Asianet Suvarna News Asianet Suvarna News

ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ "ಡಿಜಿಯಾತ್ರೆ" ಆರಂಭ: ಆ್ಯಪ್ ಅಳವಡಿಸಿಕೊಂಡ ದೇಶದ 2ನೇ ವಿಮಾನ ನಿಲ್ದಾಣ

ದೆಹಲಿ ಅಂತಾರಾಷ್ಟ್ರೀಯ ಏರ್‌ಪೋರ್ಟ್ ಲಿಮಿಟೆಡ್ ಹಾಗೂ ಬೆಂಗಳೂರು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ (ಬಿಐಎಎಲ್) ದಲ್ಲಿ ಕೇಂದ್ರದ ಡಿಜಿಯಾತ್ರಾ ಆ್ಯಪ್‌ನ ಬೀಟಾ ಆವೃತ್ತಿಯನ್ನು ಅಳವಡಿಸಲಾಗಿದೆ. 

bengaluru airport launch beta version of digiyatra app for seamless travel ash
Author
Bangalore, First Published Aug 16, 2022, 7:36 PM IST

ಬೆಂಗಳೂರು: ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯದ ಮಹತ್ವದ ಯೋಜನೆಯಾದ "ಡಿಜಿಯಾತ್ರಾ" (DigiYatra) ಆ್ಯಪ್‌ನ (App) ಬೀಟಾ ಆವೃತ್ತಿಯನ್ನು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಳವಡಿಸಿಕೊಂಡಿದ್ದು, ಸೋಮವಾರ ಅಂದರೆ  ಆಗಸ್ಟ್‌ 15 ರಿಂದಲೇ ಪ್ರಾರಂಭಗೊಂಡಿದೆ. ಡಿಜಿಯಾತ್ರಾ ಎನ್ನುವ ಆ್ಯಪ್‌ ಅನ್ನು ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯ (Civil Aviation of India) ದೇಶದ 2 ವಿಮಾನ ನಿಲ್ದಾಣಗಳಲ್ಲಿ ಬಿಡುಗಡೆ ಮಾಡಿದ್ದು, ಈ ಪೈಕಿ ಸಿಲಿಕಾನ್‌ ಸಿಟಿಯ ಬೆಂಗಳೂರು ವಿಮಾನ ನಿಲ್ದಾಣ ಒಂದಾಗಿದೆ. 

‘’ಡಿಜಿಯಾತ್ರಾ’’ ಎಂದರೆ, ನಿಮ್ಮ ಫೇಸ್‌ ಬಯೋಮೆಟ್ರಿಕ್‌ ಮೂಲಕ ಪ್ರಯಾಣಿಕರು ವಿಮಾನ ನಿಲ್ದಾಣವನ್ನು ಪ್ರವೇಶಿಸುವ ಯೋಜನೆಯಾಗಿದೆ. ಬೆಂಗಳೂರು ವಿಮಾನ ನಿಲ್ದಾಣದ ಇ-ಗೇಟ್‌ನಲ್ಲಿ ಡಿಜಿಯಾತ್ರಾ ಬಯೋಮೆಟ್ರಿಕ್‌ ಬೋರ್ಡಿಂಗ್‌ ಸಿಸ್ಟಮ್‌ (Biometric Boarding System) ಅಳವಡಿಸಲಾಗಿದ್ದು, ಹಂತಹಂತವಾಗಿ ಇದನ್ನು ಎಲ್ಲಾ ಗೇಟ್‌ಗಳಲ್ಲಿ ಅಳವಡಿಸಲಾಗುವುದು ಎಂದು ತಿಳಿದುಬಂದಿದೆ. ಈ ‘’ಡಿಜಿಯಾತ್ರಾ’’ ಬಯೋಮೆಟ್ರಿಕ್‌ ಸಿಸ್ಟಮ್‌ ನಿಮ್ಮ ಮುಖಚರ್ಯದಿಂದ ನಿಮ್ಮ ಗುರುತನ್ನ ನಿಖರವಾಗಿ ಪತ್ತೆಹಚ್ಚಲಿದ್ದು, ಈ ಮೂಲಕ ನಿಮ್ಮ ಬೋರ್ಡಿಂಗ್‌ ಪಾಸ್‌ (Boarding Pass) ಅನ್ನು ದೃಢೀಕರಿಸಲಿದೆ. 

