Asianet Suvarna News Asianet Suvarna News

ಹೊಸ ವರ್ಷಾಚರಣೆಯಲ್ಲಿ ಎಚ್ಚರಿಕೆ ಇರಲಿ, ಮೆಟ್ರೋ ಸಿಟಿ ಪೈಕಿ ಬೆಂಗ್ಳೂರಲ್ಲಿ ಗರಿಷ್ಠ ಕೋವಿಡ್ ಕೇಸ್!

ಹೊಸ ವರ್ಷ ಬರಮಾಡಿಕೊಳ್ಳಲು ದೇಶ ಸಜ್ಜಾಗಿದೆ. ಸಂಭ್ರಮ ಈಗಾಗಲೇ ಆರಂಭಗೊಂಡಿದೆ. ಆದರೆ ಎಚ್ಚರಿಕೆ ವಹಿಸುವುದು ಅತೀ ಅಗತ್ಯ. ಕಾರಣ ಮೆಟ್ರೋ ನಗರಗಳ ಪೈಕಿ ಬೆಂಗಳೂರಲ್ಲಿ ಅತೀ ಹೆಚ್ಚು ಕೋವಿಡ್ ಪ್ರಕರಣ ದಾಖಲಾಗಿದೆ. 

Bengaluru report 38 covid 19 cases highest among metro cities Alaram for new year celebration ckm
Author
First Published Dec 31, 2022, 6:26 PM IST

ಬೆಂಗಳೂರು(ಡಿ.31): ಚೀನಾದಲ್ಲಿ ಕೋವಿಡ್ ಸ್ಫೋಟದ ಆತಂಕ ಭಾರತ ಸೇರಿದಂತೆ ಹಲವು ದೇಶಗಳಿಗೆ ಹಬ್ಬಿದೆ. ಭಾರತದಲ್ಲಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಕೆಲ ನಿಯಮಗಳು ಜಾರಿಯಾಗಿದೆ. ಇದರ ಬೆನ್ನಲ್ಲೇ ಹೊಸ ವರ್ಷದ ಸಂಭ್ರಮ ಬಂದೇ ಬಿಟ್ಟಿದೆ. 2023ರ ಬರಮಾಡಿಕೊಳ್ಳಲು ದೇಶ ರೆಡಿಯಾಗಿದೆ. ಸಂಭ್ರಮ, ಪಾರ್ಟಿ ಶುರುವಾಗಿದೆ. ಆದರೆ ಹೊಸ ವರ್ಷದ ಸಂಭ್ರಮದಲ್ಲಿ ಕನಿಷ್ಟ ಕೋವಿಡ್ ನಿಯಮ ಪಾಲಿಸಿದರೆ ಒಳಿತು. ಇದಕ್ಕೆ ಮುಖ್ಯ ಕಾರಣ, ಮೆಟ್ರೋ ನಗರಗಳ ಪೈಕಿ ಬೆಂಗಳೂರಿನಲ್ಲಿ ಅತೀ ಹೆಚ್ಚು ಕೋವಿಡ್ ಪ್ರಕರಣಗಳು ದಾಖಲಾಗಿದೆ. ಮುಂಬೈ, ದೆಹಲಿ ಸೇರಿದಂತೆ ಇತರ ನಗರಗಳಿಗೆ ಹೋಲಿಸಿದರೆ ಬೆಂಗಳೂರು ಮತ್ತೊಮ್ಮೆ ಎಚ್ಚರಿಕೆ ಕರೆ ಗಂಟೆ ಬಾರಿಸುತ್ತಿದೆ. ಶುಕ್ರವಾರ ಬೆಂಗಳೂರಿಲ್ಲಿ 38 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿದೆ. ಮೊದಲ ಅಲೆ, ಎರಡನೇ ಅಲೆಗೆ ಹೋಲಿಸಿದರೆ ಈ ಸಂಖ್ಯೆ ಏನೂ ಅಲ್ಲ. ಆದರೆ ಕೋವಿಡ್ ನಿಯಂತ್ರಣದ ಬಳಿಕ 10ಕ್ಕಿಂತ ಹೆಚ್ಚು ಕೇಸ್ ಬೆಂಗಳೂರಲ್ಲಿ ದಾಖಲಾಗಿಲ್ಲ. ಇದೀಗ ಒಂದೇ ಸಮನೆ 38 ಕೇಸ್ ದಾಖಲಾಗಿದೆ. 

ನಗರದಲ್ಲಿ ಶುಕ್ರವಾರ 38 ಜನರಲ್ಲಿ ಕೊರೋನಾ ಸೋಂಕು ಪತ್ತೆಯಾಗಿದ್ದು, ಪಾಸಿಟಿವಿಟಿ ದರ ಶೇ.0.67 ದಾಖಲಾಗಿದೆ. ಸೋಂಕಿನಿಂದ 23 ಗುಣಮುಖರಾಗಿದ್ದು, ಮೃತಪಟ್ಟವರದಿಯಾಗಿಲ್ಲ. ನಗರದಲ್ಲಿ 1,264 ಸಕ್ರಿಯ ಸೋಂಕು ಪ್ರಕರಣಗಳಿದ್ದು, ಎಲ್ಲರೂ ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನಗರದಲ್ಲಿ 6,948 ಮಂದಿಗೆ ಕೊರೋನಾ ಸೋಂಕು ಪರೀಕ್ಷೆ ನಡೆಸಲಾಗಿದ್ದು, ಈ ಪೈಕಿ 5264 ಆರ್‌ಟಿಪಿಸಿಆರ್‌ ಹಾಗೂ 1,684 ಮಂದಿಗೆ ರಾರ‍ಯಪಿಡ್‌ ಆ್ಯಂಟಿಜನ್‌ ಪರೀಕ್ಷೆ ನಡೆಸಲಾಗಿದೆ ಎಂದು ಬಿಬಿಎಂಪಿ ಮಾಹಿತಿ ನೀಡಿದೆ.

