ಹೊಸ, ಸರಳೀಕೃತ ಟೋಯಿಂಗ್‌ ವ್ಯವಸ್ಥೆ ಜಾರಿ ಆದರೆ ನೋ ಪಾರ್ಕಿಂಗಲ್ಲಿ ವಾಹನ ನಿಲ್ಲಿಸಿದ್ದರೆ ನಾಳೆಯಿಂದ ದಂಡ ಹೊಸ ವ್ಯವಸ್ಥೆ ಘೋಷಿಸುವವರೆಗೆ ಕಾರಾರ‍ಯಚರಣೆಗೆ ಬ್ರೇಕ್‌: ಅರಗ

ಬೆಂಗಳೂರು(ಫೆ.03) ರಾಜಧಾನಿಯಲ್ಲಿನ(Bengaluru) ವಾಹನ ಟೋಯಿಂಗ್‌ ವ್ಯವಸ್ಥೆ ಸಂಬಂಧ ಇನ್ನು ಹದಿನೈದು ದಿನಗಳಲ್ಲಿ ಹೊಸ ಹಾಗೂ ಸರಳೀಕೃತ ಟೋಯಿಂಗ್‌ ವ್ಯವಸ್ಥೆ(Policy) ಜಾರಿಗೆ ಬರಲಿದೆ. ಅಲ್ಲಿವರೆಗೂ ಸರ್ಕಾರ ಟೋಯಿಂಗ್‌(Vehicle Towing) ಕಾರ್ಯಾಚರಣೆಗೆ ತಾತ್ಕಾಲಿಕ ಬ್ರೇಕ್‌ ಹಾಕಿದೆ.

ನಗರದಲ್ಲಿ ಟೋಯಿಂಗ್‌ ವ್ಯವಸ್ಥೆ ಹೊಸ ನೀತಿ ಪರಿಷ್ಕರಣೆ ಸಲುವಾಗಿ ಹಿರಿಯ ಪೊಲೀಸ್‌(Police) ಅಧಿಕಾರಿಗಳ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಗೃಹ ಸಚಿವ ಅರಗ ಜ್ಞಾನೇಂದ್ರ, ಮುಂದಿನ ಹದಿನೈದು ದಿನಗಳಲ್ಲಿ ಹೊಸ ಟೋಯಿಂಗ್‌ ವ್ಯವಸ್ಥೆ ಜಾರಿಗೆ ಬರುವ ವಿಶ್ವಾಸವಿದೆ. ಹೊಸ ವ್ಯವಸ್ಥೆ ಘೋಷಣೆ ಮಾಡುವವರೆಗೆ ಟೋಯಿಂಗ್‌ ಕಾರ್ಯಾಚರಣೆ ಸ್ಥಗಿತಗೊಳಿಸುವಂತೆ ಸೂಚಿಸಲಾಗಿದೆ. ಆದರೆ ನೋ ಪಾರ್ಕಿಂಗ್‌ (No Parking)ಪ್ರದೇಶದಲ್ಲಿ ವಾಹನ ನಿಲ್ಲಿಸಿದರೆ ಗುರುವಾರದಿಂದ ಸಂಚಾರ ಪೊಲೀಸರು ದಂಡ ವಿಧಿಸಲಿದ್ದಾರೆ ಎಂದು ತಿಳಿಸಿದರು.

Towing Issue: ಅತಿರೇಕದ ವರ್ತನೆ ಸರಿಯಲ್ಲ, ಜನಸ್ನೇಹಿ ಮಾಡಲಿದ್ದೇವೆ: ಸಿಎಂ

ಪೊಲೀಸರು ಬಾಡಿ ವೋರ್ನ್‌ ಕ್ಯಾಮರಾ ಧರಿಸುತ್ತಾರೆ. ನೋ ಪಾರ್ಕಿಂಗ್‌ ವಿಚಾರವಾಗಿ ಗಲಾಟೆಗಳು ಸಂಭವಿಸಿದರೆ ಎಲ್ಲ ವಿದ್ಯಮಾನಗಳು ಪೊಲೀಸರ ಕ್ಯಾಮೆರಾದಲ್ಲಿ ಸೆರೆಯಾಗಲಿದೆ. ಆಗ ಯಾರೂ ತಪ್ಪಿತಸ್ಥರು ಎಂಬುದು ಗೊತ್ತಾಗಲಿದೆ ಎಂದು ಸ್ಪಷ್ಟಪಡಿಸಿದರು.

