ಆಯುಷ್ಮಾನ್ ವಿಮೆ ನಿರಾಕರಿಸಿದ ಆಸ್ಪತ್ರೆ, ಬೆಂಗಳೂರಿನ 70 ವರ್ಷದ ರೋಗಿಯ ದುರಂತ ಅಂತ್ಯ

72 ವರ್ಷದ ಕ್ಯಾನ್ಸರ್ ರೋಗಿಯ ಚಿಕಿತ್ಸೆಗೆ ಹಿರಿಯ ನಾಗರೀಕರ ಅಡಿಯ ಆಯುಷ್ಮಾನ್ ಕಾರ್ಡ್ ವಿಮೆ ಬಳಸಿಕೊಳ್ಳಲು ಬೆಂಗಳೂರಿನ ಆಸ್ಪತ್ರೆ ನಿರಾಕರಿಸಿದೆ. ಇದರ ಪರಿಣಾಮ ರೋಗಿ ಬದುಕು ಅಂತ್ಯಗೊಳಿಸಿದ ಘಟನೆ ನಡೆದಿದೆ.

Bengaluru 72 year old caner patient end life after hospital denies Ayushman insurance

ಬೆಂಗಳೂರು(ಜ.10) ಕೇಂದ್ರ ಸರ್ಕಾರ ಹಿರಿಯ ನಾಗರೀಕರಿಗೂ ಆಯುಷ್ಮಾನ್ ಭಾರತ್ ಆರೋಗ್ಯ ವಿಮೆ ಸೌಲಭ್ಯ ನೀಡಿದೆ. ಹಿರಿಯ ನಾಗರೀಕರು ಆರೋಗ್ಯ ವಿಮೆ ಸೌಲಭ್ಯದಿಂದ ವಂಚಿತರಾಗಬಾರದು ಎಂದು ಇತ್ತೀಚೆಗೆ ಈ ಸೌಲಭ್ಯ ನೀಡಲಾಗಿದೆ. ಆದರೆ ಬೆಂಗಳೂರಿನ ಆಸ್ಪತ್ರೆ 72 ರ್ಷದ ಕ್ಯಾನ್ಸರ್ ರೋಗಿಗೆ ಆಯುಷ್ಮಾನ್ ಕಾರ್ಡ್ ವಿಮೆಯಡಿಯಲ್ಲಿ ಚಿಕಿತ್ಸೆ ನೀಡಲು ನಿರಾಕರಿಸಿದೆ. ಆಯುಷ್ಮಾನ್ ಭಾರತ್ ಆರೋಗ್ಯ ವಿಮೆಯ 5 ಲಕ್ಷ ರೂಪಾಯಿ ವಿಮೆ ಸೌಲಭ್ಯ ನಿರಾಕರಿಸಿದ ಬೆನ್ನಲ್ಲೇ ಮತ್ತಷ್ಟು ಒತ್ತಡಕ್ಕೆ ಸಿಲುಕಿದ ರೋಗಿ, ಬದುಕು ಅಂತ್ಯಗೊಳಿಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ನಿವೃತ್ತ ರಾಜ್ಯ ಸರ್ಕಾರಿ ಉದ್ಯೋಗಿಯಾಗಿರುವ 72 ವರ್ಷದ ಹಿರಿಯ ನಾಗರೀಕ ಕ್ಯಾನ್ಸರ್ ಆರೋಗ್ಯ ಸಮಸ್ಯೆಗೆ ತುತ್ತಾಗಿದ್ದಾರೆ. ಹೀಗಾಗಿ ಕುಟುಂಬಸ್ಥರು ಕಿದ್ವಾಯಿ ಆಸ್ರತ್ರಗೆ ದಾಖಲಿಸಿದ್ದಾರೆ. ಚಿಕಿತ್ಸೆ ಆರಂಭಗೊಂಡಿದೆ. ಪರೀಕ್ಷೆಗಳು, ಸ್ಕ್ಯಾನ್ ಸೇರಿದಂತೆ ಹಲವು ತಪಾಸಣೆ ನಡೆದಿದೆ. ಇದರ ವೆಚ್ಚ 20,000 ರೂಪಾಯಿ ಆಗಿದೆ. ಆದರೆ ಇತ್ತೀಚೆಗಷ್ಟೇ ಹಿರಿಯ ನಾಗರೀಕ ಕೇಂದ್ರ ಸರ್ಕಾರದ ಆಯುಷ್ಮಾನ್ ಭಾರತ್ ಆರೋಗ್ಯ ವಿಮೆ ನೋಂದಾಯಿಸಿಕೊಂಡಿದ್ದರು. ಈ ವಿಮೆಯನ್ನು ಆಸ್ಪತ್ರೆಗೆ ನೀಡಲಾಗಿದೆ. ಆದರೆ ಹಿರಿಯ ನಾಗರೀಕರ ಆರೋಗ್ಯ ವಿಮೆ ಕುರಿತು ರಾಜ್ಯ ಸರ್ಕಾರದಿಂದ ಸುತ್ತೋಲೆ ಹಾಗೂ ನಿರ್ದೇಶನ ಬರದ ಕಾರಣ ಆಸ್ಪತ್ರೆ ಆಯುಷ್ಮಾನ್ ವಿಮೆ ಸೌಲಭ್ಯದಡಿಯಲ್ಲಿ ಚಿಕಿತ್ಸೆ ನೀಡಲು ನಿರಾಕರಿಸಿದೆ. 

