ಒಂದೆಡೆ ಉಚಿತ ಗ್ಯಾರೆಂಟಿ, ಮತ್ತೊಂದೆ ಹಲವು ಇಲಾಖೆಗಳು ಆರ್ಥಿಕ ಸವಾಲುಗಳ ನಡುವೆ ಈಗಾಲೇ ರಾಜ್ಯದಲ್ಲಿ ಬಿಯರ್ ಬೆಲೆ ಏರಿಕೆ ಮಾಡಲಾಗಿದೆ. ಮದ್ಯಪ್ರಿಯರಿಗೆ ಬೆಲೆ ಏರಿಕೆ ಬಿಸಿ ತಟ್ಟಿದ ಬೆನ್ನಲ್ಲೇ ಇದೀಗ ಮತ್ತೊಂದು ಶಾಕ್ ಎದುರಾಗಿದೆ. ಬೆಂಗಳೂರಿನಲ್ಲಿ ಬಿಯರ್ ಕೊರತೆ ಎದುರಾಗಿದೆ.
ಬೆಂಗಳೂರು(ಜ.29) ಕರ್ನಾಟಕ ಸರ್ಕಾರ ಆರ್ಥಿಕ ಸಂಪನ್ಮೂಲ ಕ್ರೋಡಿಕರಣಕ್ಕೆ ಬಿಯರ್ ಬೆಲೆ ಹೆಚ್ಚಳ ಮಾಡಿದೆ. 10 ರಿಂದ 40 ರೂಪಾಯಿ ವರೆಗೆ ಬಿಯರ್ ಬೆಲೆಯಲ್ಲಿ ಏರಿಕೆಯಾಗಿದೆ. 650ಎಂಎಲ್ ಬಿಯರ್ ಬಾಟಲಿ ಇದೀಗ ದುಬಾರಿಯಾಗಿದೆ. ಹೀಗಾಗಿ ಬಿಯರ್ ಪ್ರಿಯರು ಇದೀಗ ಕಿಕ್ಕೇರಿಸುವ ಮೊದಲು ಯೋಚನೆ ಮಾಡುವಂತಾಗಿದೆ. ಬೆಲೆ ಏರಿಕೆ, ಮಾರಾಟ ಕುಸಿತದ ಬೆನ್ನಲ್ಲೇ ಮದ್ಯಪ್ರಿಯರಿಗೆ ಮತ್ತೊಂದು ಶಾಕ್ ಎದುರಾಗಿದೆ. ಬೆಂಗಳೂರಿನಲ್ಲಿ ಇದೀಗ ಬಿಯರ್ ಕೊರತೆ ಎದುರಾಗಿದೆ. ಹಲವು ಬ್ರ್ಯಾಂಡ್‌ಗಳ ಸ್ಟಾಕ್ ಖಾಲಿಯಾಗಿದೆ. ಇದೀಗ ಮದ್ಯ ಪ್ರಿಯರು ತಮ್ಮ ನೆಚ್ಚಿನ ಬ್ರ್ಯಾಂಡ್ ಇಲ್ಲದೆ ಪರಿತಪಿಸುವಂತಾಗಿದೆ. ಬೆಂಗಳೂರು ಮಾತ್ರವಲ್ಲ, ರಾಜ್ಯದ ಹಲವು ಭಾಗದಲ್ಲಿ ಬಿಯರ್ ಕೊರತೆ ಕಾಣುತ್ತಿದೆ.
