Asianet Suvarna News Asianet Suvarna News

ಸಾರಿಗೆ ಇಲಾಖೆಗೆ ಮುತ್ತಿಗೆ ಹಾಕಿದವರಿಗೆ ತಕ್ಕ ಶಾಸ್ತಿ; ಒಂದೇ ದಿನ 800 ಆಟೋಗಳ ಮೇಲೆ ನಿಯಮ ಉಲ್ಲಂಘನೆ ಕೇಸ್

ಕಳೆದೆರಡು ದಿನಗಳ ಹಿಂದೆ ಸಾರಿಗೆ ಇಲಾಖೆಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದ ಆಟೋ ಚಾಲಕರಿಗೆ ಬೆಂಗಳೂರು ಸಂಚಾರಿ ಪೊಲೀಸರು ಶಾಸ್ತಿ ಮಾಡಿದ್ದಾರೆ. ಒಂದೇ ದಿನದಲ್ಲಿ ಬರೋಬ್ಬರಿ 800ಕ್ಕೂ ಅಧಿಕ ಆಟೋಗಳಿಗೆ ಸಂಚಾರ ನಿಯಮ ಉಲ್ಲಂಘನೆಗೆ 3.48 ಲಕ್ಷ ರೂ. ದಂಡ ವಿಧಿಸಿದ್ದಾರೆ.

Bengaluru traffic police fined to 800 autos in only one day and collecting Rs 3 48 lakh sat
Author
First Published Jul 6, 2024, 9:14 PM IST | Last Updated Jul 6, 2024, 9:14 PM IST

ಬೆಂಗಳೂರು (ಜು.06): ಕಳೆದೆರಡು ದಿನಗಳ ಹಿಂದೆ ಸಾರಿಗೆ ಇಲಾಖೆಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದ ಆಟೋ ಚಾಲಕರಿಗೆ ಬೆಂಗಳೂರು ಸಂಚಾರಿ ಪೊಲೀಸರು ಶಾಸ್ತಿ ಮಾಡಿದ್ದಾರೆ. ಒಂದೇ ದಿನದಲ್ಲಿ ಬರೋಬ್ಬರಿ 800ಕ್ಕೂ ಅಧಿಕ ಆಟೋಗಳಿಗೆ ಸಂಚಾರ ನಿಯಮ ಉಲ್ಲಂಘನೆಗೆ 3.48 ಲಕ್ಷ ರೂ. ದಂಡ ವಿಧಿಸಿದ್ದಾರೆ.

ಕಳೆದ ಎರಡು ದಿನಗಳ ಹಿಂದ ಎಲೆಕ್ಟ್ರಿಕ್ ಬೈಕ್ ಟ್ಯಾಕ್ಸಿ ಸಂಚಾರ ನಿಷೇಧ ಸೇರಿದಂತೆ ಹಲವು ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಆಟೋ ಹಾಗೂ ಬೈಕ್ ಟ್ಯಾಕ್ಸಿ ಚಾಲಕರು ಮತ್ತು ಮಾಲೀಕರು ಸಾರಿಗೆ ಇಲಾಖೆಗೆ ಮುತ್ತಿಗೆ ಹಾಕಿ ದೊಂಬಿ ಎಬ್ಬಿಸಿದ್ದರು. ಇದರ ಬೆನ್ನಲ್ಲಿಯೇ ಬೆಂಗಳೂರು ಸಂಚಾರಿ ಪೊಲೀಸ್ ಇಲಾಖೆಯಿಂದ ಒಂದೇ ದಿನದಲ್ಲಿ ನಿಯಮ ಉಲ್ಲಂಘಟನೆ ಮಾಡಿದ 800 ಆಟೋಗಳ ಮೇಲೆ ಕೇಸ್ ದಾಖಲಿಸಲಾಗಿದ್ದು, ಇನ್ನೂ ಕಾರ್ಯಾಚರಣೆ ಮುಂದುವರೆಸಿದೆ.

