ಪಿಟ್‌ಬುಲ್ ನಾಯಿ ದಾಳಿಗೆ ಬೆಂಗಳೂರು ನಿವಾಸಿ ಗಂಭೀರ ಗಾಯ, ಮಾಲೀಕನ ವಿರುದ್ಧ ಪ್ರಕರಣ ದಾಖಲು!
ಎರಡು ಪಿಟ್‌ಬುಲ್ ನಾಯಿಗಳು ಒಮ್ಮೆಲೆ ದಾಳಿ ನಡೆಸಿದೆ, 20 ಬಾರಿ ಕಚ್ಚಿದೆ, ಈ ಪೈಕಿ 6 ಕಡಿತ ಮೂಳೆಯನ್ನು ಘಾಸಿಗೊಳಿಸಿದೆ. ಕಾಲಿನ ಮಾಂಸಖಂಡಗಳನ್ನು ಕಚ್ಚಿ ಹೊರತೆಗೆದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಬೆಂಗಳೂರು(ಫೆ.15) ಉದ್ಯಾನ ನಗರಿಯಲ್ಲಿ ನಾಯಿ ದಾಳಿ ಪ್ರಕರಣಗಳು ಇತ್ತೀಚೆ ಹೆಚ್ಚಾಗುತ್ತಿದೆ. ಒಂದೆಡೆ ಬೀದಿ ನಾಯಿಗಳ ಕಾಟವಾದರೆ, ಮತ್ತೊಂದೆಡೆ ಮುದ್ದಾಗಿ ಸಾಕಿರುವ ನಾಯಿಗಳೇ ತಮ್ಮದೇ ಸಂಬಂಧಿಕರು, ಆಪ್ತರು, ಅಪರಿಚಿತರಿಗೆ ಕಚ್ಚಿದ ಘಟನೆಗಳು ವರದಿಯಾಗುತ್ತಿದೆ. ಇದೀಗ ವರ್ತೂರಿನ ಬೆಳಗೆರೆ ನಿವಾಸಿಯಾಗಿರುವ 49 ವರ್ಷದ ಚಂದ್ರಶೇಕರ್ ಎರಡು ಪಿಟ್‌ಬುಲ್ ನಾಯಿ ದಾಳಿಯಿಂದ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆ ದಾಖಲಾಗಿದ್ದಾರೆ. ಏಕಾಏಕಿ ಎರಡು ಪಿಟ್‌ಬುಲ್ ನಾಯಿಗಳು ಚಂದ್ರಶೇಕರ್ ಮೇಲೆ ದಾಳಿ ಮಾಡಿದೆ. 20ಕ್ಕೂ ಹೆಚ್ಚು ಬಾರಿ ಕಚ್ಚಿದೆ.ಕಾಲಿನ ಮಾಂಸಖಂಡಗಳನ್ನು ಕಚ್ಚಿ ಹೊರತೆಗೆದು ಗಂಭೀರವಾಗಿ ಘಾಯಗೊಳಿಸಿದೆ.
ಚಂದ್ರಶೇಖರ್ ಉದ್ಯಮಿಯಾಗಿದ್ದಾರೆ. ಇತ್ತ ಚಂದ್ರಶೇಕರ್ ಮನೆಯ ಪಕ್ಕದಲ್ಲಿನ ತೋಟ ಹಾಗೂ ಮನೆಯನ್ನು ಬಾಡಿ ನೀಡಿದ್ದಾರೆ. ಚಂದ್ರಶೇಕರ್ ಅರ ಸಂಬಂಧಿ ಎರಡು ಕುಟುಂಬಕ್ಕೆ ಬಾಡಿಗೆ ನೀಡಿದ್ದಾರೆ. ಈ ಎರಡು ಕುಟುಂಬಗಳು ಒಂದೊಂದು ಪಿಟ್‌ಬುಲ್ ನಾಯಿ ಸಾಕಿದ್ದಾರೆ. ಈ ಮನೆಗಳಿಗೆ ತಾಗಿಕೊಂಡೆ ಚಂದ್ರಶೇಖರ್ ಅವರ ತೋಟವಿದೆ. ಈಗಾಗಲೇ ಹಲವು ಬಾರಿ ಪಿಟ್‌ಬುಲ್ ನಾಯಿ ಮಾಲೀಕರಿಗೆ ಅಪಾಯಕಾರಿ ನಾಯಿಯಿಂದ ಸಮಸ್ಯೆಯಾಗುವ ಸಾಧ್ಯತೆ ಇದೆ. ಹೀಗಾಗಿ ನಾಯಿಯನ್ನು ಇಲ್ಲಿ ಸಾಕುವುದು ಉಚಿತವಲ್ಲ ಎಂದಿದ್ದಾರೆ. ಇಷ್ಟೇ ಅಲ್ಲ ಅತೀವ ಎಚ್ಚರಿಕೆ ವಹಿಸಬೇಕಾಗಿ ಮನವಿ ಮಾಡಿದ್ದರು.