ಎಂಆರ್‌ಪಿ ಔಟ್‌ಲೆಟ್, ವೈನ್ ಶಾಪ್, ಬಾರ್ ಸೇರಿದಂತೆ ಬಿಯರ್ ಮಾರಾಟಗೊಳ್ಳುತ್ತಿರುವ ಬಹುತೇಕ ಕಡೆಗಳಲ್ಲಿ ಬಿಯರ್ಕ ಕೊರತೆ ಎದುರಾಗಿದೆ. ಇದೀಗ ಮದ್ಯಪ್ರಿಯರು ತಮ್ಮ ಇಷ್ಟದ ಬಿಯರ್ ಇಲ್ಲದೆ ಬಿಯರ್ ಖರೀದಿಯಿದ ಹಿಂದೆ ಸರಿಯುತ್ತಿದ್ದಾರೆ. ಇದರಿಂದ ಬಿಯರ್ ಮಾರಾಟದಲ್ಲೂ ಗಣನೀಯ ಏರಿಕೆ ಕಂಡಿದೆ. ಸರ್ಕಾರದ ಬೆಲೆ ಏರಿಕೆ ಆದೇಶವನ್ನು ಬಿಯರ್ ಬ್ರ್ಯಾಂಡ್ ಕಂಪನಿಗಳು ಅಪ್‌ಡೇಟ್ ಮಾಡಿಕೊಂಡು ಬಿಯರ್ ಉತ್ಪಾದನೆಯಲ್ಲಿ ತೊಡಗಿದೆ.
ಬಿಯರ್ ಮಾರಾಟದಲ್ಲಿ ಕುಸಿತ: ಅಬಕಾರಿ ಇಲಾಖೆಗೆ ಶಾಕ್ ನೀಡಿದ ಬಿಯರ್ ಪ್ರಿಯರು
ಹೊಸ ಆದೇಶದ ಪ್ರಕಾರ ಹೊಸ ಲೇಬಲ್ ಸೇರಿದಂತೆ ಬಿಯರ್ ಉತ್ಪಾದನೆ ಆರಂಭಗೊಂಡಿದೆ. ಇದು ಪೂರೈಕೆಯಲ್ಲಿ ವ್ಯತ್ಯಾಸ ಮಾಡಿದೆ. ಇತ್ತ ಔಟ್‌ಲೆಟ್‌ಗಳಲ್ಲಿನ ಬಿಯರ್ ಸ್ಟಾಕ್ ಈಗಾಗಲೇ ಮುಗಿದಿದೆ. ಹೀಗಾಗಿ ಹಲವು ಬ್ರ್ಯಾಂಡ್‌ಗಳು ಮದ್ಯಪ್ರಿಯರಿಗೆ ಸಿಗುತ್ತಿಲ್ಲ. ಇಷ್ಟೇ ಅಲ್ಲ, ಈಗಾಗಲೇ ದೇಶದಲ್ಲಿ ಮದ್ಯ ಮಾರಾಟಗಾರರಿಗೆ ಹೊಸ ಮಾನದಂಡಗಳ ಆದೇಶ ನೀಡಲಾಗಿದೆ. ಈ ಪೈಕಿ ಬಿಯರ್ ಬಾಟಲಿಗಳ ಮೇಲೆ ಉತ್ಪಾದನೆ ವೇಳೆ ಸೇರಿಸಿರುವ ಸಕ್ಕರೆ ಪ್ರಮಾಣದ ಮಾಹಿತಿಯನ್ನು ಉಲ್ಲೇಖಿಸಲು ಸೂಚಿಸಿದೆ. ಬಿಯರ್ ಬಾಟಲಿಯ ಲೇಬಲ್‌ನಲ್ಲಿ ಪ್ರತಿ ಬಾಟಲಿಯಲ್ಲಿರುವ ಬಿಯರ್‌ನಲ್ಲಿ ಎಷ್ಟು ಪ್ರಮಾಣದ ಸಕ್ಕರೆ ಸೇರಿಸಲಾಗಿದೆ ಅನ್ನೋದು ಸ್ಪಷ್ಟವಾಗಿ ದಾಖಲಿಸಬೇಕು. ಇದು ಬಳಕೆದಾರರಿಗೆ ಒಂದು ಬಾಟಲಿ ಬಿಯರ್ ಸೇವನೆಯಿಂದ ಎಷ್ಟು ಪ್ರಮಾಣದ ಸಕ್ಕರೆ ಸೇವಿಸುತ್ತಾರೆ ಅನ್ನೋ ಮಾಹಿತಿ ನೀಡಲು ಸರ್ಕಾರ ಈ ಆದೇಶ ನೀಡಿದೆ.
