ಬ್ಲಿಂಕಿಟ್ ಎಜೆಂಟ್ ಬೆಂಗಳೂರಿನ ಸೈಂಟ್ ಮಾರ್ಕ್ ರಸ್ತೆ ಬದಿಯ ಪುಟ್‌ಪಾತ್ ಮೇಲಿಂದ ಸಾಗಿ ಇದೀಗ ಸಂಕಷ್ಟಕ್ಕೆ ಸಿಲುಕಿದ್ದಾನೆ. ಬೆಂಳೂರು ಪೊಲೀಸರು ಅಲರ್ಟ್ ಆಗುತ್ತಿದ್ದಂತೆ ಇತ್ತ ಬ್ಲಿಂಕಿಟ್ ಈ ಕುರಿತು ಸ್ಪಂದಿಸಿದೆ. 

ಬೆಂಗಳೂರು(ಫೆ.23) ಬೆಂಗಳೂರಿನ ಟ್ರಾಫಿಕ್ ಎಲ್ಲರಿಗೂ ಗೊತ್ತೇ ಇದೆ. ರಸ್ತೆಗಳಲ್ಲಿ ವಾಹನಗಳ ತುಂಬಿ ತುಳುಕುತ್ತದೆ. ಈ ವೇಳೆ ದ್ವಿಚಕ್ರ ವಾಹನ ಸವಾರರು ಫುಟ್‌ಪಾತ್ ಮೇಲಿಂದ ಸಾಗಿದ ಹಲವು ಘಟನೆಗಳು ನಡೆದಿದೆ. ಫುಟ್‌ಪಾತ್ ಮೂಲಕ್ ವಾಹನ ಚಲಾಯಿಸುವುದು ನಿಯಮ ಉಲ್ಲಂಘನೆಯಾಗಿದೆ. ಆದರೆ ಇದೀಗ ಬ್ಲಿಂಕಿಟ್ ಡೆಲಿವರಿ ಎಜೆಂಟ್ ಫುಟ್‌ಪಾತ್ ಮೇಲಿಂದ ಸಾಗಿದ ವಿಡಿಯೋ ಒಂದು ಬಹಿರಂಗವಾಗಿದೆ. ಸಾರ್ವಜನಿಕರೊಬ್ಬರು ಈ ವಿಡಿಯೋವನ್ನು ರೆಕಾರ್ಡ್ ಮಾಡಿ ಬೆಂಗಳೂರು ಪೊಲೀಸರ ಗಮನಕ್ಕೆ ತಂದಿದ್ದಾರೆ. ತಕ್ಷಣವೆ ಸ್ಪಂದಿಸಿದ ಬೆಂಗಳೂರು ಪೊಲೀಸರು ಮಾಹಿತಿ ಪಡೆದು ಕಾರ್ಯಾಚರಣೆ ನಡೆಸಿದ್ದಾರೆ. ಪೊಲೀಸರು ಸ್ಪಂದಿಸುತ್ತಿದ್ದಂತೆ ಇತ್ತ ಬ್ಲಿಂಕಿಟ್ ಕೂಡ ಸ್ಪಂದಿಸಿದೆ.

ಬೆಂಗಳೂರಿನ ಸೈಂಟ್ ಮಾರ್ಕ ರಸ್ತೆಯಲ್ಲಿ ಬ್ಲಿಂಕಿಟ್ ಎಜೆಂಟ್ ಡೆಲಿವರಿಗಾಗಿ ಪಾದಾಚಾರಿಗಳ ರಸ್ತೆ ಮೇಲೆ ದ್ವಿಚಕ್ರ ವಾಹನ ಚಲಾಯಿಸಿದ್ದಾರೆ. ಈ ಕುರಿತು ಅಕ್ಕಿ ರೊಟ್ಟಿ ಅನ್ನೋ ಎಕ್ಸ್ ಖಾತೆಯಲ್ಲಿ ವಿಡಿಯೋ ಪೋಸ್ಟ್ ಮಾಡಲಾಗಿದೆ. ಇಷ್ಟೇ ಅಲ್ಲ ಬ್ಲಿಂಕಿಟ್ ಡೆಲಿವರಿ ಎಜೆಂಟ್‌ಗಳಿಗೆ ಫುಟ್‌ಪಾತ್ ಮೇಲಿಂದ ವಾಹನ ಚಲಾಯಿಸಲು ವಿಶೇಷ ಅಧಿಕಾರವಿದೆಯಾ ಅನ್ನೋದು ನನಗೆ ಗೊತ್ತಿಲ್ಲ. ಬೆಂಗಳೂರು ಪೊಲೀಸರು ಈ ರೀತಿಯ ನಿಯಮ ಉಲ್ಲಂಘನೆಗೆ ಕಡಿವಾಣ ಹಾಕಬೇಕಿದೆ ಎಂದು ಪೋಸ್ಟ್ ಮಾಡಲಾಗಿತ್ತು.