ಸಂಚಾರ ನಿಯಮ ಉಲ್ಲಂಘಿಸಿದರೆ ವಿಧಿಸುವ ದಂಡ ಮೊತ್ತದ ಪರಿಷ್ಕರಣೆಯೂ ಸೇರಿದಂತೆ ಹಲವು ಸ್ತರಗಳಲ್ಲಿ ಚರ್ಚೆ ನಡೆದಿದೆ. ಈ ಸಂಬಂಧ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸಲಹೆ ಸಹ ಪಡೆಯಲಾಗಿದ್ದು, ಕೆಲವೇ ದಿನಗಳಲ್ಲಿ ಟೋಯಿಂಗ್‌ ಸಮಸ್ಯೆ ನಿವಾರಣೆಯಾಗಲಿದೆ ಎಂದು ಹೇಳಿದರು.

Traffic Rules Violation: ಟ್ರಾಫಿಕ್‌ ಪೊಲೀಸ್‌ ಟೋಯಿಂಗ್‌ ವಾಹನದಿಂದಲೇ ಸಿಗ್ನಲ್‌ ಜಂಪ್‌: ಬಿತ್ತು ಭರ್ಜರಿ ದಂಡ

ಸಭೆಯಲ್ಲಿ ರಾಜ್ಯ ಪೊಲೀಸ್‌ ಮಹಾನಿರ್ದೇಶಕ ಪ್ರವೀಣ್‌ ಸೂದ್‌, ನಗರ ಪೊಲೀಸ್‌ ಆಯುಕ್ತ ಕಮಲ್‌ ಪಂತ್‌ ಹಾಗೂ ಜಂಟಿ ಪೊಲೀಸ್‌ ಆಯುಕ್ತ (ಸಂಚಾರ) ಡಾ.ಬಿ.ಆರ್‌.ರವಿಕಾಂತೇಗೌಡ ಉಪಸ್ಥಿತರಿದ್ದರು.

25 ಮೀ.ಗೆ ನೋ ಪಾರ್ಕಿಂಗ್‌ ಬೋರ್ಡ್‌
ನೋ ಪಾರ್ಕಿಂಗ್‌ ಬೋರ್ಡ್‌ಗಳು ಸರಿಯಾಗಿ ಕಾಣುವುದಿಲ್ಲವೆಂದು ಸಾರ್ವಜನಿಕರ ಆಕ್ಷೇಪಗಳ ಈ ಹಿನ್ನೆಲೆಯಲ್ಲಿ ಬೋರ್ಡ್‌ಗಳ ಅಳವಡಿಕೆ ಕ್ರಮ ಬದಲಾಯಿಸಲಾಗಿದೆ. ಇದುವರೆಗೆ ನಗರದಲ್ಲಿ ನೋ ಪಾರ್ಕಿಂಗ್‌ ಪ್ರದೇಶದಲ್ಲಿ 50 ಮೀಟರ್‌ಗೆ ಒಂದರಂತೆ ಬೋರ್ಡ್‌ ಅಳವಡಿಸಲಾಗಿತ್ತು. ಈಗ 25 ಮೀಟರ್‌ಗೆ ಬೋರ್ಡ್‌ ಹಾಕಲಾಗುತ್ತದೆ ಎಂದು ಆರಗ ಜ್ಞಾನೇಂದ್ರ ತಿಳಿಸಿದರು.

