ಬೆಂಗಳೂರು[ಜೂ. 21] ಮೂರುದಿನಗಳಿಂದ ರಸ್ತೆಬದಿ ಬೆತ್ತಲೆಯಾಗಿ ಬಿದ್ದಿದ್ದ ವ್ಯಕ್ತಿಗೆ ಪ್ರೀತಿ ವಾತ್ಸಲ್ಯ ತೋರಿದ ಟ್ರಾಫಿಕ್ ಪೊಲೀಸರ ಕೆಲಸಕ್ಕೆ ಎಲ್ಲ ಕಡೆಯಿಂದ ಮೆಚ್ಚುಗೆ ವ್ಯಕ್ತವಾಗುತ್ತರಿದೆ.

ಹೊರಮಾವು ಜಂಕ್ಷನ್ ಕೆಳ ಸೇತುವೆ ಬಳಿ ಮೂರುದಿನಿಗಳಿಂದ ಆಹಾರವಿಲ್ಲದೆ ಬಿದ್ದಿದ್ದ ಅಪರಿಚಿತ ವ್ಯಕ್ತಿ ದಾರುಣ ಸ್ಥಿತಿಯಲ್ಲಿ ಇದ್ದರು.  ಇದನ್ನ ನೋಡಿ ಮಾನವೀಯತೆ ಮೆರೆದ ಬಾಣಸವಾಡಿ ಸಂಚಾರಿ ಪೇದೆಗಳು ಅಪರಿಚಿತ ವ್ಯಕ್ತಿಗೆ ಊಟ ಮಾಡಿಸಿದ್ದಾರೆ.

ಆಕ್ಸಿಜನ್ ಸಿಲಿಂಡರ್ ನೊಂದಿಗೆ IAS ಬರೆದವಳಿಗೊಂದು ಸಲಾಂ

ನಂತರ ತಾವೆ ಖುದ್ದಾಗಿ ಬಟ್ಟೆ ತಂದು ವ್ಯಕ್ತಿಗೆ ತೋಡಿಸಿದ್ದಾರೆ. ಪೇದೆಗಳ ಕಾರ್ಯಕ್ಕೆ ಸ್ಥಳೀಯರಿಂದ ಪ್ರಶಂಸೆ ವ್ಯಕ್ತವಾಗಿದೆ. ಪೇದೆಗಳದಾದ ಅಹ್ಮದ್ ಹಾಗೂ ನಯಾಜ್ ಬಾಷಾ ಮಾನವೀತೆಗೆ ಜನ ಸ್ಪಂದನೆ ನೀಡಿದ್ದಾರೆ. ಬೆಂಗಳೂರು ಜೋರು ಮಳೆಗೆ ತೋಯ್ದು ತೊಪ್ಪೆಯಾಗಿದ್ದಾಗ ಕಿತ್ತು ಹೋಗಿದ್ದ ರಸ್ತೆ ಡಿವೈಡರ್ ಗಳನ್ನು ಟ್ರಾಫಿಕ್ ಪೊಲೀಸರೇ ಮುಂದಾಗಿ ದುರಸ್ತಿ ಮಾಡಿದ್ದರು.