರೂಪಾಯಿ ಆಗಿದೆ. ಇನ್ನು 25 ಕಿ.ಮೀ ಪ್ರಯಾಣಕ್ಕೆ ಹಳೆ ದರ 325 ರೂಪಾಯಿ ಇದ್ದರೆ, ಇದೀಗ 375 ರೂಪಾಯಿ ಆಗಿದೆ.

Bengaluru Urban district administration releases Revised Auto rickshaw fare list ckm

ಮೋದಿ ಸರ್ಕಾರಕ್ಕೆ  ವರ್ಷದ ಸಂಭ್ರಮ : ಆಟೋ ಬಾಡಿಗೆ 1 ರು.

ಪೆಟ್ರೋಲ್, ಡೀಸೆಲ್ ಬೆಲೆ(Petrol Diesel) ಏರಿಕೆಯಿಂದ ಎಲ್ಲಾ ವಸ್ತುಗಳ ಬೆಲೆ ಏರಿಕೆಯಾಗಿದೆ. ಸಾರಿಗೆ ದುಬಾರಿಯಾಗಿದೆ. ಹೀಗಾಗಿ ಆಟೋ ಪ್ರಯಾಣ ದರ ಏರಿಕೆ ಮಾಡಲು ಆಟೋ ಚಾಲಕರ ಸಂಘ ಆಗ್ರಹಿಸಿತ್ತು. ಸತತ ಮನವಿ ಮೂಲಕ ಚಾಲಕರ ಸಂಕಷ್ಟ ಪರಿಹರಿಸುವಂತೆ ಮನವಿ ಮಾಡಿತ್ತು. ಇತ್ತ ಗಗನಕ್ಕೇರಿದ ಇಂಧನ ದರದಿಂದ ಆಟೋ ಪ್ರಯಾಣ ದರ ಏರಿಕೆ ಅನಿವಾರ್ಯವಾಗಿತ್ತು. ಹೀಗಾಗಿ 9 ವರ್ಷಗಳ ಬಳಿಕ ಬೆಂಗಳೂರು ಆಟೋ ಪ್ರಯಾಣ ದರ ಹೆಚ್ಚಳವಾಗಿದೆ. 

2019ರಲ್ಲೇ ಆಟೋ ಚಾಲಕರು ಪ್ರಯಾಣ ದರ ಏರಿಕೆಗೆ ಮನವಿ ಮಾಡಿತ್ತು. ಆದರೆ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ  85 ರೂಪಾಯಿ ದಾಟಿರಲಿಲ್ಲ. ಹೀಗಾಗಿ ಸರ್ಕಾರ ಹಾಗೂ ಪ್ರಾದೇಶಿಕ ಸಾರಿಗೆ ಪ್ರಾಧಿಕಾರ ಪ್ರಯಾಣ ಹೆಚ್ಚಳಕ್ಕೆ ಮುಂದಾಗಿರಲಿಲ್ಲ. ಇದೀಗ ಅಬಕಾರಿ ಸುಂಕ ಇಳಿಸಿದರೂ ಪೆಟ್ರೋಲ್ ಬೆಲೆ 100 ರೂಪಾಯಿ ಗಡಿಯಿಂದ ಕೆಳಗಿಳಿದಿಲ್ಲ. ಬೆಂಗಳೂರಿನಲ್ಲಿ ಸರಾಸರಿ ಪ್ರಕಾರ ಪ್ರತಿ ದಿನ 2 ಲಕ್ಷ ಮಂದಿ ಆಟೋ ಸಾರಿಗೆಯನ್ನೇ ನೆಚ್ಚಿಕೊಂಡಿದ್ದಾರೆ.  

ಈ ಹಿಂದೆ 2013ರಲ್ಲಿ ಬೆಂಗಳೂರು ಆಟೋ ಪ್ರಯಾಣದ ದರೆ ಏರಿಕೆ ಮಾಡಲಾಗಿತ್ತು. ಕನಿಷ್ಠ ಪ್ರಯಾಣ ದರವನ್ನು 20 ರೂಪಾಯಿಯಿಂದ 25 ರೂಪಾಯಿಗೆ ಏರಿಕೆ ಮಾಡಲಾಗಿತ್ತು. ಇದೀಗ 25 ರಿಂದ 30 ರೂಪಾಯಿಗೆ ಏರಿಕೆ ಮಾಡಲಾಗಿದೆ. ಇಂಧನ ದರ ಮತ್ತಷ್ಟು ಏರಿಕೆಯಾದರೆ ಆಟೋ ಪ್ರಯಾಣ ದರ ಮತ್ತೆ ಹೆಚ್ಚಳವಾದರೂ ಅಚ್ಚರಿಯಿಲ್ಲ.
 

Latest Videos
Follow Us:
Download App:
  • android
  • ios