ಹೌದು, ಬೆಂಗಳೂರಿನಲ್ಲಿ ಕಳೆದ 24 ಗಂಟೆಗಳಲ್ಲಿ ಬೆಂಗಳೂರು ಪೂರ್ವ ಹಾಗೂ ಪಶ್ಚಿಮ ವಿಭಾಗದಲ್ಲಿ ಸಂಚಾರಿ ನಿಯಮಗಳನ್ನು ಉಲ್ಲಂಘನೆ ಮಾಡಿದ 800ಕ್ಕೂ ಹೆಚ್ಚು ಆಟೊ ಚಾಲಕರ ಮೇಲೆ ಪ್ರಕರಣ ದಾಖಲಿಸಲಾಗಿದೆ. ಈ ಮೂಲಕ 800 ಕೇಸ್‌ಗಳಲ್ಲಿ ಆಟೋ ಚಾಲಕರಿಂದ ಬರೋಬ್ಬರಿ 3.48 ಲಕ್ಷ ರೂ. ದಂಡವನ್ನು ಸಂಗ್ರಹಿಸಿದ್ದಾರೆ. ಇನ್ನು ಈ ಮೂಲಕ ನಗರದಲ್ಲಿ ಸಂಚಾರಿ ನಿಯಮ ಉಲ್ಲಂಘನೆ ಆಗುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಹದ್ದಿನ ಕಣ್ಣಿಡಲಾಗಿದೆ ಎಂದು ಬೆಂಗಳೂರು ಪೊಲೀಸರು ತಿಳಿಸಿದ್ದಾರೆ.

ಕೆಎಸ್‌ಆರ್‌ಟಿಸಿ ನೌಕರರ ಅಂತರ ನಿಗಮ ವರ್ಗಾವಣೆ ಪಟ್ಟಿ ಬಿಡುಗಡೆ; ನಿಮ್ಮ ಹೆಸರಿದೆಯಾ ನೋಡಿ..

ಯಾವಾವ ಉದ್ದೇಶಕ್ಕೆ ದಂಡ:
ಇನ್ನು ಪೊಲೀಸರ ಮಾಹಿತಿ ಪ್ರಕಾರ ಬೆಂಗಳೂರು ಪೂರ್ವ ವಿಭಾಗದ ಪೊಲೀಸರು 300ಕ್ಕೂ ಹೆಚ್ಚು ಪ್ರಕರಣಗಳನ್ನು ದಾಖಲಿಸಿ 1.52 ಲಕ್ಷ ರೂ. ದಂಡ ಸಂಗ್ರಹ ಮಾಡಿದ್ದಾರೆ. ಮುಂದುವರೆದು, ಪಶ್ಚಿಮ ವಿಭಾಗದ ಸಂಚಾರಿ ಪೊಲೀಸರು 525 ಆಟೋ ಚಾಲಕರ ವಿರುದ್ಧ ಪ್ರಕರಣ ದಾಖಲಿಸಿ ಬರೋಬ್ಬರಿ 1.96 ಲಕ್ಷ ರೂ. ದಂಡ ವಸೂಲಿ ಮಾಡಿದ್ದಾರೆ. ಇನ್ನು ಟ್ರಾಫಿಕ್ ಉಲ್ಲಂಘನೆ ಪ್ರಕರಣದ ಹೆಚ್ಚಾದಂತೆಲ್ಲಾ ದಂಡ ವಸೂಲಿ ಪ್ರಮಾಣವನ್ನು ಹೆಚ್ಚಳ ಮಾಡಲಾಗುತ್ತದೆ. ಇನ್ನು ದಂಡ ವಿಧಿಸಿದ ಪ್ರಕರಣಗಳಲ್ಲಿ ಮೀಟರ್ ಅಳವಡಿಕೆ ಮಾಡದೇ ಹೆಚ್ಚಿನ ಶುಲ್ಕ ವಸೂಲಿ, ಸಮವಸ್ತ್ರವಿಲ್ಲದೇ ಆಟೋ ಚಾಲನೆ, ತಪ್ಪಾದ ಲೈನ್‌ನಲ್ಲಿ ಆಟೋ ಸಂಚಾರ ಹಾಗೂ ಪಾರ್ಕಿಂಗ್ ರಹೊತ ಸ್ಥಳಗಳಲ್ಲಿ ಆಟೋ ನಿಲುಗಡೆ ಮಾಡಿದ್ದಕ್ಕೆ ದಂಡ ವಿಧಿಸಲಾಗಿದೆ.

