ಬೆಂಗಳೂರು(ಜ.  17)  ಸ್ವಚ್ಚ ಹಾಗೂ ಸುಂದರ ಬೆಂಗಳೂರಿಗಾಗಿ ಬಿಡಿಎ  ಹೊಸ ಪ್ಲಾನ್ ಸಿದ್ಧಮಾಡಿದೆ.  ಬೆಂಗಳೂರು ಅಭಿವೃದ್ದಿ ಪ್ರಾಧಿಕಾರದಿಂದ ಬೆಂಗಳೂರಿನಲ್ಲಿ 'ಟ್ರೀ ಪಾರ್ಕ್' ನಿರ್ಮಾಣ ಆಗಲಿದೆ. ಬಿಡಿಎ ವ್ಯಾಪ್ತಿಗೆ ಬರುವ ಎಲ್ಲಾ ಬಡಾವಣೆಯಲ್ಲಿ Tree Park ನಿರ್ಮಾಣ ಮಾಡಲು ನಿರ್ಧಾರ ತೆಗೆದುಕೊಳ್ಳಲಾಗಿದೆ.

Bengaluru Vision 2022 ಅಡಿಯಲ್ಲಿ ಬಿಡಿಎ ಯೋಜನೆ ಕೈಗೆ ಎತ್ತಿಕೊಂಡಿದ ಬೆಂಗಳೂರಿನಾದ್ಯಂತ ಸದ್ಯ ಇರುವ ಪಾರ್ಕ್ ಗಳಿಗಿಂತಲೂ ವಿಭಿನ್ನವಾಗಿರಲಿದೆ ಈ ಟ್ರೀ ಪಾರ್ಕ್ ಪ್ರಾಯೋಗಿಕವಾಗಿ ಅರ್ಕಾವತಿ ಬಡಾವಣೆ ಹಾಗೂ ಕೆಂಪೇಗೌಡ ಬಡಾವಣೆಯಲ್ಲಿ ಮೊದಲ ಟ್ರೀ ಪಾರ್ಕ್ ತಲೆ ಎತ್ತಲಿದೆ.

ದನಗಳ ಹೊಟ್ಟೆಗೆ ಪ್ಲಾಸ್ಟಿಕ್ ವಿಷ

ಕಡಿಮೆ ವೆಚ್ಚದಲ್ಲಿ ದೀರ್ಘಕಾಲಿಕವಾಗಿ ಉಳಿಯುವ ಮರಗಳನ್ನು ನೆಟ್ಟು ಟ್ರೀ ಪಾರ್ಕ್ ನಿರ್ಮಾಣ ಮಾಡಲಾಗುತ್ತದೆ. ಸಾಮಾನ್ಯ ಪಾರ್ಕ್ ಗಳಿಗೆ ಈಗಾಗಲೇ ಕೋಟಿ ಕೋಟಿ ಲೆಕ್ಕದಲ್ಲಿ ನಿರ್ವಹಣಾ ವೆಚ್ಚ ಭರಿಸಲಾಗುತ್ತಿದೆ.  ಆದರೆ ಆರಂಭದ ಒಂದು ವರ್ಷ ಮಾತ್ರ ನಿರ್ವಹಣೆ ಮಾಡಿ ನಂತರ ಅದರಷ್ಟಕ್ಕೇ ಮರಗಳು ಬೆಳೆಯುವಂತೆ ಮಾಡುವುದು ಟ್ರೀ ಪಾರ್ಕ್ ನ ಉದ್ದೇಶ. ನೀರಿನ ಬಳಕೆ, ಕೆಲಸಗಾರರು ಹಾಗೂ ವಿದ್ಯುಚ್ಛಕ್ತಿ ಅತಿ ಕಡಿಮೆ ರೀತಿಯಲ್ಲಿ ಟ್ರೀ ಪಾರ್ಕ್ ಗೆ ಬಳಕೆಯಾಗಲಿದೆ. 

