ಬೆಂಗಳೂರಿನ ಉಬರ್ ಬೈಕ್ ಚಾಲಕನ ಸಂಬಳ ಕೇಳಿ ಸಿಲಿಕಾನ್ ಸಿಟಿ ಮಂದಿ ಫುಲ್ ಶಾಕ್

ಬೆಂಗಳೂರಿನ ಉಬರ್ ಬೈಕ್ ಚಾಲಕನೊಬ್ಬ ತಿಂಗಳಿಗೆ ಎಷ್ಟು ಹಣ ಸಂಪಾದಿಸುತ್ತಿರುವುದಾಗಿ ಹೇಳಿಕೊಂಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಆದರೆ, ನೆಟ್ಟಿಗರು ಇದನ್ನು ಸುಳ್ಳು ಎಂದು ಪ್ರಶ್ನಿಸಿದ್ದಾರೆ.

Bengaluru Bike Uber driver earns Rs 80000 Video viral mrq

ಬೆಂಗಳೂರು: ಸೋಶಿಯಲ್ ಮೀಡಿಯಾದಲ್ಲಿ ಬೆಂಗಳೂರಿನ ವ್ಯಕ್ತಿಯ ವಿಡಿಯೋ ಫುಲ್ ವೈರಲ್ ಆಗ್ತಿದೆ. ಈ ವಿಡಿಯೋದಲ್ಲಿ ಬೈಕ್ ಚಾಲಕನೋರ್ವ ಸ್ವ್ಯಾಗ್‌ನಿಂದ ತಿಂಗಳಿಗೆ ಎಷ್ಟು ಹಣ ಸಂಪಾದಿಸುತ್ತೇನೆ ಎಂಬ ಮಾಹಿತಿಯನ್ನು ರಿವೀಲ್ ಮಾಡಿದ್ದಾನೆ. ವಿಡಿಯೋ ನೋಡಿದ ಬೆಂಗಳೂರಿನ ಜನರು, ಕೆಲಸ ಯಾವುದಾದ್ರೆ ಏನು? ಶ್ರದ್ಧೆಯಿಂದ ಮಾಡಬೇಕು. ಕೆಲಸದಲ್ಲಿ ಶ್ರದ್ಧೆ ಇದ್ರೆ ಲಕ್ಷ್ಮೀದೇವಿಯೇ ನಿಮ್ಮನ್ನು ಹುಡುಕಿಕೊಂಡು ಬರುತ್ತಾಳೆ ಎಂದು ಕಮೆಂಟ್ ಮಾಡುತ್ತಿದ್ದಾರೆ. ಉಬರ್ ಬೈಕ್ ಚಾಲಕ ಸಹ ದಿನಕ್ಕೆ ಎಷ್ಟು ಗಂಟೆ ಕೆಲಸ ಮಾಡುತ್ತಾನೆ ಎಂಬುದನ್ನು ಸಹ ವಿವರಿಸಿದ್ದಾನೆ. 

ಈ ವಿಡಿಯೋವನ್ನು Karnataka Portfolio ಎಂಬ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಡಿಸೆಂಬರ್ 4ರಂದು ಈ ವಿಡಿಯೋ ಅಪ್ಲೋಡ್ ಆಗಿದ್ದು, 6.50 ಲಕ್ಷಕ್ಕೂ ಅಧಿಕ ವ್ಯೂವ್ ಪಡೆದುಕೊಂಡಿದ್ದು, 3 ಸಾವಿರಕ್ಕೂ ಹೆಚ್ಚು ಲೈಕ್ಸ್ ಬಂದಿವೆ. ಆಟೋ ಚಾಲಕರೇ ಹುಷಾರ್ ಆಗಿರಿ, ಎಲ್ಲದಕ್ಕೂ ಎರಡುಪಟ್ಟು ಹಣ ಕೇಳೋರೆ ಹುಷಾರಾಗಿರಿ ಎಂದು ಕಮೆಂಟ್ ಮಾಡಿದ್ದಾರೆ 

