ಬೆಂಗಳೂರು ಶಾಪಿಂಗ್ ಮಾಲ್‌ನಲ್ಲಿ 'ವಿಐಪಿ ಟಾಯ್ಲೆಟ್': ಮೂತ್ರ ಮಾಡಲು 1,000 ರೂ. ವೆಚ್ಚ ಮಾಡಬೇಕು!
ಬೆಂಗಳೂರಿನ ವೈಟ್‌ಫೀಲ್ಡ್‌ನ ಶಾಪಿಂಗ್ ಮಾಲ್ ಒಂದರಲ್ಲಿ ಗ್ರಾಹಕರಿಗೆ ಮುಕ್ತವಾಗಿ ಮತ್ತು ಉಚಿತ ಶೌಚಾಲಯ ಒದಗಿಸುವ ಬದಲು ವಿಐಪಿ ಟಾಯ್ಲಟ್ ಎಂಬ ನಿಯಮವನ್ನು ರೂಪಿಸಿ ಸಾರ್ಜನಿಕರ ಕೆಂಗಣ್ಣಿಗೆ ಗುರಿಯಾಗಿದೆ. ಈ ಟಾಯ್ಲೆಟ್ ಬಳಸಲು ಬರೋಬ್ಬರಿ 1,000 ರೂ. ಖರ್ಚು ಮಾಡಬೇಕು ಎಂದು ಶಾಪಿಂಗ್ ಮಾಲ್ ಸಿಬ್ಬಂದಿ ಹೇಳುತ್ತಿದ್ದಾರೆ.
ಬೆಂಗಳೂರು (ಸೆ.17): ಜಾಗತಿಕ ಮಟ್ಟದಲ್ಲಿ ದೊಡ್ಡ ದೊಡ್ಡ ಮಹಾನಗರಗಳಲ್ಲಿರುವ ಯಾವುದೇ ಶಾಪಿಂಗ್ ಮಾಲ್‌ನಲ್ಲಿ ಇರದ ನಿಯಮ ಬೆಂಗಳೂರಿನ ಈ ಶಾಪಿಂಗ್ ಮಾಲ್‌ನಲ್ಲಿ ಮಾಡಲಾಗಿದೆ. ಅದೇನೆಂದರೆ ವಿಐಪಿ ಟಾಯ್ಲೆಟ್ ನಿರ್ಮಾಣ ಮಾಡಿದ್ದು, ಇದನ್ನು ನೀವು ಬಳಸಬೇಕೆಂದರೆ ಕನಿಷ್ಠ 1,000 ರೂ. ವೆಚ್ಚ ಮಾಡಬೇಕು ಎಂದು ನಿಯಮವನ್ನು ರೂಪಿಸಿದೆ. ಈ ಮೂಲಕ ಶಾಪಿಂಗ್ ಮಾಲ್ ಗ್ರಾಹಕರು ಹಾಗೂ ಸಾರ್ವಜನಿಕರ ಕೋಪಕ್ಕೆ ಗುರಿಯಾಗಿದೆ.