 70 ವರ್ಷ ಮೇಲ್ಪಟ್ಟವರಿಗೂ ಆಯುಷ್ಮಾನ್‌ ವಿಮೆ ವಿಸ್ತರಣೆ: ಪ್ರಧಾನಿ ಮೋದಿ ಚಾಲನೆ

ಹಿರಿಯ ನಾಗರೀಕನ ಕುಟುಂಬಸ್ಥರು ಬಿಲ್ ಪಾವತಿಸಿದ್ದಾರೆ. ಇತ್ತ ಕಿದ್ವಾಯಿ ಆಸ್ಪತ್ರೆ ಬಿಲ್ಲಿಂಗ್‌ನಲ್ಲಿ ಕೆಲ ಡಿಸ್ಕೌಂಟ್ ನೀಡಿದೆ. AB PM-JAY ಹಿರಿಯ ನಾಗರೀಕರಿ ವಿಮಾ ಸೌಲಭ್ಯ ಇನ್ನೂ ಜಾರಿಯಾಗಿಲ್ಲ. ಹೀಗಾಗಿ ರೋಗಿಗೆ ಆಯುಷ್ಮಾನ್ ಕಾರ್ಡ್ ಅಡಿಯಲ್ಲಿ ವಿಮೆ ನೀಡಲು ಸಾಧ್ಯವಾಗಿಲ್ಲ. ಆದರೆ ಶೇಕಡಾ 50 ರಷ್ಟು ಡಿಸ್ಕೌಂಟ್ ನೀಡಿದ್ದೇವೆ ಎಂದ ಕಿದ್ವಾಯಿ ನಿರ್ದೇಶಕ ಡಾ. ರವಿ ಅರ್ಜುನನ್ ಹೇಳಿದ್ದಾರೆ. ಇತ್ತ ಕ್ಯಾನ್ಸರ್ ಅನ್ನೋ ಹೆಸರು ಕೇಳಿದ ಹಿರಿಯ ನಾಗರೀಕರ ತೀವ್ರ ಒತ್ತಡಕ್ಕೆ ಸಿಲುಕಿದ್ದಾರೆ. ಇದರ ಚಿಕಿತ್ಸೆಗೆ ತನ್ನ ಆಯುಷ್ಮಾನ್ ವಿಮೆ ಬಳಕೆಯಾುತ್ತಿಲ್ಲ ಎಂಬುದು ಅರಿತು ಮತ್ತಷ್ಟು ಒತ್ತಡಕ್ಕೆ ಸಿಲುಕಿದ್ದಾರೆ.