ರಾಯಚೂರು: ಸಿಂಧನೂರಲ್ಲಿ ತಾಯಿ,ಮಗನ ಮೇಲೆ ಬೀದಿ ನಾಯಿ ದಾಳಿ, ಬೆಚ್ಚಿಬೀಳಿಸುತ್ತೆ ಸಿಸಿಟಿವಿ ದೃಶ್ಯ!
ಫೆಬ್ರವರಿ 6 ರಂದು ಚಂದ್ರಶೇಕರ್ ತಮ್ಮ ತೋಟದಲ್ಲಿನ ತೆಂಗಿನ ಮರದಿಂದ ಕಾಯಿಗಳನ್ನು ತೆಗೆಯಲು ಬಂದಿದ್ದ ಕೆಲಸಗಾರರಿಗೆ ಕೆಲ ಸೂಚನೆಗಳನ್ನು ನೀಡುತ್ತಿದ್ದರು. ಈ ವೇಳೆ ಹಿಂಬದಿಯಿಂದ ಬಂದ ಎರಡು ಪಿಟ್‌ಬುಲ್ ನಾಯಿಗಳು ಚಂದ್ರೇಶೇಖರ್ ಮೇಲೆ ದಾಳಿ ಮಾಡಿದೆ. ಚಂದ್ರಶೇಕರ್ ಕಿರುಚಾಡಿದರೂ ಮನೆಯ ಒಳಗಿದ್ದ ನಾಯಿ ಮಾಲೀಕರಿಗೆ ಕೇಳಿಸಿಲ್ಲ. ಬರೋಬ್ಬರಿ 20 ಬಾರಿ ನಾಯಿ ಕಚ್ಚಿದೆ. ಇತ್ತ ತೆಂಗಿನ ಮರ ಏರಿದ್ದ ಕೆಲಸಗಾರರು ಕೆಳಗಿಳಿದು ಬಂದಿದ್ದಾರೆ. ಚಂದ್ರಶೇಕರ್ ಮಗ ಕೋಲು ಹಿಡಿದು ಓಡಿ ಬಂದಿದ್ದಾನೆ.
ಅಷ್ಟರಲ್ಲಿ ಹೊರಬಂದ ಪಿಟ್‌ಬುಲ್ ನಾಯಿ ಮಾಲೀಕರು ನಾಯಿಯನ್ನು ದೂರ ಮಾಡಿದ್ದಾರೆ. ಚೈನ್ ಮೂಲಕ ಕಟ್ಟಿ ಹಾಕಿದ್ದಾರೆ. ಅಷ್ಟರಲ್ಲೇ ಚಂದ್ರಶೇಕರ್ ಗಂಭೀರವಾಗಿ ಗಾಯಗೊಂಡಿದ್ದಾರೆ. ತಕ್ಷಣವೇ ಬೆಳಗರೆ ಬಳಿ ಇರುವ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಚಂದ್ರಶೇಖರ್ ಸುಧಾರಿಸಿಕೊಳ್ಳಲು ಕನಿಷ್ಠ 3 ರಿಂದ 6 ತಿಂಗಳ ಅವಶ್ಯಕತೆ ಇದೆ ಎಂದು ವೈದ್ಯರು ಸೂಚಿಸಿದ್ದಾರೆ.
ಬಾಣಂತಿ ಆರೋಗ್ಯ ತಪಾಸಣೆಗೆ ತೆರಳಿದ್ದ ಆರೋಗ್ಯಾಧಿಕಾರಿ ಮೇಲೆ ನಾಯಿ ದಾಳಿ: ಮಾಲೀಕ ವಿರುದ್ಧ ಪ್ರಕರಣ
ಇತ್ತ ಚಂದ್ರಶೇಖರ್ ಕುಟುಂಬಸ್ಥರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ನಾಯಿ ಸಾಕುತ್ತಿರುವ ಮಾಲೀಕರ ನಿರ್ಲಕ್ಷ್ಯವೇ ಆ ಅವಘಡಕ್ಕೆ ಕಾರಣ. ಹೀಗಾಗಿ ಮಾಲೀಕರ ವಿರುದ್ಧ ಕಠಿಣ ಶಿಕ್ಷೆ ವಿಧಿಸಬೇಕು. ಇದು ಎಲ್ಲಾ ನಾಯಿ ಸಾಕುವ ಮಾಲೀಕರಿಗೆ ಪಾಠವಾಗಬೇಕು ಎಂದು ಚಂದ್ರೇಶಕರ್ ಕುಟುಂಬಸ್ಥರು ಆಗ್ರಹಿಸಿದ್ದಾರೆ.