ಬೆಂಗಳೂರಿನ ಮಾಗಡಿ ರಸ್ತೆಯ ಜಿ.ಟಿ. ವರ್ಲ್ಡ್ ಮಾಲ್‌ನಲ್ಲಿ ಇತ್ತೀಚೆಗೆ ಪಂಚೆ ಉಟ್ಟುಕೊಂಡು ಬಂದ ರೈತನನ್ನು ಒಳಗೆ ಬಿಡದ ಪರಿಣಾಮವಾಗಿ ಒಂದು ವಾರಗಳ ಕಾಲ ಮಾಲ್ ಅನ್ನು ಬಂದ್ ಆಗಿತ್ತು. ಈ ನೆನಪು ಬೆಂಗಳೂರಿನ ಜನತೆಗೆ ಮಾಸುವ ಮುನ್ನವೇ ವೈಟ್‌ಫೀಲ್ಡ್‌ನ ಶಾಪಿಂಗ್ ಮಾಲ್ ಒಂದರಲ್ಲಿ ಸಾರ್ವಜನಿಕರಿಗೆ ಶೌಚಾಲಯ ಬಳಸಲು ಬಿಡದೇ ವಿಐಪಿ ಟಾಯ್ಲೆಟ್ ಆಗಿ ಪರಿವರ್ತನೆ ಮಾಡಲಾಗಿದೆ. ಇಲ್ಲಿ ಒಬ್ಬ ಮಹಿಳಾ ಸಿಬ್ಬಂದಿಯನ್ನು ನಿಯೋಜನೆ ಮಾಡಿದ ಮಾಲ್ ಆಡಳಿತ ವಿಭಾಗವು, ಎಲ್ಲರಿಗೂ ಶೌಚಾಲಯ ಬಳಸುವುದಕ್ಕೆ ನಿರ್ಬಂಧ ವಿಧಿಸಿದೆ. ನೀವು ಮಾಲ್‌ಗೆ ಹೋಗಿಈ ಟಾಯ್ಲೆಟ್ ಬಳಸಬೇಕೆಂದರೆ ಕನಿಷ್ಠ ಒಂದು ಸಾವಿರ ರೂ. ವೆಚ್ಚವನ್ನು ಮಾಡಬೇಕು ಎಂದಿದ್ದನ್ನು ಕೇಳಿ ಗ್ರಾಹಕರೊಬ್ಬರು ಬೆಚ್ಚಿ ಬಿದ್ದಿದ್ದಾರೆ.
ಈ ಬಗ್ಗೆ ಗ್ರಾಹಕರೊಬ್ಬರು ರೆಡ್ಡಿಟ್‌ನಲ್ಲಿ (DeskKey9633 ಮೂಲ ಪೋಸ್ಟ್ ಹಂಚಿಕೆದಾರರು) ಬರೆದುಕೊಂಡಿದ್ದಾರೆ. ನಾನು ವೀಕೆಂಡ್‌ನಲ್ಲಿ ವೈಟ್‌ಫೀಲ್ಡ್‌ನ ಶಾಪಿಂಗ್ ಮಾಲ್ ಒಂದರಲ್ಲಿ ನಾನು ಕೋಪಗೊಳ್ಳುವ ಅನುಭವವನ್ನು ಹೊಂದಿದ್ದೇನೆ. ನೀವು ಕೂಡ ಈ ಬಗ್ಗೆ ಗಮನ ಹರಿಸಬೇಕು ಎಂದು ನಾನು ಭಾವಿಸುತ್ತೇನೆ. ನಾನು ಚರ್ಚ್ ಸ್ಟ್ರೀಟ್‌ನಿಂದ ಶಾಪಿಂಗ್ ಮಾಡಲು ದೂರದ ವೈಟ್‌ಫೀಲ್ಡ್‌ನ ಶಾಪಿಂಗ್ ಮಾಲ್‌ಗೆ ಹೋಗಿದ್ದೆ. ಆದರೆ, ನಾನು ದೂದರ ಪ್ರಯಾಣ ಮಾಡಿಕೊಂಡು ಹೋಗಿದ್ದರಿಂದ ನಾನು ಶಾಪಿಂಗ್‌ಗೆ ಹೋಗುವ ಮೊದಲು ರೆಸ್ಟ್‌ರೂಮ್ ಎಲ್ಲಿದೆ ಎಂದು ಕೇಳಿ ಅದನ್ನು ಬಳಸಲು ಹೋದೆನು.
ಕುರುಕ್ಷೇತ್ರ ಸಿನಿಮಾ ದುರ್ಯೋಧನ ಹೋದ ಜಾಗಕ್ಕೆ, ನಿರ್ಮಾಪಕ ಮುನಿರತ್ನನೂ ಎಂಟ್ರಿ: 14 ದಿನ ನ್ಯಾಯಾಂಗ ಬಂಧನ!
