ಮೋದಿ ಸರ್ಕಾರಕ್ಕೆ 4 ವರ್ಷ : ಆಟೋ ಬಾಡಿಗೆ 1 ರು.
ಕೇಂದ್ರದ ನರೇಂದ್ರ ಮೋದಿ ಸರ್ಕಾರ ಯಶಸ್ವಿಯಾಗಿ ನಾಲ್ಕು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಇಲ್ಲಿನ ರಿಕ್ಷಾ ಚಾಲಕರೊಬ್ಬರು, ಒಂದು ರುಪಾಯಿ ಬಾಡಿಗೆ ಪಡೆಯುವ ಮೂಲಕ ಮೋದಿ ಮೇಲೆ ತನ್ನ ಉತ್ಕಟ ಅಭಿಮಾನ ತೋರಿಸಿದ್ದಾರೆ.
ಕುಂದಾಪುರ: ಕೇಂದ್ರದ ನರೇಂದ್ರ ಮೋದಿ ಸರ್ಕಾರ ಯಶಸ್ವಿಯಾಗಿ ನಾಲ್ಕು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಇಲ್ಲಿನ ರಿಕ್ಷಾ ಚಾಲಕರೊಬ್ಬರು, ಒಂದು ರುಪಾಯಿ ಬಾಡಿಗೆ ಪಡೆಯುವ ಮೂಲಕ ಮೋದಿ ಮೇಲೆ ತನ್ನ ಉತ್ಕಟ ಅಭಿಮಾನ ತೋರಿಸಿದ್ದಾರೆ.
ಇಲ್ಲಿ ವಿನಾಯಕ ಚಿತ್ರಮಂದಿರ ರಿಕ್ಷಾನಿಲ್ದಾಣದ ಆಟೋ ಚಾಲಕ ಸತೀಶ್ ಪ್ರಭು ಅವರು ಶನಿವಾರ ಮತ್ತು ಭಾನುವಾರ 5 ಕಿ.ಮೀ. ವ್ಯಾಪ್ತಿಯಲ್ಲಿ ಪ್ರಯಾಣಿಕರಿಂದ ಕೇವಲ ಒಂದು ರು. ಮಾತ್ರ ಪಡೆದಿದ್ದಾರೆ, ಇನ್ನೂ 3 ದಿನ ಅವರು ಇದೇ ರೀತಿ ತಮ್ಮ ಮೋದಿ ಅಭಿಮಾನ ಪ್ರದರ್ಶಿಸಲಿದ್ದಾರೆ.
ಮೋದಿ ಸರ್ಕಾರದ ಹಿಂದಿನ 3 ವರ್ಷ ಕೂಡ ಅವರು ತಮ್ಮ ಈ ರಿಯಾಯತಿ ಸೇವೆ ನೀಡಿದ್ದರು. ಮೋದಿ ಮಾಡುತ್ತಿರುವ ಅದ್ಭುತ ದೇಶ ಸೇವೆಗೆ ನಾನು ಈ ರೀತಿ ಸಣ್ಣ ಮಟ್ಟದ ಗೌರವ ಸಲ್ಲಿಸುತಿದ್ದೇನೆ ಎಂದು ಸತೀಶ್ ಪ್ರಭು ಹೇಳಿದ್ದಾರೆ.