ವಿಡಿಯೋದಲ್ಲಿ ಏನಿದೆ?
ಪ್ರತಿ ತಿಂಗಳು ನಾನು 80 ಸಾವಿರ ರೂಪಾಯಿ ಹಣ ಸಂಪಾದಿಸುತ್ತೇನೆ. ಕೇವಲ ಉಬರ್ ಬೈಕ್ ಚಾಲನೆ ಮಾಡೋದರಿಂದ ಇಷ್ಟು ಹಣ ನನಗೆ ಸಿಗುತ್ತದೆ. ಇಷ್ಟು ಹಣ ಸಿಗುತ್ತೆ ಅಂದ್ರೆ ಜನರು ನಗುತ್ತಾರೆ. ದಿನಕ್ಕೆ 13 ಗಂಟೆ ಕೆಲಸ ಮಾಡುತ್ತೇನೆ. ಹೆಚ್ಚು ಕೆಲಸ ಮಾಡಿದ್ರೆ ಮಾತ್ರ ಅಧಿಕ ಹಣ ಸಿಗುತ್ತದೆ. ಯಾವ ಕಂಪನಿಯೂ ಇಷ್ಟೊಂದು ಹಣವನ್ನು ನೀಡಲ್ಲ. ಸಾಕು ಅನ್ನಿಸಿದಾಗ ಮೊಬೈಲ್ ಆಫ್ ಮಾಡಿ ರೆಸ್ಟ್ ತೆಗೆದುಕೊಳ್ಳುತ್ತೇನೆ. ಇನ್ನುಳಿದ ಸಮಯದಲ್ಲಿ ನನ್ನಿಷ್ಟದ ಕೆಲಸ ಮಾಡುತ್ತೇನೆ. ನನಗೆ ಯಾರು ಹೇಳೋರು ಇಲ್ಲ, ಇಲ್ಲಿ ನನಗೆ ನಾನೇ ಮಾಲೀಕ ಎಂದು ಉಬರ್ ಚಾಲಕ ಹೇಳುತ್ತಾನೆ. 

ಇದನ್ನೂ ಓದಿ: ಓ ದೇವ್ರೇ, ಇಂಥಾ ಕಷ್ಟ ಯಾರಿಗೂ ಬೇಡ; ಪಾನಿಪುರಿ ವ್ಯಾಪಾರಿ ಕಷ್ಟಕ್ಕೆ ಮರುಗಿದ ಜನರು

ಈ ವಿಡಿಯೋಗೆ ಕಮೆಂಟ್ ಮಾಡಿರುವ ನೆಟ್ಟಿಗರು, ಇದು ನಂಬಲು ಅಸಾಧ್ಯ. ಆತ ಸುಳ್ಳು ಹೇಳುತ್ತಿದ್ದಾನೆ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ.   ಒಂದಿಷ್ಟು ಜನರು ಹಾರ್ಡ್‌ವರ್ಕ್‌ಗೆ ಪ್ರತಿಫಲ ಸಿಗುತ್ತದೆ. ದಿನಕ್ಕೆ 13 ಗಂಟೆ ಬೆಂಗಳೂರಿನ ಟ್ರಾಫಿಕ್‌ನಲ್ಲಿ ಸುತ್ತೋದು ಅಂದ್ರೆ ಸಾಮನ್ಯವಲ್ಲ. ಆದ್ರೆ ಈ ರೀತಿ 13 ಗಂಟೆ ಕೆಲಸ ಮಾಡಿದ್ರೆ ಮುಂದಿನ 2 ವರ್ಷದಲ್ಲಿ ಆತನಿಗೆ ಸೊಂಟದಲ್ಲಿ ನೋವು ಕಾಣಿಸಿಕೊಳ್ಳುವುದು ಖಂಡಿತ ಎಂದು ಎಚ್ಚರಿಕೆಯನ್ನು ನೀಡಿದ್ದಾರೆ.

1 ಗಂಟೆಗೆ 200  ರೂಪಾಯಿ  ಅಂದುಕೊಳ್ಳೋಣ. 13  ಗಂಟೆಗೆ 2600 ರೂಪಾಯಿ ಆಗುತ್ತದೆ. 30 ದಿನಕ್ಕೆ ಪ್ರತಿದಿನ 13  ಗಂಟೆ ಅಂತ ಲೆಕ್ಕ ಹಾಕಿದ್ರೆ  78,000 ರೂಪಾಯಿ ಆಗುತ್ತದೆ. ಹಾಗಾದ್ರೆ ಬೈಕ್‌ಗೆ ಇಂಧನ ಏನು ಮನೆಯಿಂದ ಬರುತ್ತಾ? ಆ ಹಣ ಕಳೆದ್ರೆ ನಿಜವಾದ ಸಂಬಳ ಸಿಗುತ್ತದೆ.  ವಾರಕ್ಕೆ 1 ರಜೆ ಅಂದ್ರೆ ತಿಂಗಳಿಗೆ 4 ಆಗುತ್ತದೆ. ಹಾಗಾಗಿ ಈ ವ್ಯಕ್ತಿ ಹೇಳುತ್ತಿರೋದು ಶುದ್ಧ ಸುಳ್ಳು ಎಂದು ಕೆಲ ನೆಟ್ಟಿಗರು ಲೆಕ್ಕಾಚಾರದ  ಮೂಲಕ ಹೇಳಿದ್ದಾರೆ.

ಇದನ್ನೂ ಓದಿ: ಹರಕಲು-ಮುರುಕು ಸಲೂನ್‌ಗೆ ದೇವರಾಗಿ ಬಂದ ಯುವಕ; ಕಣ್ಣೀರಿಟ್ಟು ಭೂತಾಯಿಗೆ ನಮಸ್ಕರಿಸಿ ಕುಣಿದಾಡಿದ ಕ್ಷೌರಿಕ

Latest Videos
Follow Us:
Download App:
  • android
  • ios