ಏರ್‌ಪೋರ್ಟ್‌ನಲ್ಲೇ ಮಂಕಿಪಾಕ್ಸ್‌ ಸೋಂಕಿತರ ಪತ್ತೆಗೆ ಸಿಎಂ ಕಟ್ಟಪ್ಪಣೆ

ಪ್ರಸ್ತುತ ‘’ಡಿಜಿಯಾತ್ರಾ’’ ಆ್ಯಪ್‌ನ ಯೋಜನೆಯನ್ನು ವಿಸ್ತಾರ ಏರ್‌ಲೈನ್ಸ್‌ ಹಾಗೂ ಏರ್‌ ಏಷಿಯಾ ಅಳವಡಿಸಿಕೊಂಡಿದೆ. ಪ್ರಯಾಣಿಕರು ಈ ವಿಮಾನಗಳಲ್ಲಿ ಪ್ರಯಾಣಿಸಲು ಮೊದಲೇ ಡಿಜಿಯಾತ್ರಾ ಆ್ಯಪ್‌ ಅನ್ನು ಪ್ಲೇಸ್ಟೋರ್‌ ಮೂಲಕ ಡೌನ್‌ಲೋನ್‌ ಮಾಡಿ, ನೋಂದಣಿ ಮಾಡಿಕೊಳ್ಳಬೇಕು. ಇನ್ನೊಂದು ತಿಂಗಳಲ್ಲಿ ಐಫೋನ್‌ ಮೊಬೈಲ್‌ ಬಳಕೆದಾರರಿಗೆ ಐಒಎಸ್‌ನಲ್ಲಿ ಲಭ್ಯವಾಗಲಿದೆ. ಈ ಕುರಿತು ಮಾತನಾಡಿದ ಬಿಐಎಎಲ್‌ನ  ಸಿಇಒ ಹರಿ ಮರಾರ್‌, ಪ್ರಯಾಣಿಕರ ಪ್ರಯಾಣವನ್ನು ಸರಳೀಕರಿಸುವ ಉದ್ದೇಶವನ್ನು ನಾವು ಹಿಂದಿನಿಂದಲೂ ಹೊಂದಿದ್ದೆವು. ಇದೀಗ ಡಿಜಿಯಾತ್ರಾ ಸೆಂಟ್ರಲ್‌ ಇಕೋಸಿಸ್ಟಮ್‌ ಅಳವಡಿಕೆ ಮಾಡಿಕೊಳ್ಳುವ ಮೂಲಕ ಇನ್ನಷ್ಟು ಜನಸ್ನೇಹಿ ಮಾಡಲಾಗಿದೆ ಎಂದು ಅವರು ಹೇಳಿದರು.
 
‘’ಡಿಜಿಯಾತ್ರಾ’’ ಆ್ಯಪ್‌ ಅನ್ನು ಡಿವೈಸಿಇ, ವರ್ಲ್ಡ್ ವೈಡ್ ವೆಬ್ ಕನ್ಸಾರ್ಟಿಯಂ ವ್ಯಾಖ್ಯಾನಿಸಿದ ಮಾನದಂಡಗಳ ಅನ್ವಯ ನಿರ್ಮಿಸಲಾಗಿದ್ದು ಅದರಲ್ಲಿ ಪರಿಶೀಲಿಸಬಹುದಾದ ರುಜುವಾತುಗಳೊಂದಿಗೆ (ವೆರಿಫೈಯಬಲ್ ಕ್ರೆಡೆನ್ಷಿಯಲ್ಸ್-ವಿಸಿಗಳು) ಸೆಲ್ಫ್ ಸಾವರಿನ್ ಐಡೆಂಟಿಟಿ(ಎಸ್‌ಎಸ್‌ಐ), ಡೀಸೆಂಟ್ರಲೈಸ್ಡ್ ಐಡೆಂಟಿಫೈರ‍್ಸ್ (ಡಿಐಡಿಗಳು), ಡಿಸ್ಟ್ರಿಬ್ಯೂಟೆಡ್ ಲೆಡ್ಜರ್‌ನ ವಿಶ್ವಾಸಾರ್ಹತೆ ಮತ್ತು ಖಾಸಗಿತನದ ವಿನ್ಯಾಸ ಹಾಗೂ ಖಾಸಗಿತನವನ್ನು ಸಹಜವಾಗಿ ಮೂಲಭೂತ ಸಿದ್ಧಾಂತಗಳಾಗಿ ಅಳವಡಿಸಿಕೊಳ್ಳಲಾಗಿದೆ. ಇದರಿಂದ ಖಾಸಗಿತನದ ಸಮಸ್ಯೆಗಳ ಕಾಳಜಿ ವಹಿಸಲಾಗುತ್ತದೆ ಮತ್ತು ಪ್ರಯಾಣಿಕರು ಅವರ ದತ್ತಾಂಶ ಹಂಚಿಕೊಳ್ಳುವ ಬಗ್ಗೆ ಆತಂಕ ಪಡಬೇಕಿಲ್ಲ. ಏಕೆಂದರೆ ಅದು ಸುರಕ್ಷಿತವಾಗಿರುತ್ತದೆ ಮತ್ತು ಅವರ ಪ್ರಯಾಣದ 24 ಗಂಟೆಗಳ ನಂತರ ವಿವರವನ್ನು ಅಳಿಸಲಾಗುತ್ತದೆ. 

