ವೇಗಾ ಸಿಟಿ ಜಂಕ್ಷನ್‌ ಬಳಿ ರಸ್ತೆಯ ರಾಂಗ್‌ಸೈಡ್‌ನಲ್ಲಿ ಬೈಕ್ ಸವಾರಿ ಮಾಡುತ್ತಿರುವುದನ್ನು ಸಾಮಾಜಿಕ ಮಾಧ್ಯಮ ಬಳಕೆದಾರರು ಪೋಸ್ಟ್ ಮಾಡಿದ ನಂತರ ಬೈಕ್ ಸವಾರನನ್ನು ಬಂಧಿಸಲಾಗಿದೆ.

ಬೆಂಗಳೂರು (ಸೆ.27): ಬರೋಬ್ಬರಿ 99 ಟ್ರಾಫಿಕ್‌ ನಿಯಮ ಉಲ್ಲಂಘನೆ ಮಾಡಿದ ಬೈಕ್‌ ಸವಾರನನ್ನು ಬೆಂಗಳೂರು ಪೊಲೀಸರು ಸಾರ್ವಜನಿಕರು ನೀಡಿದ ದೂರಿನ ಮೇರೆಗೆ ಬಂಧಿಸಿದ್ದಾರೆ. ಈ 99 ಟ್ರಾಫಿಕ್‌ ನಿಯಮ ಉಲ್ಲಂಘನೆಯಿಂದ 56 ಸಾವಿರ ರೂಪಾಯಿ ದಂಡ ಪಾವತಿಯನ್ನು ಆತ ಬಾಕಿ ಇರಿಸಿಕೊಂಡಿದ್ದ ಎನ್ನಲಾಗಿದೆ. ಮೈಕೋ ಲೇಔಟ್‌ ಪೊಲೀಸ್‌ ಠಾಣೆಯ ಸಿಬ್ಬಂದಿ ಬೈಕ್‌ಅನ್ನು ವಶಪಡಿಸಿಕೊಳ್ಳಲು ಯಶಸ್ವಿಯಾಗಿದ್ದು, ಬೈಕ್‌ ವಿರುದ್ಧ ಎಫ್‌ಐಆರ್‌ ದಾಖಲು ಮಾಡಿದ್ದಾರೆ. ಸಂಚಾರ ಮತ್ತು ರಸ್ತೆ ಸುರಕ್ಷತೆ ವಿಭಾಗದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಅಲೋಕ್ ಕುಮಾರ್, ದಕ್ಷಿಣ ವಿಭಾಗದ ಟ್ರಾಫಿಕ್ ಡಿಸಿಪಿ ಮತ್ತು ಅವರ ತಂಡವು ಬೈಕ್ ಸವಾರನನ್ನು ಬಂಧಿಸಿದ್ದಕ್ಕಾಗಿ ಶ್ಲಾಘನೆ ಮಾಡಿದ್ದಾರೆ. ಸೋಶಿಯಲ್‌ ಮೀಡಿಯಾದಲ್ಲಿ ಬಳಕೆದಾರರೊಬ್ಬರು ವೇಗಾ ಸಿಟಿ ಜಂಕ್ಷನ್ ಬಳಿ ತಪ್ಪು ದಾರಿಯಲ್ಲಿ ಸವಾರಿ ಮಾಡುತ್ತಿದ್ದ ಇದೇ ಬೈಕ್‌ ಸವಾರನ ವೀಡಿಯೊವನ್ನು ಅಪ್‌ಲೋಡ್ ಮಾಡಿದ ನಂತರ ಬೈಕ್ ಸವಾರನನ್ನು ಬಂಧಿಸಲಾಗಿದೆ. ಪ್ರಸನ್ನ ಕುಮಾರ್ ಎಂಬ ವ್ಯಕ್ತಿ ಪ್ಲಾಟ್‌ಫಾರ್ಮ್ ಎಕ್ಸ್‌ನಲ್ಲಿ ಬೆಂಗಳೂರು ಟ್ರಾಫಿಕ್ ಪೊಲೀಸರು ಮತ್ತು ಅಲೋಕ್ ಕುಮಾರ್ ಅವರನ್ನು ಟ್ಯಾಗ್ ಮಾಡುವ ಮೂಲಕ ವೀಡಿಯೊವನ್ನು ಹಂಚಿಕೊಂಡಿದ್ದರು.

ಸಾಮಾಜಿಕ ಜಾಲತಾಣಗಳಲ್ಲಿ ಸಂಚಾರ ನಿಯಮ ಉಲ್ಲಂಘನೆ ಮಾಡಿರುವ ಬಗ್ಗೆ ಬೆಂಗಳೂರು ಟ್ರಾಫಿಕ್ ಪೊಲೀಸರು ಪ್ರತಿಕ್ರಿಯಿಸಿದ್ದಾರೆ. ಯಾವುದೇ ಸಂಚಾರ ನಿಯಮ ಉಲ್ಲಂಘನೆ ಕಂಡುಬಂದಲ್ಲಿ ಸಾಮಾಜಿಕ ಜಾಲತಾಣಗಳ ಮೂಲಕ ಮಾಹಿತಿ ನೀಡುವಂತೆ ಪೊಲೀಸರು ವಿನಂತಿಸಿದ್ದಾರೆ. "ಇದರ ಬಗ್ಗೆ ನಮಗೆ ತಿಳಿಸಿದ್ದಕ್ಕಾಗಿ ನಾವು ನಿಮ್ಮನ್ನು ಪ್ರಶಂಸಿಸುತ್ತೇವೆ. ಉಲ್ಲಂಘನೆಗಳ ಬಗ್ಗೆ ಕ್ರಮ ಕೈಗೊಳ್ಳಲಾಗುವುದುಉ, ಸಂಚಾರ-ಸಂಬಂಧಿತ ಉಲ್ಲಂಘನೆಗಳನ್ನು ವರದಿ ಮಾಡಲು ನೀವು ಪಬ್ಲಿಕ್‌ ಐ ಪೋರ್ಟಲ್ ಅನ್ನು ಬಳಸಬಹುದು, ಇದು ಸಂಚಾರ ಉಲ್ಲಂಘನೆಗಳನ್ನು ಜಾರಿಗೊಳಿಸಲು ಸಾರ್ವಜನಿಕರಿಗೆ ಅನುಕೂಲವಾಗುತ್ತದೆ ಎಂದು ಬೆಂಗಳೂರು ಸಂಚಾರ ಪೊಲೀಸರು ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

Bengaluru Police: ಪರೇಡ್‌ ಸೌಧನ್‌- ವಿಶ್ರಮ್‌ಗೆ ತಿಲಾಂಜಲಿ, ಕನ್ನಡದಲ್ಲಿ ಕಮಾಂಡಿಂಗ್‌ ಕೊಟ್ಟ ಪೊಲೀಸರು

Bengaluru: ಮಹಿಳಾ ಸಂಚಾರಿ ಪೊಲೀಸ್‌ ಹೃದಯಾಘಾತದಿಂದ ಸಾವು: ಅನಾಥವಾದ ಮಗು