ಬೆಂಗಳೂರಿನಿಂದ ಲಖನೌಗೆ ಹೊರಟಿದ್ದ ಇಂಡಿಗೋ ವಿಮಾನದ ಶೌಚಾಲಯದಲ್ಲಿ ಹೈಜಾಕ್ ಬೆದರಿಕೆ ಚೀಟಿ ಪತ್ತೆಯಾಗಿದ್ದು, ವಿಮಾನ ನಿಲ್ದಾಣದಲ್ಲಿ ಪೂರ್ಣ ತುರ್ತು ಪರಿಸ್ಥಿತಿ ಘೋಷಿಸಲಾಯಿತು. ಭದ್ರತಾ ಪಡೆಗಳ ತೀವ್ರ ತಪಾಸಣೆಯ ನಂತರ ವಿಮಾನ ಸುರಕ್ಷಿತ ಎಂದು ಖಚಿತಪಡಿಸಿ, ಪ್ರಯಾಣಕ್ಕೆ ಅನುವು ಮಾಡಿಕೊಡಲಾಗಿದೆ.
ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಲಖನೌಗೆ ಹೊರಟಿದ್ದ ಇಂಡಿಗೋ ವಿಮಾನದಲ್ಲಿ ಹೈಜಾಕ್ ಬೆದರಿಕೆ ಚೀಟಿ ಪತ್ತೆಯಾಗಿದ್ದು, ವಿಮಾನ ನಿಲ್ದಾಣದಲ್ಲಿ ಕೆಲಕಾಲ ತೀವ್ರ ಆತಂಕ ಸೃಷ್ಟಿಸಿದೆ. ಇಂಡಿಗೋ ಸಂಸ್ಥೆಗೆ ಸೇರಿದ 6E-451 ವಿಮಾನ. ಬೆಂಗಳೂರು ವಿಮಾನ ನಿಲ್ದಾಣದ ಟರ್ಮಿನಲ್-1 ನಿಂದ ಬೆಂಗಳೂರಿನಿಂದ ಉತ್ತರ ಪ್ರದೇಶದ ಲಖನೌಗೆ ಹೊರಟಿತ್ತು. ಆದರೆ ಆ ಒಂದು ಬೆದರಿಕೆ ಮಾತ್ರ ಎಲ್ಲರನಗನು
ಚೀಟಿಯಲ್ಲಿದ್ದ ಆತಂಕಕಾರಿ ಸಂದೇಶವೇನು?
ವಿಮಾನದೊಳಗೆ ಅನುಮಾನಾಸ್ಪದ ಕೈಬರಹದ ಚೀಟಿಯೊಂದು ಪತ್ತೆಯಾಗಿದೆ. ಚೀಟಿಯಲ್ಲಿ Going to get hijacked exacta at 6:30 ಎಂದು ಬರೆಯಲಾಗಿತ್ತು. ಸಮಯದ ಉಲ್ಲೇಖ: ಸಂಜೆ 6:30 ರ ಸುಮಾರಿಗೆ ಈ ವಿಮಾನವನ್ನು ಹೈಜಾಕ್ ಮಾಡಲಾಗುತ್ತದೆ ಎಂದು ಉಲ್ಲೇಖಿಸಿ ಭೀತಿ ಹುಟ್ಟಿಸಲಾಗಿತ್ತು. ಆದರೆ ಸಿಬ್ಬಂದಿ ಚಾನಾಕ್ಷತದಿಂದ ದೊಡ್ಡ ಅವಘಡವೊಂದು ಸಂಭವಿಸುವುದು ತಪ್ಪಿದಂತಾಗಿದೆ.
ತಕ್ಷಣದ ರಕ್ಷಣಾ ಕ್ರಮಗಳು!