ಇಲ್ಲಿ ಇದು ನಿರಾಶಾದಾಯಕವಾಗಿದೆ: ಈ ಶಾಪಿಂಗ್ ಮಾಲ್‌ನ ಗ್ರೌಂಡ್ ಫ್ಲೋರ್‌ನಲ್ಲಿರುವ ರೆಸ್ಟ್‌ರೂಮ್ (ಶೌಚಾಲಯ) ಅನ್ನು 'ವಿಐಪಿ ರೆಸ್ಟ್‌ರೂಮ್' ಎಂದು ಗೊತ್ತುಪಡಿಸಲಾಗಿದೆ. ಇದಕ್ಕೆ ಒಬ್ಬ ಮಹಿಳಾ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಈ ರೆಸ್ಟ್ ರೂಂ ಅನ್ನು ಬಳಸಲು ನಾನು ಶಾಪಿಂಗ್ ಬಿಲ್ ಅನ್ನು ತೋರಿಸಬೇಕೆಂದು ಅವಳು ಒತ್ತಾಯಿಸಿದರು. ಇದೇ ಪರಿಸ್ಥಿತಿಯನ್ನು ಎದುರಿಸಿದ ಇನ್ನೊಬ್ಬ ವ್ಯಕ್ತಿ ಬಂದು ನಾವು 1,000 ಶಾಪಿಗ್ ಮಾಡಿದ ಬಿಲ್ ಹದಿದ್ದರೆ ಬಳಸಬಹುದು ಎಂದು ಹೇಳುತ್ತಾರೆ. ಇದನ್ನು ಕೇಳಿ ನಾನು ಆಘಾತಕ್ಕೊಳಗಾಗಿದ್ದೇನೆ. ಶೌಚಾಲಯವನ್ನು ಬಳಸಲು ನನಗೆ ಬಿಲ್ ಏಕೆ ಬೇಕು? ಎಂಬ ಪ್ರಶ್ನೆ ನನ್ನಲ್ಲಿ ಎದುರಾಯಿತು.
ಆಗ ಅಲ್ಲಿದ್ದ ಮಹಿಳೆಗೆ ನನ್ನ ಬಳಿ ಬಿಲ್ ಇಲ್ಲ ಎಂದು ವಿವರಿಸಿದಾಗ (ನಾನು ಇದೀಗ ಶಾಪಿಂಗ್ ಮಾಡಲು ಬಂದಿದ್ದೇನೆ) ಅವರು, ನನ್ನನ್ನು ಮೇಲಿನ ಮತ್ತು ಕೆಳಗಿನ ಮಹಡಿಗಳಲ್ಲಿರುವ ವಿಶ್ರಾಂತಿ ಕೊಠಡಿಗಳಿಗೆ ಹೀಗುವಂತೆ ನಿರ್ದೇಶಿಸಿದರು. ಆದರೆ, ನನಗೆ ಅರ್ಜೆಂಟ್ ಆಗಿದ್ದರಿಂದ ನಾನು ಮೇಲಿನ ವಿಶ್ರಾಂತಿ ಕೊಠಡಿಗೆ ಹೋದರೆ ಅವು ಭಯಾನಕ ಸ್ಥಿತಿಯಲ್ಲಿದ್ದವು. ಎಲ್ಲ ಜನರನ್ನು ಇಲ್ಲಿಗೇ ಕಳಿಸುತ್ತುದ್ದರಿಂದ ಇಲ್ಲಿನ ಶೌಚಾಲಯಗಳು ಕಳಪೆಯಾಗಿದ್ದವು. ಶೌಚಾಲಯ ನಿರ್ವಹಣೆ ಮಾಡದೇ ದರ್ವಾಸನೆ ಬೀರುತ್ತಿದ್ದವು. ಜೊತೆಗೆ, ಅನೇಕ ಮೂತ್ರ ವಿಸರ್ಜನೆಯ ಪಾಟ್‌ಗಳ ಫ್ಲಶ್‌ಗಳು ಕಾರ್ಯನಿರ್ವಹಿಸುತ್ತಿಲ್ಲ. ಇದು ನನಗೆ ಆಶ್ಚರ್ಯವನ್ನುಂಟು ಮಾಡಿತು. ನೆಲಮಹಡಿಯಲ್ಲಿದ್ದ ಮಾದರಿಯಲ್ಲಿಯೇ ಏಕೆ ಇತರ ವಿಶ್ರಾಂತಿ ಕೊಠಡಿಗಳನ್ನು ಏಕೆ ಇರಿಸಲಾಗಿಲ್ಲ ಎಂದು ಕೋಪ ಬಂದಿತು.
