ಆಕ್ಸಿಜನ್ ಸಿಲಿಂಡರ್ ನೊಂದಿಗೆ IAS ಬರೆದವಳಿಗೊಂದು ಸಲಾಂ


ಜೀವನೋತ್ಸಾಹದ ನಿಜ ನಿದರ್ಶನಗಳಿಗೆ ಆಗಾಗ ಒ೦ದೊಂದೆ ಉದಾಹರಣೆಗಳು ಸಿಗುತ್ತಿರುತ್ತವೆ. ಈ ಯುವತಿ IAS  ಪರೀಕ್ಷೆ ಎದುರಿಸಿದ ಬಗೆಯನ್ನು ನೋಡಲೇಬೇಕು. ಮೂಳೆ ಕಾಯಿಲೆಯನ್ನು ಮೆಟ್ಟಿ ನಿಂತು ಈಕೆ ಪರೀಕ್ಷೆ ಬರೆದಿರುವ ಬಗೆ ಎಂಥವರಲ್ಲಿಯೂ ಉತ್ಸಾಹ ತರಬಲ್ಲದು.

Kerala Woman With Rare Bone Disease Gives UPSC Exam with Oxygen Cylinder

ನವದೆಹಲಿ [ಜೂ. 03]  ಕೇರಳದ ಕೊಟ್ಟಾಯಂನ 24 ವರ್ಷ ವಯಸ್ಸಿನ  ಈ ಯುವತಿಗೆ ಅಪರೂಪದಲ್ಲೇ ಅಪರೂಪ ಎನ್ನುವ ಮೂಳೆ ಕಾಯಿಲೆಯೊಂದು (bone disorder) ಕಾಣಿಸಿಕೊಂಡಿದೆ. ಆದರೆ ಕಾಯಿಲೆ ಈಕೆಯ ಧ್ಯೇಯ-ಗುರಿ ಮೇಲೆ ಯಾವ ಪರಿಣಾಮವನ್ನು  ಉಂಟು ಮಾಡಿಲ್ಲ.

ಐಎಎಸ್ ಅಧಿಕಾರಿಯಾಗಬೇಕೆಂಬ ಕನಸು ಹೊತ್ತು ವಿನ ನಡುವೆ, ಉಸಿರಾಟದ ತೊಂದರೆ ಲೆಕ್ಕಿಸದೆ ಅಕ್ಸಿಜನ್ ಸಿಲಿಂಡರ್ ನೊಂದಿಗೆ ನಾಗರಿಕ ಸೇವಾ ಪೂರ್ವಭಾವಿ (UPSC CSE prelims) ಪರೀಕ್ಷೆ ಬರೆದಿದ್ದಾರೆ. 

ನೋವಿನಲ್ಲೇ ಪರೀಕ್ಷೆ ಬರೆದ ಯುವತಿ ಹೆಸರು ಲತೀಶಾ ಅನ್ಸಾರಿ. ಕೇಂದ್ರ ಲೋಕಸೇವಾ ಆಯೋಗ ಆಯೋಜಿಸಿದ್ದ ನಾಗರಿಕ ಸೇವಾ ಪೂರ್ವಭಾವಿ ಪರೀಕ್ಷೆಗೆ ಲತೀಶಾ ಅನ್ಸಾರಿ ಆಕ್ಸಿಜನ್ ಸಿಲಿಂಡರ್‌ ಜತೆಗೆ ವೀಲ್‌ಚೇರ್‌ನಲ್ಲಿ ಆಗಮಿಸಿ ಪರೀಕ್ಷೆ ಬರೆದಿದ್ದಾರೆ.

9 ವರ್ಷದ ಹಿಂದೆ ರೈಲ್ವೆ ನಿಲ್ದಾಣದಲ್ಲಿ ಏನಾಯ್ತು? ಜಗ್ಗೇಶ್ ಹಂಚಿಕೊಂಡ ಕಣ್ಣೀರ ಕತೆ

ಲತೀಶಾ ಅವರಿಗೆ ಹುಟ್ಟಿನಿಂದ type II Osteogenesis Imperfecta  ಎಂಬ ಸಮಸ್ಯೆ ಇದೆ.  ಅಂದರೆ ಮೂಳೆ ಅತಿ ಬೇಗನೇ ಮುರಿಯುತ್ತದೆ.  ಕಳೆದ ಒಂದು ವರ್ಷದಿಂದ ಶ್ವಾಸಕೋಶದಲ್ಲಿ ಸಮಸ್ಯೆ ಉಂಟಾಗಿದ್ದು, ಉಸಿರಾಟದ ತೊಂದರೆ ಅಧಿಕವಾಗಿದೆ. ಹೀಗಾಗಿ, ಯಾವಾಗಲೂ ಆಕ್ಸಿಜನ್ ಸಿಲಿಂಡರ್‌ ಹೊತ್ತು ತಿರುಗಬೇಕಾದಿದ್ದು ಅನಿವಾರ್ಯ.

ಇದೆಲ್ಲದರ ನಡುವೆ  ಯುಪಿಎಸ್ ಸಿ ಎಕ್ಸಾಂ ಬರೆಯಬೇಕಾಗಿ ಬಂದಿದೆ. ಲತೀಶಾರ ಅನಾರೋಗ್ಯದ ಬಗ್ಗೆ ಕೊಟ್ಟಾಯಂನ ಜಿಲ್ಲಾಧಿಕಾರಿ ಪಿಆರ್ ಸುಧೀರ್ ಬಾಬು ಗೆ ತಿಳಿದು ಬಂದಿದೆ. ಪರೀಕ್ಷಾ ಕೇಂದ್ರಕ್ಕೆ ಆಕ್ಸಿಜನ್ ಸಿಲಿಂಡರ್ ಕೊಂಡೊಯ್ಯಲು ಅನುಮತಿ ನೀಡಿದ್ದಾರೆ.

ಭಾನುವಾರ(ಜೂನ್ 02)ದಂದು ದೇಶದ 72ಕ್ಕೂ ಅಧಿಕ ನಗರಗಳಲ್ಲಿ ನಾಗರಿಕ ಸೇವೆಗಳ ಪೂರ್ವಭಾವಿ ಪರೀಕ್ಷೆ ಆಯೋಜಿಸಲಾಗಿತ್ತು. ಒಟ್ಟನಲ್ಲಿ ಜೀವನದಲ್ಲಿ ಏನಾದರೂ ಸಾಧನೆ ಮಾಡಬೇಕು ಎಂದು ಅಂದುಕೊಂಡರೆ ಎಂಥ ರೋಗ-ಸಮಸ್ಯೆಯನ್ನಾದರೂ ಮೆಟ್ಟಿ ನಿಲ್ಲಬಹುದು ಎಂಬುದಕ್ಕೆ ಈ ಲತೀಶಾ ನಿದರ್ಶನ.

Latest Videos
Follow Us:
Download App:
  • android
  • ios