 

ಭಾರತಕ್ಕೆ ಕೋವಿಡ್ 4ನೇ ಅಲೆ ಭೀತಿ, ಹೊಸ ವರ್ಷದ ಆರಂಭದಿಂದ ನಿರ್ಬಂಧ ಜಾರಿ!

ಒಟ್ಟು 3,224 ಮಂದಿ ಕೋವಿಡ್‌ ವಿರುದ್ಧ ಲಸಿಕೆ ಪಡೆದು ಕೊಂಡಿದ್ದಾರೆ. 315 ಮಂದಿ ಮೊದಲ ಡೋಸ್‌, 296 ಮಂದಿ ಎರಡನೇ ಡೋಸ್‌ ಮತ್ತು 2,613 ಮಂದಿ ಮೂರನೇ ಡೋಸ್‌ ಲಸಿಕೆ ಪಡೆದಿದ್ದಾರೆ.

ಎರಡು ವರ್ಷಗಳ ಬಳಿಕ ಅತ್ಯಂತ ವಿಜೃಂಭಣೆ, ಮೋಜು ಮಸ್ತಿಯೊಂದಿಗೆ ಹೊಸ ವರ್ಷವನ್ನು ಸ್ವಾಗತಿಸಲು ರಾಜಧಾನಿ ಬೆಂಗಳೂರು ಸಜ್ಜಾಗಿದೆ. ‘ಕ್ಯಾಲೆಂಡರ್‌ ವರ್ಷ 2023’ ಆರಂಭವಾಗುವ ಕ್ಷಣವನ್ನು ಸ್ಮರಣೀಯ ವಾಗಿಸಲು ನಗರದ ಪಬ್‌, ಕ್ಲಬ್‌, ಬಾರ್‌ ಅಂಡ್‌ ರೆಸ್ಟೋರಂಟ್‌ ಹಾಗೂ ಇನ್ನಿತರೆ ಪ್ರದೇಶಗಳಲ್ಲಿ ಭಿನ್ನ ಭಿನ್ನ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಕೊರೋನಾ ವೈರಸ್‌ ಕಾಟದಿಂದಾಗಿ 2021 ಹಾಗೂ 2022ರ ಹೊಸವರ್ಷ ಸ್ವಾಗತ ಸಂಭ್ರಮಾಚರಣೆಗೆ ಸಂಪೂರ್ಣ ನಿರ್ಬಂಧ ವಿಧಿಸಲಾಗಿತ್ತು. ಆದರೆ, ಈ ಬಾರಿ ಒಂದಿಷ್ಟುಮುಂಜಾಗ್ರತಾ ಕ್ರಮಗಳೊಂದಿಗೆ ಹೊಸವರ್ಷ ಕಾರ್ಯಕ್ರಮಗಳಿಗೆ ಅವಕಾಶ ನೀಡಲಾಗಿದೆ. ಹೀಗಾಗಿ, ಶನಿವಾರ ಮಧ್ಯರಾತ್ರಿ 12 ಗಂಟೆಗೆ ಹೊಸ ವರ್ಷವನ್ನು ಸ್ವಾಗತಿಸಲು ಜನರು, ತಮ್ಮ ಅಭಿರುಚಿಗೆ ತಕ್ಕಂತೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಆದರೆ ಈ ಬಾರಿ ಕೊರೋನಾ ಎಚ್ಚರಿಕೆ ಸಂದೇಶ ಈಗಾಗಲೇ ಬಂದಾಗಿದೆ. 

ಜನವರಿ, ಫೆಬ್ರವರಿ ತಿಂಗಳಲ್ಲಿ ಕೊರೊನಾ ಹೆಚ್ಚಾಗಲಿದೆ: ಡಾ. ಸಿ ಎನ್ ಮಂಜುನಾಥ್

ಎಂ.ಜಿ.ರಸ್ತೆ ಹಾಗೂ ಬ್ರಿಗೇಡ್‌ ರಸ್ತೆಗಳಲ್ಲಿ ಶನಿವಾರ ಮಧ್ಯಾಹ್ನ 3 ರಿಂದ ರಾತ್ರಿ 1 ಗಂಟೆವರೆಗೆ ವಾಹನ ಸಂಚಾರ ನಿರ್ಬಂಧಿಸಲಾಗಿದೆ. ಅಲ್ಲದೆ ಬ್ರಿಗೇಡ್‌ ರಸ್ತೆಯಲ್ಲಿ ಜನರಿಗೆ ಏಕಮುಖ ಪ್ರವೇಶಕ್ಕೆ ಮಾತ್ರ ಅವಕಾಶ ನೀಡಲಾಗಿದೆ. ಈ ಎರಡು ರಸ್ತೆಗಳ ಜಂಕ್ಷನ್‌ನಲ್ಲಿ ಪ್ರವೇಶ ದ್ವಾರ ನಿರ್ಮಾಣ ಮಾಡಲಾಗುತ್ತಿದೆ. ಪ್ರವೇಶ ದ್ವಾರದಲ್ಲಿ ಮೆಟಲ್‌ ಡಿಟೆಕ್ಟರ್‌ ಉಪಕರಣವನ್ನು ಅಳವಡಿಸ ಲಾಗಿದ್ದು, ಪ್ರತಿಯೊಬ್ಬರ ತಪಾಸಣೆ ನಡೆಸಲಾಗುತ್ತದೆ.

Follow Us:
Download App:
  • android
  • ios