ಇದಲ್ಲದೆ, ಯಾರಿಗಾದರೂ ಶೌಚಾಲಯದ ತುರ್ತು ಇದ್ದಾಗ ಮತ್ತೊಂದು ಮಹಡಿಗೆ ಹೋಗಿ ಎಂದು ಹೇಳಿದೆ ಹೇಗೆ ಒತ್ತಡ ಉಂಟಾಗಬಹುದು. ಈ ಶಾಪಿಂಗ್ ಮಾಲ್‌ನವರಿಗೆ ವಿಐಪಿ ರೆಸ್ಟ್ ರೂಂ ಒಂದು ವಿಷಯವಾಗಿದ್ದರೂ, ಇತರ ಸೌಲಭ್ಯಗಳನ್ನು ನಿರ್ಲಕ್ಷಿಸುವುದನ್ನು ನಾನು ಸಮರ್ಥಿಸುವುದಿಲ್ಲ. ನಾನು ಬೆಂಗಳೂರಿನ ಯಾವುದೇ ಮಾಲ್‌ನಲ್ಲಿ ಅಥವಾ ನಮ್ಮ ದೇಶದ ಬೇರೆ ಯಾವುದೇ ನಗರದಲ್ಲಿ ಇಂತಹ ನೀತಿಯನ್ನು ಕೇಳಿಲ್ಲ. ಬೆಂಗಳೂರಿನಲ್ಲಿ ಇದು ಹೊಸ ಪ್ರವೃತ್ತಿಯಾಗಿದ್ದರೆ, ಜನರಿಗೆ ತುಂಬಾ ತೊಂದರೆ ಆಗುತತದೆ. ಇಲ್ಲಿಯೂ ಕೂಡ ಅನಗತ್ಯವಾಗಿ ಸಾಮಾಜಿಕ ವರ್ಗಗಳ ವಿಭಜನೆ ಮಾಡಲು ಮುಂದಾಗುತ್ತಿದೆ ಎಂಬ ಭಾವನೆ ಮೂಡಿದೆ.
ಬೆಂಗಳೂರು ಏರ್ಪೋರ್ಟ್ ರಸ್ತೆಯ ಜನರಿಗೆ ಮೆಟ್ರೋ ಕನಸು ನುಚ್ಚುನೂರು!
ನನ್ನ ಅನುಭವವನ್ನು ಹಂಚಿಕೊಳ್ಳುವ ಮೂಲಕ ಈ ಬಗ್ಗೆ ಜಾಗೃತಿ ಮೂಡಿಸಲು ಬಯಸುತ್ತೇನೆ. ಬೇರೆ ಯಾರಾದರೂ ಇದೇ ರೀತಿಯ ಅನುಭವವನ್ನು ಹೊಂದಿದ್ದೀರಾ ಅಥವಾ ಈ ಸಮಸ್ಯೆಯನ್ನು ಗಮನಿಸಿದ್ದೀರಾ? ಎಂದು ಪ್ರಶ್ನೆ ಮಾಡಿದ್ದಾರೆ. ಜೊತೆಗೆ, ಈ ಶಾಪಿಂಗ್ ಮಾಲ್‌ನಲ್ಲಿ ಇಂತಹ ಕೆಟ್ಟ ನೀತಿ ಬದಲಾಗದ ಹೊರತು, ನಾನು ಮತ್ತೆ ಆ ಮಾಲ್‌ಗೆ ಬೇಟಿ ನೀಡುವುದಿಲ್ಲ ಎಂದು ರೆಡ್ಡಿಟ್‌ನಲ್ಲಿ ಬರೆದುಕೊಂಡಿದ್ದಾರೆ.