ಒಂದೆಡೆ ರಾಜ್ಯ ಸರ್ಕಾರದ ಬೆಲೆ ಏರಿಕೆ ಮತ್ತೊಂದು ಸಕ್ಕರೆ ಪ್ರಮಾಣದ ಸ್ಪಷ್ಟ ಉಲ್ಲೇಖ ಆದೇಶಗಳಿಂದ ಬಿಯರ್ ಉತ್ಪಾದನೆ ಕಂಪನಿಗಳು ಸರಿಯಾಗಿ ಉತ್ಪಾದನೆ ಹಾಗೂ ಪೂರೈಕೆ ಮಾಡಲು ಸಾಧ್ಯವಾಗಿಲ್ಲ. ಈ ಕಾರಣಗಳಿಂದ ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಭಾಗದಲ್ಲಿ ಬಿಯರ್ ಕೊರತೆ ಕಂಡು ಬಂದಿದೆ.
ಆದರೆ ಬಿಯರ್ ಪೂರೈಕೆ ಕೊರತೆ ಹಾಗೂ ಬೆಲೆ ಏರಿಕೆಗೆ ಬೆಂಗಳೂರು ಬಾರ್ ಮಾಲೀಕ ಸಂಘ ತೀವ್ರ ಕಳವಳ ವ್ಯಕ್ತಪಡಿಸಿದೆ. ಕಾರಣ ಜನವರಿ ಮಧ್ಯ ಭಾಗದಲ್ಲಿ ಬಿಯರ್ ಬೆಲೆ ಹೆಚ್ಚಳ ಮಾಡಲಾಗಿದೆ. ಇದೇ ವೇಗದಲ್ಲಿ ಪೂರೈಕೆ ಪ್ರಮಾಣ ಕಡಿಮೆಯಾಗಿದೆ. ಇದರ ಜೊತೆಗೆ ಮಾರಾಟದಲ್ಲಿ ಕುಸಿತ ಕಂಡಿದೆ. ಸದ್ಯ ಬೇಸಿಗೆ ಕಾಲ ತೀವ್ರಗೊಳ್ಳುತ್ತಿದೆ. ಉರಿ ಬಿಸಿಲು, ಸೆಕೆ ಹೆಚ್ಚಾಗುತ್ತಿದೆ. ಈ ಸಂದರ್ಭದಲ್ಲಿ ಬಿಯರ್ ಮಾರಾಟ ಪ್ರತಿ ವರ್ಷ ಹೆಚ್ಚಾಗುತ್ತದೆ. ಆದರೆ ಈ ಬಾರಿ ಸವಾಲು ಹೆಚ್ಚಾಗಿದೆ. ಹೀಗಾಗಿ ಬಿಯರ್ ಮಾರಾಟ ಹಾಗೂ ಆದಾಯದಲ್ಲಿ ಭಾರಿ ಕುಸಿತ ಕಾಣವು ಸಾಧ್ಯತೆ ಇದೆ ಎಂದು ಬೆಂಗಳೂರು ಬಾರ್ ಮಾಲೀಕರ ಸಂಘದ ಅಧ್ಯಕ್ಷ ಲೋಕೇಶ್ ಹೇಳಿದ್ದಾರೆ.
ಹಲವು ಬಾರ್ ಹಾಗೂ ರೆಸ್ಟೋರೆಂಟ್ ಬಿಯರ್ ಮಾರಾಟದಲ್ಲೇ ಆದಾಯಗಳಿಸುತ್ತಿದೆ. ಆದರೆ ರಾಜ್ಯದಲ್ಲಿನ ಪರಿಸ್ಥಿತಿ ಈ ಬಾರ್ ಹಾಗೂ ರೆಸ್ಟೆೋರೆಂಟ್ ಮಾಲೀಕರಿಗೆ ಸವಾಲಾಗಿ ಪರಿಣಮಿಸಿದೆ.
ಮದ್ಯಪ್ರಿಯರಿಗೆ ಶಾಕ್, ಈ 6 ಬಿಯರ್‌ಗಳ ಬೆಲೆ 10 ರಿಂದ 45 ರೂಪಾಯಿವರೆಗೆ ಏರಿಕೆ!