ಹೇ ಪ್ರಭು ಏನಿದು? ಒಂದು ಆಟೋದಲ್ಲಿ 19 ಮಂದಿ, ವಿಡಿಯೋ ನೋಡಿ ಪೊಲೀಸರೇ ಶಾಕ್

ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಬೆಂಗಳೂರು ಟ್ರಾಫಿಕ್ ಪೊಲೀಸರು ಸ್ಪಂದಿಸಿದ್ದಾರೆ. ಘಟನಾ ಸ್ಥಳದ ಬಗ್ಗೆ ಮಾಹಿತಿ ನೀಡಲು ಮನವಿ ಮಾಡಿದ್ದಾರೆ. ಬಳಿಕ ಮಾಹಿತಿ ಕಲೆ ಹಾಕಿದ ಬೆಂಗಳೂರು ಪೊಲೀಸರು ಅಲರ್ಟ್ ಆಗಿದ್ದಾರೆ. ಕಾರ್ಯಾಚರಣೆ ಆರಂಭಿಸಿದ್ದಾರೆ. ಇತ್ತ ಬ್ಲಿಂಕಿಟ್ ಕೂಡ ಈ ಘಟನೆ ಕುರಿತು ಸ್ಪಂದಿಸಿದೆ. ಟ್ರಾಫಿಕ್ ನಿಯಮ ಉಲ್ಲಂಘನೆಯನ್ನು ನಾವು ಪ್ರೇರಿಸುವುದಿಲ್ಲ. ನಿಯಮ ಉಲ್ಲಂಘಿಸಿದ ಪಾರ್ಟ್ನರ್ ವಿರುದ್ದ ಎಚ್ಚರಿಕೆ ಸಂದೇಶ ನೀಡಲಾಗಿದೆ ಎಂದು ಬ್ಲಿಂಕಿಟ್ ಹೇಳಿದೆ.

ಇದೇ ವೇಳೆ ಬೆಂಗಳೂರು ಟ್ರಾಫಿಕ್ ಪೊಲೀಸರು, ಯಾವುದೇ ರಸ್ತೆಯಲ್ಲಿ ಟ್ರಾಫಿಕ್ ನಿಯಮ ಉಲ್ಲಂಘನೆ ಕಂಡುಬಂದಲ್ಲಿ ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡುವಂತೆ ಸೂಚಿಸಿದೆ ಇದಕ್ಕಾಗಿ ಪೊಲೀಸರ ಅಧಿಕೃತ ಆ್ಯಪ್, ಅಥವಾ ವೆಬ್‌ಸೈಟ್ ಮೂಲಕ ಮಾಹಿತಿ ನೀಡುವಂತೆ ಕೋರಿದೆ. ಫೋಟೋ, ಸ್ಥಳದ ಮಾಹಿತಿ ಸೇರಿದಂತೆ ಕೆಲ ಮಾಹಿತಿಗಳನ್ನು ಪೊಲೀಸರಿಗೆ ನೀಡಿದರೆ ಮುಂದಿನ ಕ್ರಮ ಪೊಲೀಸರು ಕೈಗೊಳ್ಳಲಿದ್ದಾರೆ. 

Scroll to load tweet…

ಇತ್ತ ಈ ವಿಡಿಯೋಗೆ ಹಲವು ಬೆಂಗಳೂರಿಗರು ಪ್ರತಿಕ್ರಿಯಿಸಿದ್ದಾರೆ. ಬ್ಲಿಂಕಿಟ್ ಡೆಲಿವರಿ ಎಜೆಂಟ್ ನಿಯಮ ಉಲ್ಲಂಘನೆ ವಿಡಿಯೋದಲ್ಲಿ ಸೆರೆಯಾಗಿದೆ. ಆದರೆ ಟ್ರಾಫಿಕ್ ಹೆಚ್ಚಿರುವ ಬೆಂಗಳೂರಿನ ಹಲವು ರಸ್ತೆಗಳಲ್ಲಿ ಈ ರೀತಿಯ ನಿಯಮ ಉಲ್ಲಂಘನೆ ಸರ್ವೇ ಸಾಮಾನ್ಯವಾಗಿದೆ. ಈ ವೇಳೆ ಎಲ್ಲೂ ದ್ವಿಚಕ್ರ ವಾಹನ, ಕಾರು ಸೇರಿದಂತ ಇತರ ವಾಹನಗಳಲ್ಲಿರುತ್ತಾರೆ. ಹೀಗಾಗಿ ವಿಡಿಯೋ ಸೆರೆ ಹಿಡಿಯಲು ಸಾಧ್ಯವಾಗುವುದಿಲ್ಲ. ಆದರೆ ಬೆಂಗಳೂರು ಪೊಲೀಸರು ಟ್ರಾಫಿಕ್ ಹೆಚ್ಚಿರುವ ರಸ್ತೆಗಳ ಸಿಸಿಟಿವಿ ದೃಶ್ಯ ಪರಿಶೀಲಿಸಿದರೆ ಕಠಿಣ ಕ್ರಮ ಕೈಗೊಳ್ಳಲು ಸಾಧ್ಯವಿದೆ ಎಂದು ಹಲವರು ಸೂಚಿಸಿದ್ದಾರೆ.

ವರ್ಕ್ ಫ್ರಮ್ ಕಾರ್, ಡ್ರೈವಿಂಗ್ ಜೊತೆ ಕೆಲಸ ಮಾಡಿದ ಬೆಂಗಳೂರು ಮಹಿಳೆಗೆ ಪೊಲೀಸರ ಉಡುಗೊರೆ