ಸ್ಟಾರ್ ಕ್ರಿಕೆಟರ್ ವಿರಾಟ್ ಕೊಹ್ಲಿ ಫೋನ್ ವಾಲ್‌ಪೇಪರ್‌ನಲ್ಲಿರುವ ಕರೋಲಿ ಬಾಬಾ ಯಾರು ಗೊತ್ತಾ?

ಅನಧಿಕೃತ ನಿಲುಗಡೆ ಮೂಲದ ಪಾದಚಾರಿ ಮಾರ್ಗ ಒತ್ತುವರಿ:
ಬೆಂಗಳೂರಿನಲ್ಲಿ ಆಟೋ ನಿಲುಗಡೆಗೆ ನಿಗದಿ ಮಾಡಿದ ಸ್ಥಳಗಳಿದ್ದರೂ ಎಲ್ಲೆಂದರಲ್ಲಿ ಪಾದಚಾರಿ ಮಾರ್ಗಗಳ ಮೇಲೆ ಆಟೋ ನಿಲುಗಡೆ ಮಾಡುತ್ತಾರೆ. ಇದರಿಂದ ಪಾದಾಚಾರಿಗಳ ಸಂಚಾರಕ್ಕೆ ಸಮಸ್ಯೆ ಮಾಡುವುದಲ್ಲದೇ, ಅಂಗಡಿ ಮುಂಗಟ್ಟುಗಳ ವ್ಯಾಪಾರಕ್ಕೂ ತೊಂದರೆ ಉಂಟುಮಾಡಿದ್ದಾರೆ. ಇನ್ನು ಪಾದಾಚಾರಿ ಮಾರ್ಗದ ಮೇಲೆ ಆಟೋ ನಿಲುಗಡೆ ಮಾಡಿದ ಬಹುತೇಕ ಪ್ರಕರಣಗಳನ್ನು ಅಂಗಡಿ ಮುಂಗಟ್ಟುಗಳ ಮಾಲೀಕರೇ ದೂರು ನೀಡಿದ್ದಾರೆ. ಪೂರ್ವ ವಿಭಾಗದ ಸಂಚಾರ ಪೊಲೀಸರು ಅಕ್ರಮ ಹೈ-ಬೀಮ್ ಎಲ್‌ಇಡಿ ದೀಪಗಳನ್ನು ಬಳಸುತ್ತಿರುವ ವಾಹನಗಳ ವಿರುದ್ಧ ಕಠಿಣ ಕ್ರಮವನ್ನು ನಡೆಸಿದರು. ಸಂಚಾರಿ ಪೊಲೀಸರು 520ಕ್ಕೂ ಹೆಚ್ಚು ವಾಹನಗಳನ್ನು ತಪಾಸಣೆಗೆ ಒಳಪಡಿಸಿದ್ದು ಈ ಪೈಕಿ 217 ವಾಹನಗಳಲ್ಲಿ ಅಕ್ರಮವಾಗಿ ಹೈ-ಭೀಮ್ ಲೈಟ್ ಬಳಕೆ ಮಾಡುತ್ತಿದ್ದರಿಂದ 1.07 ಲಕ್ಷ ರೂ.  ದಂಡ ವಿಧಿಸಲಾಗಿದೆ. 

Latest Videos
Follow Us:
Download App:
  • android
  • ios