ವಿಷಯ ತಿಳಿಯುತ್ತಿದ್ದಂತೆ ವಿಮಾನ ನಿಲ್ದಾಣದ ಭದ್ರತಾ ಪಡೆಗಳು ಅಲರ್ಟ್ ಆದವು. ಕೂಡಲೇ ಕಾರ್ಯಪ್ರವೃತ್ತರಾದ ಸಿಬ್ಬಂದಿ, ಇಡೀ ವಿಮಾನವನ್ನು ಸಂಪೂರ್ಣವಾಗಿ ಪರಿಶೀಲನೆಗೆ ಒಳಪಡಿಸಿದರು. ತಪಾಸಣೆಯ ವೇಳೆ ಯಾವುದೇ ಸ್ಫೋಟಕ ಅಥವಾ ಶಂಕಾಸ್ಪದ ವಸ್ತುಗಳು ಪತ್ತೆಯಾಗಿಲ್ಲ. ಆದರೂ ಭದ್ರತಾ ಸಿಬ್ಬಂದಿಯ ತೀವ್ರ ತಪಾಸಣೆಯ ನಂತರ ವಿಮಾನ ಸುರಕ್ಷಿತವಾಗಿದೆ ಎಂದು ಧೃಡಪಟ್ಟಿದೆ. ಪರಿಶೀಲನೆ ಮುಗಿದ ಬೆನ್ನಲ್ಲೇ ವಿಮಾನ ಲಖನೌಗೆ ಹೊರಡಲು ಕ್ಲಿಯರೆನ್ಸ್ ನೀಡಲಾಗಿದೆ. ಸದ್ಯ ಇಂಡಿಗೋ ಏರ್ಲೈನ್ಸ್ ಸಿಬ್ಬಂದಿ ಪ್ರಯಾಣಿಕರನ್ನು ಮರು-ಬೋರ್ಡಿಂಗ್ ಮಾಡಿಸುತ್ತಿದ್ದು, ವಿಮಾನ ಪ್ರಯಾಣಕ್ಕೆ ಸಿದ್ಧವಾಗಿದೆ.
ಪೂರ್ಣ ತುರ್ತು ಪರಿಸ್ಥಿತಿ ಘೋಷಣೆ!
ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್-1 ರಲ್ಲಿ ಲಖನೌಗೆ ಹೊರಟಿದ್ದ ಇಂಡಿಗೋ ವಿಮಾನದಲ್ಲಿ ಹೈಜಾಕ್ ಬೆದರಿಕೆ ಹಿನ್ನೆಲೆ 'ಪೂರ್ಣ ತುರ್ತು ಪರಿಸ್ಥಿತಿ' ಘೋಷಿಸಲಾಗಿದೆ. ವಿಮಾನ ನಿಲ್ದಾಣದ ಇತಿಹಾಸ ಮತ್ತು ನಿಯಮಾವಳಿಗಳ ಪ್ರಕಾರ, ತೀವ್ರ ಸ್ವರೂಪದ ಹೈಜಾಕ್ ಬೆದರಿಕೆ ಸಂದೇಶ ಪತ್ತೆಯಾದ ತಕ್ಷಣವೇ 'ಫುಲ್ ಎಮರ್ಜೆನ್ಸಿ' ಎಂದು ಘೋಷಿಸಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಯಿತು. ಈ ಆತಂಕಕಾರಿ ಕೈಬರಹದ ಚೀಟಿಯು ವಿಮಾನದ ಒಳಗಿನ ಶೌಚಾಲಯದಲ್ಲಿ ಪತ್ತೆಯಾಗಿದೆ. ಬೆಂಗಳೂರು ಏರ್ಪೋರ್ಟ್ನ ಟರ್ಮಿನಲ್-1 ರನ್ವೇ ಹಾಗೂ ಸುತ್ತಮುತ್ತಲಿನ ಭದ್ರತೆಯನ್ನು ತಕ್ಷಣವೇ ದುಪ್ಪಟ್ಟುಗೊಳಿಸಲಾಯಿತು. ಪ್ರಯಾಣಕ್ಕೆ ರೆಡಿ ಭದ್ರತಾ ತಪಾಸಣೆ ಮುಗಿದ ಬಳಿಕ ವಿಮಾನ ಲಖನೌಗೆ ಹೊರಡಲು ಗ್ರೀನ್ ಸಿಗ್ನಲ್ ಸಿಕ್ಕಿದ್ದು, ಸದ್ಯ ಇಂಡಿಗೋ ಏರ್ಲೈನ್ಸ್ ಸಿಬ್ಬಂದಿ ಪ್ರಯಾಣಿಕರನ್ನು ಮರು-ಬೋರ್ಡಿಂಗ್ ಮಾಡಿಸುತ್ತಿದ್ದಾರೆ.