15 ದಿನದ ಬಳಿಕ ಮತ್ತೆ ಕಿದ್ವಾಯಿ ಆಸ್ಪತ್ರೆಗೆ ತೆರಳಿ ಕೀಮೋ ಥೆರಪಿ ಚಿಕಿತ್ಸೆ ಆರಂಭಿಸಲು ಕುಟುಂಬಸ್ಥರು ನಿರ್ಧರಿಸಿದ್ದರು. ಇದರ ನಡುವೆ ಈ ಚಿಕಿತ್ಸೆ ಮತ್ತಷ್ಟು ಹಣ ಖರ್ಚಾಗಲಿದೆ. ತನ್ನ ಖಾತೆಯಲ್ಲಿ ಹಣವಿಲ್ಲ, ಆರೋಗ್ಯ ವಿಮೆ ಬಳಸಲು ಸಾಧ್ಯವಾಗುತ್ತಿಲ್ಲ ಎಂದು ತೀವ್ರವಾಗಿ ಆಸ್ವಸ್ಥಗೊಂಡಿದ್ದಾರೆ. ಬಳಿಕ ಇನ್ನೇನು ಕಿಮೋ ಥೆರಪಿ ಚಿಕಿತ್ಸೆ ಮತ್ತೆ ಕಿದ್ವಾಯಿ ಆಸ್ಪತ್ರೆಗೆ ದಾಖಲಾಗುವ ಕೆಲ ದಿನಗಳ ಮೊದಲು ಹಿರಿಯ ನಾಗರೀಕ ಬದುಕು ಅಂತ್ಯಗೊಳಿಸಿದ್ದಾರೆ. 

Bengaluru 72 year old caner patient end life after hospital denies Ayushman insurance

ಈ ಘಟನೆ ಕುರಿತು ಹಿರಿಯ ನಾಗರೀಕರ ಕುಟುಂಬಸ್ಥರು ಪ್ರತಿಕ್ರಿಯೆ ನೀಡಿದ್ದಾರೆ. ಹಿರಿಯ ನಾಗರೀಕರ ಆಯುಷ್ಮಾನ್ ಭಾರತ್ ವಿಮೆ ಸೌಲಭ್ಯದಡಿಯಲ್ಲಿ ಚಿಕಿತ್ಸೆಗೆ ಕೆಲ ಸಮಸ್ಯೆ ಎದುರಾಗಿತ್ತು. ರಾಜ್ಯ ಸರ್ಕಾರದಿಂದ ಈ ಕುರಿತು ಆದೇಶ ಇನ್ನೂ ಬಂದಿಲ್ಲ ಎಂದು ಆಸ್ಪತ್ರೆ ತಿಳಿಸಿತ್ತು. ಆದರೆ ನಾವು ಚಿಕಿತ್ಸೆ ಕೊಡಿಸಲು ಸಿದ್ದರಾಗಿದ್ದೆವು. ಶೇಕಡಾ 50 ರಷ್ಟು ರಿಯಾಯಿತಿಯನ್ನು ಆಸ್ಪತ್ರೆ ನೀಡಿತ್ತು. ಕೀಮೋ ಥೆರಪಿಗೂ ನಾವು ಎಲ್ಲಾ ತಯಾರಿ ಮಾಡಿಕೊಂಡಿದ್ದೆವು. ಆಯುಷ್ಮಾನ್ ಕಾರ್ಡ್ ಸೌಲಭ್ಯ ಸಿಗದೆ ಕಾರಣ ಮತ್ತಷ್ಟು ಒತ್ತಡಕ್ಕೆ ಸಿಲುಕಿದ್ದರು. ಸೌಲಭ್ಯ ಸಿಗದೆ ಇರುವುದ ನೇರ ಎಂದು ನಾವು ಹೇಳುತ್ತಿಲ್ಲ. ಆದರೆ ಇದು ಆವರಲ್ಲಿ ಒತ್ತಡ ಹೆಚ್ಚಿಸಿತ್ತು ಎಂದು ಕುಟುಂಬಸ್ಥರು ಹೇಳಿದ್ದಾರೆ. ಹಿರಿಯ ನಾಗರೀಕರ ಆಯುಷ್ಮಾನ್ ಆರೋಗ್ಯ ವಿಮೆ ಜಾರಿ ಸಂಪೂರ್ಣವಾಗಿಲ್ಲ. ಹೀಗಾಗಿ ಕೆಲ ತೊಡಕುಗಳು ಎದುರಾಗಿದೆ ಎಂದು ಆರೋಗ್ಯ ಇಲಾಖೆ ಸ್ಪಷ್ಟಪಡಿಸಿದೆ.

ರಾಜ್ಯದ 4 ಯೋಜನೆಗಳಿಗೆ ಪ್ರಧಾನಿ ಮೋದಿ ಚಾಲನೆ: ಆರೋಗ್ಯ ಭಾಗ್ಯ- ವೈದ್ಯಕೀಯ ಕ್ಷೇತ್ರಕ್ಕೆ ಭಾರಿ ಕೊಡುಗೆ

Latest Videos
Follow Us:
Download App:
  • android
  • ios