ಸಾರ್ವಜನಿಕರು ಸಂಚಾರ ನಿಯಮ ಪಾಲನೆ ಮಾಡಿದರೆ ದಂಡ ಹಾಕುವ ಅಗತ್ಯವಿಲ್ಲ. ಹೆಲ್ಮಟ್‌ ಧರಿಸದೆ ವಾಹನ ಚಾಲಾಯಿಸುತ್ತಿದ್ದಾರೆ. ಈ ರೀತಿ ಮಾಡಿದರೆ ಜನರ ಪ್ರಾಣ ಉಳಿಸುವುದು ಹೇಗೆ ಎಂದು ಪ್ರಶ್ನಿಸಿದ ಸಚಿವರು, ಟೋಯಿಂಗ್‌ ಗುತ್ತಿಗೆ ನಿಯಮಾವಳಿ ಸಹ ಪುನರ್‌ ಪರಿಶೀಲನೆ ಮಾಡಲಾಗುತ್ತಿದೆ. ಬೇನಾಮಿ ಹೆಸರಿನಲ್ಲಿ ಪೊಲೀಸರು ಗುತ್ತಿಗೆ ಪಡೆದಿದ್ದರೆ ಕಾನೂನು ಕ್ರಮ ಜರುಗಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ನಮ್ಮ ತಪ್ಪು ತಿದ್ದಿಕೊಳ್ಳುತ್ತೇವೆ:
ಟೋಯಿಂಗ್‌ ವ್ಯವಸ್ಥೆ ವಿರುದ್ಧ ಜನಾಕ್ರೋಶ ಹಿನ್ನೆಲೆಯಲ್ಲಿ ಜಂಟಿ ಪೊಲೀಸ್‌ ಆಯುಕ್ತ (ಸಂಚಾರ) ರವಿಕಾಂತೇಗೌಡ ಅವರು, ಬುಧವಾರ ಟೋಯಿಂಗ್‌ ವಾಹನಗಳ ಮಾಲಿಕರು ಹಾಗೂ ಪೊಲೀಸ್‌ ಅಧಿಕಾರಿಗಳ ಸಭೆ ನಡೆಸಿದರು. ಅರಮನೆ ಮೈದಾನದಲ್ಲಿ ನಡೆದ ಸಭೆಯಲ್ಲಿ ಜಂಟಿ ಆಯುಕ್ತರು, ಟೋಯಿಂಗ್‌ ಗುತ್ತಿಗೆ ಮಾರ್ಗಸೂಚಿ (ಎಸ್‌ಓಪಿ) ಪ್ರಕಾರ ನಡೆದುಕೊಳ್ಳಬೇಕು. ನಿಯಮ ಮೀರಿದರೆ ಗುತ್ತಿಗೆ ರದ್ದುಪಡಿಸಲಾಗುತ್ತದೆ. ಅಲ್ಲದೆ ವಾಹನವನ್ನು ಅಮಾನತು ಮಾಡಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ನಗರದಲ್ಲಿ 45 ಸಂಚಾರ ಪೊಲೀಸ್‌ ಠಾಣೆಗಳಿದ್ದು, 100 ಟೋಯಿಂಗ್‌ ವಾಹನಗಳಿವೆ. ಇದರಲ್ಲಿ 80 ಜನ ಟೋಯಿಂಗ್‌ ಮಾಲಿಕರಿದ್ದಾರೆ. ನಮ್ಮ ಕೆಲವು ಹುಡುಗರು ಅನುಚಿತವಾಗಿ ವರ್ತಿಸಿದ್ದಾರೆ. ನಮ್ಮ ತಪ್ಪುಗಳನ್ನು ತಿದ್ದಿಕೊಳ್ಳುತ್ತೇವೆ ಎಂದು ಟೋಯಿಂಗ್‌ ವಾಹನಗಳ ಮಾಲಿಕರು ಹೇಳಿದ್ದಾರೆ. ಮುಂದಿನ ದಿನಗಳಲ್ಲಿ ಟೋಯಿಂಗ್‌ ವ್ಯವಸ್ಥೆ ಸುಧಾರಣೆಯಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸಭೆಯಲ್ಲಿ ಸಂಚಾರ ವಿಭಾಗದ ಡಿಸಿಪಿಗಳಾದ ಕುಲದೀಪ್‌ ಕುಮಾರ್‌ ಜೈನ್‌, ಶಾಂತರಾಜು, ಸವಿತಾ ಹಾಗೂ ಎಸಿಪಿ ಮತ್ತು ಇನ್‌ಸ್ಪೆಕ್ಟರ್‌ಗಳು ಪಾಲ್ಗೊಂಡಿದ್ದರು.