ಡಿವೈಸಿಇ ಡಿಜಿ ಯಾತ್ರಾ ಫೌಂಡೇಷನ್ (ಡಿವೈಎಫ್) ಉಪಕ್ರಮವಾಗಿದ್ದು, 2019ರಲ್ಲಿ ಪ್ರಾರಂಭವಾದ ಜಂಟಿ ಸಹಯೋಗದ ಕಂಪನಿಯಾಗಿದೆ. ಬಿಐಎಎಲ್ ಅದರ ಪ್ರಮುಖ ಷೇರುದಾರರಲ್ಲಿ ಒಂದಾಗಿದೆ. ಡಿಜಿಯಾತ್ರಾ ಫೌಂಡೇಷನ್ ಅಖಿಲ ಭಾರತ ಸಂಸ್ಥೆಯಾಗಿದೆ ಮತ್ತು ಪ್ರಯಾಣಿಕರ ಗುರುತಿನ ದೃಢೀಕರಣ ಪ್ರಕ್ರಿಯೆಯ ಪಾಲಕನಾಗಿದೆ. ದೆಹಲಿ ಮತ್ತು ಬೆಂಗಳೂರು ವಿಮಾನ ನಿಲ್ದಾಣಗಳಲ್ಲಿ ತಡೆರಹಿತ ಮತ್ತು ಕಾಗದ ರಹಿತ ಪ್ರಯಾಣಕ್ಕಾಗಿ ದೇಶೀಯ ಪ್ರಯಾಣಿಕರಿಗೆ ಮುಖ ಗುರುತಿಸುವ ವ್ಯವಸ್ಥೆಯನ್ನು ಪರಿಚಯಿಸಲಾಗಿದೆ ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ.

ಬೆಂಗಳೂರು ಏರ್‌ಪೋರ್ಟ್‌ಗೆ 5 ಹೆಚ್ಚುವರಿ ಮೆಮು ರೈಲು ಸಂಚಾರ

ದೆಹಲಿ ಅಂತಾರಾಷ್ಟ್ರೀಯ ಏರ್‌ಪೋರ್ಟ್ ಲಿಮಿಟೆಡ್ ಹಾಗೂ ಬೆಂಗಳೂರು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ (ಬಿಐಎಎಲ್) ಕೇಂದ್ರದ ಡಿಜಿಯಾತ್ರಾ ಉಪಕ್ರಮದ ಸಾಫ್ಟ್ ಲಾಂಚ್ ಅನ್ನು ಘೋಷಿಸಿದ್ದು, ಆಗಸ್ಟ್ 15 ರಂದು ಭಾರತದ 76 ನೇ ಸ್ವಾತಂತ್ರ್ಯ ದಿನಾಚರಣೆಯಂದು ಆಂಡ್ರಾಯ್ಡ್ ಬಳಕೆದಾರರಿಗೆ ಅಪ್ಲಿಕೇಶನ್‌ನ ಬೀಟಾ ಆವೃತ್ತಿಯನ್ನು ಹೊರತಂದಿದೆ. ಸದ್ಯ, ಸ್ವಾತಂತ್ರ್ಯ ದಿನದಂದು ದೇಶದ ಈ ಎರಡು ವಿಮಾನ ನಿಲ್ದಾಣಗಳಲ್ಲಿ ಈ ಆ್ಯಪ್‌ ಅನ್ನು ಆರಂಭಿಸಲಾಗಿದೆ. 

Follow Us:
Download App:
  • android
  • ios