ನಗರದ ತಾಪಮಾನ ಈಗಾಗಲೇ ಕುಸಿದು ಹೋಗುತ್ತಿದೆ ನಿಸರ್ಗದ ಜೊತೆ ಹೊಂದಿಕೊಳ್ಳುವ ಹಾಗೂ ಮನುಷ್ಯ‌ನ ಆರೋಗ್ಯದ ಮೇಲೆ ಉತ್ತಮ ಪರಿಣಾಮ ಬೀರಬಲ್ಲ ಸಸ್ಯಗಳಿಗೆ ಆದ್ಯತೆ  ನೀಡಲಾಗುತ್ತದೆ. ಈಗಾಗಲೇ ಇದಕ್ಕೆ ಬೇಕಾಗಿರುವ ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಂಡಿರುವ BDA ಬಡಾವಣೆ ಸುತ್ತ ಮರಗಳನ್ನು ನೆಟ್ಟು ಹೊರ ವೀಕ್ಷಣೆಗೆ ಮಿನಿ ಫಾರೆಸ್ಟ್ ರೀತಿಯಲ್ಲಿ ಕಾಣಿಸುವಂತೆ ಮಾಡಲಿದೆ.

ಬಿಡಿಎ ಅಧ್ಯಕ್ಷ ವಿಶ್ವನಾಥ್ ನೇತೃತ್ವದಲ್ಲಿ  ತಂಡವೊಂದು ಯೋಜನೆ ಸಿದ್ಧಮಾಡಿದೆ. ಈಗಾಗಲೇ ಟ್ರೀ ಪಾರ್ಕ್ ಯೋಜನೆಯನ್ನು ಕೇಳಿ ಮುಂದಿನ ದಿನಗಳಲ್ಲಿ ರಾಜ್ಯದಲ್ಲೂ ಈ ಯೋಜನೆ ತರೋಣ ಎಂದು ಸಿಎಂ ಯಡಿಯೂರಪ್ಪ ಸಹ ತಿಳಿಸಿದ್ದಾರೆ  ಹಾಗಾಗಿ ಮುಂದಿನ ದಿನಗಳಲ್ಲಿ ರಾಜ್ಯದ ಎಲ್ಲಾ ಪ್ರಾಧಿಕಾರ, ಕಾರ್ಪೋರೇಷನ್ ವ್ಯಾಪ್ತಿಯಲ್ಲಿ ಬರುವ ಬಡಾವಣೆಗಳಲ್ಲಿ ಟ್ರೀ ಪಾರ್ಕ್ ತಲೆ ಎತ್ತಲಿದೆ.ಸಾಮಾನ್ಯವಾಗಿ ಪಾರ್ಕ್ ನಲ್ಲಿ ಇರುವಂತೆ ವಾಕಿಂಗ್ ರೂಟ್, ಸಿಟ್ಟಿಂಗ್ ಏರಿಯಾ ಸೇರಿದ ಎಲ್ಲವೂ Tree Park ಒಳಗೊಳ್ಳಲಿದೆ. ಬಿಡಿಎ ಅಧೀನದಲ್ಲಿರುವ ಬಡಾವಣೆ ಹಾಗೂ ಬಿಡಿಎ ಅನುಮೋದಿತ ಖಾಸಗಿ ಬಡಾವಣೆಗಳಲ್ಲೂ ಟ್ರೀ ಪಾರ್ಕ್ ನಿರ್ಮಾಣಗೊಳ್ಳಲಿದೆ. ಮುಂದಿನ ದಿನಗಳಲ್ಲಿ BMRDA, BBMP ಯೂ ಬೆಂಗಳೂರಿ‌ನಾದ್ಯಂತ ಟ್ರೀ ಪಾರ್ಕ್ ನಿರ್ಮಿಸುವ ಲೆಕ್ಕಾಚಾರ ಇಟ್ಟುಕೊಳ್ಳಲಾಗಿದೆ.